🔥 TRENDING ବାତ୍ୟା ଅର୍ଣ୍ଣବ ଭାଙ୍ଗିଦେଇଛି ଚାଷୀଙ୍କ ମେର... Baitul Youth Doused with Petrol Over R... Let Omar Abdullah resign as Chief Mini... MP CM Announces SI Post and ₹1 Crore A... पश्चिम मध्य रेलवे के प्रमुख मुख्य यांत... कानपुर में 20 दिसंबर को होगा दैनिक जाग...
02 Nov 2026•
ગુજરાતી मराठी ਪੰਜਾਬੀ বাংলা

ದೇವದುರ್ಗದ ನೂತನ ರಕ್ತ ನಿಧಿ ಕೇಂದ್ರಕ್ಕೆ ಸಂಸದ ಕುಮಾರ್ ನಾಯಕ ಭೇಟಿ - ಯುವ ಮಿತ್ರ ವಿಶ್ವನಾಥ್ ಕೋರಿ ಕಾರ್ಯ ಶ್ಲಾಘನೀಯ ಎಂದ ಸಂಸದ

✍️ Reporter: Ningappa 🗓 02 Nov 2026, 11:57 AM 👁 17
Share: 💬 WhatsApp 📘 Facebook 𝕏 Post

ದೇವದುರ್ಗ ನಗರದ ನೂತನ ದೇವದುರ್ಗ ರಕ್ತ ನಿಧಿ ಕೇಂದ್ರಕ್ಕೆ ಸಂಸದ ಕುಮಾರ್ ನಾಯಕ ಭೇಟಿ - ತುರ್ತು ಸಂದರ್ಭದಲ್ಲಿ ರಕ್ತದ ಅಭಾವ ನೀಗಿಸುವ ಕಾರ್ಯಕ್ಕೆ ಮೆಚ್ಚುಗೆ

ದೇವದುರ್ಗ ನಗರದ ನೂತನ ರಕ್ತ ನಿಧಿ ಕೇಂದ್ರಕ್ಕೆ ಸಂಸದ ಕುಮಾರ್ ನಾಯಕ ಭೇಟಿ*

*ದೇವದುರ್ಗ:* ನಗರದಲ್ಲಿ ನೂತನವಾಗಿ ಪ್ರಾರಂಭವಾದ 'ದೇವದುರ್ಗ ರಕ್ತ ನಿಧಿ ಕೇಂದ್ರ'ಕ್ಕೆ ಇಂದು ಸಂಸದ ಕುಮಾರ್ ನಾಯಕ ಅವರು ಭೇಟಿ ನೀಡಿದರು.

ನಂತರ ಮಾತನಾಡಿದ ಅವರು, "ತುರ್ತು ಸಂದರ್ಭಗಳಲ್ಲಿ ಮನುಷ್ಯರಿಗೆ ಅಗತ್ಯವಾಗಿರುವ ರಕ್ತವು ಈ ಪ್ರದೇಶದಲ್ಲಿ ದೊರೆಯುತ್ತಿರಲಿಲ್ಲ. ಈ ಅಭಾವವನ್ನು ನೀಗಿಸಲು ಯುವ ಮಿತ್ರ ವಿಶ್ವನಾಥ್ ಕೋರಿ ಅವರು ಮಾಡಿರುವ ಕಾರ್ಯ ಶ್ಲಾಘನೀಯ" ಎಂದರು.

ರಕ್ತ ನಿಧಿ ಕೇಂದ್ರದಲ್ಲಿರುವ ಎಲ್ಲಾ ಪರಿಕರಗಳನ್ನು ವೀಕ್ಷಿಸಿ ಯುವ ಮಿತ್ರರಿಗೆ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಅವರು ತಮ್ಮನ್ನು ಆತ್ಮೀಯವಾಗಿ ಸನ್ಮಾನಿಸಿ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಪುಸ್ತಕಗಳನ್ನು ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಕೆ. ಶಾಂತಪ್ಪ, ಕಾಂಗ್ರೆಸ್ ಮುಖಂಡರಾದ ಶ್ರೀ ರಾಜಶೇಖರ್ ನಾಯಕ್, ಶ್ರೀ ಜಯಂತರಾವ್ ಪತಂಗೆ, ಶ್ರೀ ಶರಣಗೌಡ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು
📲Get App