ನರಸಿಂಹಗಿರಿಯಲ್ಲಿ ಪಾಂಡುರಂಗ ಸ್ವಾಮಿ ದಿಂಡಿ ಪಾದಯಾತ್ರಿಕರಿಗೆ ಭಕ್ತಿಪೂರ್ವಕ ಆತಿಥ್ಯ
ಭಕ್ತರಿಗೆ ಸೇವೆ ಸಲ್ಲಿಸುವುದು ಪುಣ್ಯದ ಕಾರ್ಯ: ಶೃತಿ ವೆಂಕಟೇಶ್ ಹುಬ್ಬಳ್ಳಿ ಕುಟುಂಬದ ಭಕ್ತಿಭಾವದ ಸ್ವಾಗತ
ಕೂಡ್ಲಿಗಿ: ತಾಲೂಕಿನ ನರಸಿಂಹಗಿರಿ ಗ್ರಾಮದಲ್ಲಿ ಸೋಮವಾರ ಪಾಂಡುರಂಗ ಸ್ವಾಮಿ ದಿಂಡಿ ಪಾದಯಾತ್ರೆಯ ಭಕ್ತರಿಗೆ ಮಾಜಿ ತಾಲೂಕು ಪಂಚಾಯಿತಿ ಸದಸ್ಯರು ಹಾಗೂ ಸಮಾಜ ಸೇವಕರು ಶೃತಿ ವೆಂಕಟೇಶ್ ಹುಬ್ಬಳ್ಳಿ ಅವರ ಕುಟುಂಬದ ವತಿಯಿಂದ ಸೋಮವಾರ ಭಕ್ತಿಪೂರ್ವಕ ಆತಿಥ್ಯ ನೀಡಲಾಯಿತು.
ಪಾಂಡುರಂಗ ಸ್ವಾಮಿಯ ನಾಮಸ್ಮರಣೆ ಹಾಗೂ ಭಜನೆಯೊಂದಿಗೆ ಗ್ರಾಮಕ್ಕೆ ಆಗಮಿಸಿದ ದಿಂಡಿ ಪಾದಯಾತ್ರಿಕರನ್ನು ಶೃತಿ ವೆಂಕಟೇಶ್ ಹುಬ್ಬಳ್ಳಿ ಅವರ ಕುಟುಂಬ ಆತ್ಮೀಯವಾಗಿ ಸ್ವಾಗತಿಸಿ, ಭಕ್ತರಿಗೆ ಸೇವೆ ಸಲ್ಲಿಸಿತು. ಆತಿಥ್ಯ ಸ್ವೀಕರಿಸಿದ ಬಳಿಕ ಪಾದಯಾತ್ರಿಕರು ಭಕ್ತಿಗೀತೆ ಹಾಗೂ ಸ್ವಾಮಿಯ ನಾಮಸ್ಮರಣೆಯೊಂದಿಗೆ ಮುಂದಿನ ಪಯಣಕ್ಕೆ ಸಾಗಿದರು.
ಪಾಂಡುರಂಗ ಸ್ವಾಮಿಯ ಭಕ್ತರಿಗೆ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ತಮ್ಮ ಕುಟುಂಬಕ್ಕೆ ಸಂತೋಷದ ಜೊತೆಗೆ ಪುಣ್ಯದ ಕ್ಷಣವಾಗಿದೆ ಎಂಬ ಭಾವನೆಯೊಂದಿಗೆ ವೆಂಕಟೇಶ್ ಹುಬ್ಬಳ್ಳಿ ಕುಟುಂಬ ಭಕ್ತಿಭಾವದಿಂದ ಪಾದಯಾತ್ರಿಕರನ್ನು ಬರಮಾಡಿಕೊಂಡಿತು.
ಗ್ರಾಮದಲ್ಲಿ ಭಕ್ತಿಮಯ ವಾತಾವರಣ ನಿರ್ಮಾಣವಾಗಿದ್ದು, ದಿಂಡಿ ಪಾದಯಾತ್ರೆಯ ಮೂಲಕ ಭಕ್ತಿ, ಸೇವೆ ಹಾಗೂ ಆತಿಥ್ಯದ ಸಂಪ್ರದಾಯ ಮತ್ತಷ್ಟು ಅನಾವರಣಗೊಂಡಿತು.