🔥 ट्रेंडिंग ગાંધીગ્રામના એસ.કે. ચોક પાસે મનીષ પરમા... ધાંગધ્રા તાલુકા અને શહેર પોલીસ સ્ટેશને... विश्व बैंक टीम ने सिक्किम के ड्जोंगु म... मिज़ोरम के बीजेपी नेताओं ने नितिन नबिन... જૂનાગઢ ક્રાઇમ 브ાન્ચે સાધુ વેશમાં ચોરન... मिज़ोरम छात्र संघ ने एमपीएससी चेयरमैन...
20 नव. 2026•
ગુજરાતી मराठी ਪੰਜਾਬੀ বাংলা
स्थानीय

ಗ್ರಾಮ ಸಂಪರ್ಕ ಕಾರ್ಯಕ್ರಮ: ಗಡಿಭಾಗದ ಜನರಿಗೆ ಸರ್ಕಾರದ ಯೋಜನೆಗಳ ಮಾಹಿತಿ ತಲುಪಿಸುವ ಕಾರ್ಯ ಶ್ಲಾಘನೀಯ: ಮಹಾದೇವ ಗಾಯಕವಾಡ

✍️ रिपोर्टर: Basavaraj pujari 🗓 20 नव. 2026, 10:02 PM 👁 20
शेयर करें: 💬 WhatsApp 📘 Facebook 𝕏 Post

ಜಾನಪದ ಸಂಗೀತದ ಮೂಲಕ ಪಂಚ ಗ್ಯಾರಂಟಿ, ಭಾರತ್ ಜೋಡೋ ಆಶಯಗಳ ಅರಿವು ಕಮಲನಗರ: ಗ್ರಾಮ ಸಂಪರ್ಕ ಕಾರ್ಯಕ್ರಮದ ಮೂಲಕ ಗಡಿಭಾಗದ ಜನರಿಗೆ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳ ಕುರಿತು ಮಾಹಿತಿ ತಲುಪಿಸುವ ಕಾರ್ಯ ಮಹತ್ವದ್

ಗ್ರಾಮ ಸಂಪರ್ಕ ಕಾರ್ಯಕ್ರಮ: ಗಡಿಭಾಗದ ಜನರಿಗೆ ಸರ್ಕಾರದ ಯೋಜನೆಗಳ ಮಾಹಿತಿ ತಲುಪಿಸುವ ಕಾರ್ಯ ಶ್ಲಾಘನೀಯ: ಮಹಾದೇವ ಗಾಯಕವಾಡ
ಜಾನಪದ ಸಂಗೀತದ ಮೂಲಕ ಪಂಚ ಗ್ಯಾರಂಟಿ, ಭಾರತ್ ಜೋಡೋ ಆಶಯಗಳ ಅರಿವು

ಕಮಲನಗರ: ಗ್ರಾಮ ಸಂಪರ್ಕ ಕಾರ್ಯಕ್ರಮದ ಮೂಲಕ ಗಡಿಭಾಗದ ಜನರಿಗೆ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳ ಕುರಿತು ಮಾಹಿತಿ ತಲುಪಿಸುವ ಕಾರ್ಯ ಮಹತ್ವದ್ದಾಗಿದೆ ಎಂದು ಹೊಳೆಸಮುದ್ರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹಾದೇವ ಆರ್. ಗಾಯಕವಾಡ ಹೇಳಿದರು.

2026-27ನೇ ಸಾಲಿನ ಗ್ರಾಮ ಸಂಪರ್ಕ ಕಾರ್ಯಕ್ರಮದಡಿ ಹೊಳೆಸಮುದ್ರ ಗ್ರಾಮ ಪಂಚಾಯಿತಿ ಆವರಣದಲ್ಲಿ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಬೀದರ್‌ನ ನೌಬಾದ್ ವಿಶ್ವ ಕನ್ನಡಿಗರ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಪಂಚ ಗ್ಯಾರಂಟಿ ಮತ್ತು ಭಾರತ್ ಜೋಡೋ ಜನಜಾಗೃತಿ ಜಾನಪದ ಸಂಗೀತ ಕಾರ್ಯಕ್ರಮವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಗಡಿಭಾಗದ ಜನರು ಜಾನಪದ ಕಲಾವಿದರಾದ ಬಕ್ಕಪ್ಪ ದಂಡಿನ, ಯಲ್ಲಾಲಿಂಗ ಹಾಗೂ ಸುವರ್ಣ ಅವರ ಗಾಯನವನ್ನು ಆಲಿಸುವ ಮೂಲಕ ಸರ್ಕಾರದ ಯೋಜನೆಗಳ ಮಾಹಿತಿ ಪಡೆದುಕೊಳ್ಳಬೇಕು. ಜಾನಪದ ಸಂಗೀತ ನಮ್ಮ ಸಂಸ್ಕೃತಿಯ ಬೇರುಗಳಾಗಿದ್ದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅಭಿಮಾನವನ್ನು ಬೆಳೆಸುತ್ತದೆ ಎಂದರು.

ಕಲಾವಿದರು ಜಾನಪದ ಹಾಡುಗಳ ಮೂಲಕ ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ, ಯುವನಿಧಿ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳ ಉದ್ದೇಶ ಹಾಗೂ ಭಾರತ್ ಜೋಡೋ ಅಭಿಯಾನದ ಏಕತೆ, ಭಾವೈಕ್ಯತೆ ಮತ್ತು ಸಾಮಾಜಿಕ ಸಾಮರಸ್ಯದ ಸಂದೇಶವನ್ನು ಜನರಿಗೆ ತಲುಪಿಸಿದರು.

ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನವೆಂಬರ್ ತಿಂಗಳ ಜನಪದ ಮಾಸಪತ್ರಿಕೆಯನ್ನು ವಿಶ್ವ ಕನ್ನಡಿಗರ ಸಂಸ್ಥೆ ನೌಬಾದ್ ಅಧ್ಯಕ್ಷ ಸುಬ್ಬಣ್ಣ ಕರಕನಳ್ಳಿ ಸಾರ್ವಜನಿಕರಿಗೆ ವಿತರಿಸಿದರು. ಆಟೋ ಚಾಲಕ ಜುಬೇರ್ ಪಾಶ್ ಸೇರಿದಂತೆ ಗ್ರಾಮದ ಹಿರಿಯ ನಾಗರಿಕರು ಉಪಸ್ಥಿತರಿದ್ದರು.

ಬಸನಾಳ ಡಿಗ್ಗಿ ಹಾಗೂ ರಾಮಪುರ ಗ್ರಾಮಗಳಲ್ಲಿಯೂ ಕಾರ್ಯಕ್ರಮ ನಡೆಸಲಾಯಿತು. ಮದನೂರು ಮತ್ತು ಖತಗಾಂವ ಗ್ರಾಮಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಡೆಯುತ್ತಿದ್ದ ಸ್ಥಳದಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು. ಖತಗಾಂವದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನಿತಾ ರಾಠೋಡ್ ಅವರು ಹಲಗೆ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕೂಲಿ ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆಯಡಿ ದಿನಗೂಲಿಯನ್ನು ₹500ಕ್ಕೆ ಹೆಚ್ಚಿಸುವಂತೆ ಒತ್ತಾಯಿಸಿದರು.

ಗೃಹಜ್ಯೋತಿ ಯೋಜನೆಯಿಂದ ಮನೆಗಳಿಗೆ ಉಚಿತ ವಿದ್ಯುತ್ ಸೌಲಭ್ಯ, ಗೃಹಲಕ್ಷ್ಮಿ ಯೋಜನೆಯಿಂದ ಮನೆಯ ಯಜಮಾನಿಗೆ ಮಾಸಿಕ ₹2,000 ಆರ್ಥಿಕ ನೆರವು, ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹಾಗೂ ಯುವನಿಧಿಯಿಂದ ವಿದ್ಯಾವಂತ ನಿರುದ್ಯೋಗಿಗಳಿಗೆ ನೆರವು ದೊರೆಯುವ ಕುರಿತು ಕಲಾವಿದರು ಹಾಡುಗಳ ಮೂಲಕ ವಿವರಿಸಿದರು.

ಜಾತಿ ಮತ್ತು ಧರ್ಮದ ಹೆಸರಿನಲ್ಲಿ ನಡೆಯುವ ತಾರತಮ್ಯ ತಡೆದು, ಸಂವಿಧಾನದ ಆಶಯದಂತೆ ಸಮಾನತೆ, ಏಕತೆ ಮತ್ತು ಭಾವೈಕ್ಯತೆಯ ಭಾರತ ನಿರ್ಮಾಣದಲ್ಲಿ ಯುವಕರು ಪ್ರಮುಖ ಪಾತ್ರ ವಹಿಸಬೇಕು. ದೇಶದ ಪ್ರಜ್ಞಾವಂತ ನಾಗರಿಕರಾಗಿ ಅಭಿಮಾನ ಮತ್ತು ಸ್ವಾಭಿಮಾನದಿಂದ ಬದುಕಬೇಕು ಎಂಬ ಸಂದೇಶವನ್ನು ಜಾನಪದ ಕಲಾವಿದರು ಸಾರಿದರು.
📲Get App