🔥 TRENDING Udhayanidhi Stalin brands actor Vijay... Peak September Power Demand Triggers L... Mohan Yadav blames sea for blocking Ga... Madhya Pradesh govt transfers 137 poli... CJP Founder’s Critique Prompts Dipke’s... વિરમગામના પોપટ ચોકડીમાં ન્યૂ ગણેશ સમિત...
14 Sep 2026
ગુજરાતી मराठी ਪੰਜਾਬੀ বাংলা

ದೇವದುರ್ಗ ಜಾಲಹಳ್ಳಿ ಪುಣ್ಯ ಭೂಮಿಯಲ್ಲಿ ಪುರಾಣ ಪ್ರವಚನ ಮಠಮಾನ್ಯಗಳು ಉಳಿವಿಗೆ ಒತ್ತು ಕರೆಮ್ಮ ಜಿ ನಾಯಕ

✍️ Reporter: MAHAMAD WALI QURESHI 🗓 12 Sep 2026, 09:12 AM 👁 25
Share: 💬 WhatsApp 📘 Facebook 𝕏 Post
ಜಾಲಹಳ್ಳಿಯ ಪುಣ್ಯಭೂಮಿಯಲ್ಲಿ ಪುರಾಣ ಪ್ರವಚನ ಮಠಮಾನ್ಯಗಳ ಉಳಿವಿಗೆ ಒತ್ತು: ಕರೆಮ್ಮ ಜಿ ನಾಯಕ

ನೀಡ್ 24 ನ್ಯೂಸ್

ಜಾಲಹಳ್ಳಿ,ಸೆ.12-ಗ್ರಾಮದ ಪುಣ್ಯಭೂಮಿಯಲ್ಲಿ ಶ್ರೀ ಜಯಶಾಂತಲಿಂಗೇಶ್ವರ ದೇವರು ನೆಲೆಸಿರುವುದು ನಮ್ಮೆಲ್ಲರ ಪುಣ್ಯವಾಗಿದೆ. ಇದೇ ಜಾಲಹಳ್ಳಿ ನೆಲದಲ್ಲಿ ಕಾಶಿ ಜಗದ್ಗುರುಗಳು ಜನಿಸಿರುವುದು ಗ್ರಾಮದ ಆಧ್ಯಾತ್ಮಿಕ ಪರಂಪರೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಶಾಸಕಿ ಕರೇಮ್ಮ ಜಿ. ನಾಯಕ ಹೇಳಿದರು.

ಜಾಲಹಳ್ಳಿಯಲ್ಲಿ ನಡೆದ ಜಗರಾಧ್ಯ ಜಯಶಾಂತಲಿಂಗೇಶ್ವರ ಜಯಂತೋತ್ಸವ ಹಾಗೂ ಜಕ್ಕಲಿ ಅಣ್ಣಯ್ಯ ತಮ್ಮಯ್ಯ ಶರಣರ ಪುರಾಣ ಮಹಾಮಂಗಲೋತ್ಸವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗುರುಗಳ ಆಶೀರ್ವಾದ ಪಡೆದು ನಾನು ಶಾಸಕರಾಗಿ ಜನಸೇವೆ ಮಾಡುವ ಅವಕಾಶ ಪಡೆದಿದ್ದೇನೆ. ದೇವದುರ್ಗ ತಾಲೂಕಿನ ಜನರೇ ನನ್ನ ಪಾಲಿನ ದೇವರು. ಅವರ ಸೇವೆ ಮಾಡುವುದೇ ನನ್ನ ಮುಖ್ಯ ಉದ್ದೇಶವಾಗಿದೆ

ಶ್ರೀ ಜಗದಾರ

ಯಶಾಂತಲಿಂಗೇಶ್ವರ ಜಯಂತ







ಎಂದು ಹೇಳಿದರು.

ಪುರಾಣ ಪ್ರವಚನ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಮನುಷ್ಯನಿಗೆ ಆಧ್ಯಾತ್ಮಿಕ ಜ್ಞಾನ



ನೀಡುವುದರ ಜೊತೆಗೆ ಮಾನಸಿಕ ನೆಮ್ಮದಿಯನ್ನು ಒದಗಿಸುತ್ತವೆ. ಪುರಾಣ ಕಥೆಗಳನ್ನು ಕೇಳುವ ಅವಕಾಶ ದೊರೆಯುವುದಕ್ಕೂ ಪುಣ್ಯ ಮಾಡಿರಬೇಕು ಜಾಲಹಳ್ಳಿಯ ಪುಣ್ಯಭೂಮಿಯಲ್ಲಿ ಪುರಾಣ ಪ್ರವಚನ ಮಠಮಾನ್ಯಗಳ ಉಳಿವಿಗೆ ಒತ್ತು: ಕರೆಮ್ಮ ಜಿ ನಾಯಕ

ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಉತ್ತಮ ಸಂಸ್ಕಾರ ಬೆಳೆಸಲು ಸಹಕಾರಿಯಾಗುತ್ತವೆ ಎಂದರು.

ಪುಣ್ಯಪಾಪದ ಕುರಿತು ಮಾತನಾಡಿದ ಶಾಸಕಿ, ಯಾವುದೇ ಪ್ರತಿಫಲದ ಉದ್ದೇಶದಿಂದ ದಾನ-ಧರ್ಮ ಮಾಡಿದರೆ ಅದರ ನಿಜವಾದ ಸಾರ್ಥಕತೆ ದೊರೆಯುವುದಿಲ್ಲ. ನಿಸ್ವಾರ್ಥ ಮನೋಭಾವದಿಂದ ಮಾಡುವ ಸೇವೆ ಮತ್ತು ದಾನಕ್ಕೆ ಹೆಚ್ಚಿನ ಮಹತ್ವವಿದೆ ಎಂದು ಹೇಳಿದರು. ನಮ್ಮ ನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಮಠಮಾನ್ಯಗಳು ಮಹತ್ವದ ಪಾತ್ರ ವಹಿಸುತ್ತಿವೆ. ಆದ್ದರಿಂದ ಮಠಮಾನ್ಯಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಗುರುಗಳ ಆಶೀರ್ವಾದದಿಂದ ದೇವದುರ್ಗ ತಾಲೂಕಿನ ಜನರ ಸಮಸ್ಯೆಗಳು ಬಗೆಹರಿದು, ತಾಲೂಕು ಅಭಿವೃದ್ಧಿಯತ್ತ ಸಾಗಲಿ ಎಂದು ಆಶಿಸಿದರು. ತಾಲೂಕಿನ ಜನರ ಸುಖ-ಸಮೃದ್ಧಿಗಾಗಿ ಸದಾ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಶಾಸಕಿ ಕರೇಮ್ಮ ಜಿ. ನಾಯಕ ಹೇಳಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ಜಗರಾಧ್ಯ ಜಯಶಾಂತಲಿಂಗೇಶ್ವರ ಮಹಾಸ್ವಾಮಿಗಳು ವಹಿಸಿದ್ದರು, ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹನುಮಂತಿ ರಾಂಪಳ್ಳಿ, ಸಿ ಎಸ್ ಪಾಟೀಲ್‌, ಚಂದ್ರಶೇಖರ ಪಾಟೀಲ ಮಿಯಪೂರ, ಜೆಡಿಎಸ್ ತಾಲೂಕು ಅಧ್ಯಕ್ಷ ಬಸವನಗೌಡ ದೇಸಾಯಿ, ಈರಣ್ಣ ಪಾಣಿ, ಬಸವನಗೌಡ ಪಾಟೀಲ್, ಸಂಗಯ್ಯ ತಾತ, ಮಠದ ಶ್ರೀಗಳು, ಭಕ್ತರು, ವಿವಿಧ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಪುರಾಣ ಪ್ರವಚನವನ್ನು ಭಕ್ತರು ಶ್ರದ್ದಾಭಕ್ತಿಯಿಂದ ಆಲಿಸಿದರು.. ವರದಿ ವಲಿ ಖುರೇಷಿ
📲Get App