🔥 TRENDING சேலம் வெள்ளி கொலுசுகளுக்கு தீபாவளி ஆா்... Ranchi Power Cut: Up to 6-Hour Outage... PM Modi Launches Rs 14,000 Crore Proje... Karnataka Govt Suspends Circular on Ho... Madhya Pradesh HC orders travel allowa... Andhra Pradesh SEC Prepares for 100 Ur...
31 Oct 2026•
ગુજરાતી मराठी ਪੰਜਾਬੀ বাংলা

ಜಾಲಹಳ್ಳಿಯಲ್ಲಿ ದಸರಾ ಹಬ್ಬದ ಪ್ರಯುಕ್ತ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ: ವಿಜಯಪುರ ತಂಡಕ್ಕೆ ಪ್ರಥಮ ಬಹುಮಾನ

✍️ Reporter: Khaja Hussain 🗓 31 Oct 2026, 08:38 AM 👁 44
Share: 💬 WhatsApp 📘 Facebook 𝕏 Post
ಜಾಲಹಳ್ಳಿ | ವಿಶೇಷ ವರದಿ

### ಜಾಲಹಳ್ಳಿಯಲ್ಲಿ ದಸರಾ ಹಬ್ಬದ ಪ್ರಯುಕ್ತ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ: ವಿಜಯಪುರ ತಂಡಕ್ಕೆ ಪ್ರಥಮ ಬಹುಮಾನ

### ಕೊಪ್ಪಳ ತಂಡಕ್ಕೆ ದ್ವಿತೀಯ ಸ್ಥಾನ; ಆತಿಥೇಯ ಶ್ರೀ ದುರ್ಗಾದೇವಿ ಜಾಲಹಳ್ಳಿ ತಂಡಕ್ಕೆ ತೃತೀಯ ಸ್ಥಾನ

ಜಾಲಹಳ್ಳಿ, ಅ. 29: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ದಸರಾ ಹಬ್ಬದ ಪ್ರಯುಕ್ತ ಶ್ರೀ ದುರ್ಗಾದೇವಿ ಕಮಿಟಿ ವತಿಯಿಂದ ಆಯೋಜಿಸಿದ್ದ ಎರಡನೇ ವರ್ಷದ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಅ. 29ರಂದು ಯಶಸ್ವಿಯಾಗಿ ನಡೆಯಿತು.

ಪಂದ್ಯಾವಳಿಯನ್ನು ಶ್ರೀ ಕೊಪ್ರೇಶ್ ರಾವ್ ದೇಸಾಯಿ ಅವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿ ತಮ್ಮ ಕ್ರೀಡಾ ಸಾಮರ್ಥ್ಯ ಪ್ರದರ್ಶಿಸಿದವು.

ರೋಚಕ ಹಣಾಹಣಿಯಿಂದ ಕೂಡಿದ್ದ ಪಂದ್ಯಾವಳಿಯಲ್ಲಿ ವಿಜಯಪುರ ತಂಡ ಪ್ರಥಮ ಸ್ಥಾನ ಪಡೆದು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಕೊಪ್ಪಳ ತಂಡ ದ್ವಿತೀಯ ಸ್ಥಾನ ಗಳಿಸಿದರೆ, ಆತಿಥೇಯ ಶ್ರೀ ದುರ್ಗಾದೇವಿ ಜಾಲಹಳ್ಳಿ ತಂಡ ತೃತೀಯ ಸ್ಥಾನ ಪಡೆದುಕೊಂಡಿತು.

ಐದು ತಂಡಗಳಿಗೆ ನಗದು ಬಹುಮಾನ ವಿತರಣೆ

ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ನಗದು ಬಹುಮಾನ ವಿತರಿಸಲಾಯಿತು. ಪ್ರಥಮ ಬಹುಮಾನ ₹15,000 ಅನ್ನು ಕೊಪ್ರೇಶ್ ರಾವ್ ಧಣಿ ದೇಸಾಯಿ, ದ್ವಿತೀಯ ಬಹುಮಾನ ₹10,000 ಅನ್ನು ಪ್ರತೀಕ್ ಪಾಟೀಲ್ ಜಾಲಹಳ್ಳಿ, ತೃತೀಯ ಬಹುಮಾನ ₹7,500 ಅನ್ನು ಗೋವಿಂದಪ್ಪ ಹಲಗೇರಿ, ಚತುರ್ಥ ಬಹುಮಾನ ₹5,000 ಅನ್ನು ಮುದಗೋಟದ ನಿರಂಜನ್ ವಕೀಲರು ಹಾಗೂ ಪಂಚಮ ಬಹುಮಾನ ₹2,500 ಅನ್ನು ದೇವದುರ್ಗ ಬಿಜೆಪಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ರೆಹಮಾನ್ ಚೌದ್ರಿ ಅವರು ಪ್ರಾಯೋಜಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅಬ್ದುಲ್ ರೆಹಮಾನ್ ಚೌದ್ರಿ ಅವರು, ಗ್ರಾಮೀಣ ಕ್ರೀಡಾಕೂಟಗಳನ್ನು ಇಂದಿನ ದಿನಗಳಲ್ಲಿ ಉಳಿಸಿ ಬೆಳೆಸುವ ಅಗತ್ಯವಿದೆ. ಯುವಕರು ಮೊಬೈಲ್ ಬಳಕೆ ಹಾಗೂ ಪಾನ್ ಮಸಾಲದಂತಹ ದುಶ್ಚಟಗಳಿಂದ ದೂರವಿದ್ದು, ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಶಿವರಾಜ್ ಸಾಹುಕಾರ್ ಪಾಣಿ ಅಧ್ಯಕ್ಷತೆ

ಪಂದ್ಯಾವಳಿಯ ಅಧ್ಯಕ್ಷತೆಯನ್ನು ಶಿವರಾಜ್ ಸಾಹುಕಾರ್ ಪಾಣಿ ವಹಿಸಿದ್ದರು.

ಈ ಸಂದರ್ಭದಲ್ಲಿ ಕೊಪ್ರೇಶ್ ರಾವ್ ದೇಸಾಯಿ, ಶಿವರಾಜ್ ಪಾಣಿ ಸಾಹುಕಾರ್, ಕ್ಲಾಸ್-1 ಗುತ್ತಿಗೆದಾರರು, ರಾಜಾ ವಾಸುದೇವ ನಾಯಕ ವಕೀಲರು, ನಿರಂಜನ್ ವಕೀಲರು, ಅಮರೇಗೌಡ ಪಾಟೀಲ್,ವೀರೇಶ್ ಅರಕೇರಿಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ವಿನೋದ್ ಕುಮಾರ್ ಚಿಕ್ಕಲ್, ಲಿಂಗಪ್ಪ ಎನ್., ಎಂ.ಎಸ್. ಪಾಟೀಲ್, ಯಲ್ಲಪ್ಪ ಗಚ್ಚಿನಮನೆ, ಹುಲುಗಪ್ಪ, ಹನುಮಂತರಾಯ ನೆಲ್ಲಿಂಗಿ, ಮಲ್ಲಿಕಾರ್ಜುನ್ ತಂದೆ ನಾಗಪ್ಪ ಹಡಪದ್, ರಮೇಶ್ ಸಾಲಿ, ವೀರೇಶ್ ಗೌಳಿ, ವೆಂಕಟೇಶ್ ಕಟ್ಟಿಮನಿ, ಸಿದ್ದರಾಮ್, ತಿರುಪತಿ ಹಡಪದ್, ಬಾಲಪ್ಪ ಲಿಂಗದಳ್ಳಿ ಹಾಗೂ ಮಲ್ಲಿಕಾರ್ಜುನ್ ಭಜಂತ್ರಿ ಸೇರಿದಂತೆ ಹಲವು ಗಣ್ಯರು ಮತ್ತು ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.

ವರದಿ: ಖಾಜಾ ಹುಸೇನ್ ಬಾಬಾ, ಪತ್ರಕರ್ತರು, ಜಾಲಹಳ್ಳಿ.
📲Get App