🔥 TRENDING बलिया में विद्यालय परिसर में करंट की च... अंतरिक्ष मेले में बच्चों ने देखा सफल र... मुंबई में टेंपो चालक को बाथरूम के पास... पंचकूला शाळेत 8 वर्षाच्या मुलाने 6 वर्... श्रीमाधोपुर के महात्मा गांधी पीजी महाव... 6 AM Shows Return to Tamil Nadu: Can T...
04 Nov 2026•
ગુજરાતી मराठी ਪੰਜਾਬੀ বাংলা

ಸಿರವಾರದ ಮಾಜಿ ಎಪಿಎಂಸಿ ಸದಸ್ಯ ಈಶಪ್ಪ ಹೂಗಾರ ನಿವಾಸಕ್ಕೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ - ಆರೋಗ್ಯ ವಿಚಾರಣೆ

✍️ Reporter: Ningappa 🗓 04 Nov 2026, 03:30 PM 👁 11
Share: 💬 WhatsApp 📘 Facebook 𝕏 Post

ಸಿರವಾರ ಪಟ್ಟಣದ 4ನೇ ವಾರ್ಡ್ ಮಾಜಿ ಎಪಿಎಂಸಿ ನಾಮನಿರ್ದೇಶಿತ ಸದಸ್ಯ ಈಶಪ್ಪ ಹೂಗಾರ ಅವರ ಆರೋಗ್ಯದಲ್ಲಿ ವ್ಯತ್ಯಯ - ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ - ಶೀಘ್ರ ಗುಣಮುಖರಾಗಲಿ ಎಂದು ಹಾರೈಕೆ

ಸಿರವಾರ ಮಾಜಿ ಎಪಿಎಂಸಿ ಸದಸ್ಯರ ನಿವಾಸಕ್ಕೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ

ಸಿರವಾರ: ಪಟ್ಟಣದ 4ನೇ ವಾರ್ಡ್‌ನ ಮಾಜಿ ಎಪಿಎಂಸಿ ನಾಮನಿರ್ದೇಶಿತ ಸದಸ್ಯರಾದ ಈಶಪ್ಪ ಹೂಗಾರ ಅವರ ಆರೋಗ್ಯ ಸರಿಯಿಲ್ಲದಿರುವ ವಿಷಯ ತಿಳಿದ ತಕ್ಷಣ ಅವರ ನಿವಾಸಕ್ಕೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಈ ಸಂದರ್ಭದಲ್ಲಿ ಅವರೊಂದಿಗೆ ಮಾತನಾಡಿ, ನಿಮ್ಮ ಜೊತೆಗೆ ನಾವಿದ್ದೇವೆ. ಯಾವುದೇ ಕಾರಣಕ್ಕೂ ಆರೋಗ್ಯದ ಬಗ್ಗೆ ಆತಂಕಪಡಬೇಡಿ. ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಿ, ಶೀಘ್ರವಾಗಿ ಗುಣಮುಖರಾಗಿ ಎಂದು ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರು, ಮಹಿಳಾ ಘಟಕದ ಅಧ್ಯಕ್ಷರು, ವಿವಿಧ ಘಟಕಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಈಶಪ್ಪ ಹೂಗಾರ ಅವರು ಶೀಘ್ರವಾಗಿ ಗುಣಮುಖರಾಗಿ ಆರೋಗ್ಯವಂತರಾಗಲಿ ಎಂದು ಹಾರೈಸುತ್ತೇನೆ ಎಂದು ಮಾಜಿ ಶಾಸಕರು ತಿಳಿಸಿದರು.
📲Get App