ಅರಕೇರಾದಲ್ಲೇ ಮುಂದುವರಿಸಬೇಕೇ ಅಥವಾ ದೇವದುರ್ಗಕ್ಕೆ ಸೇರಬೇಕೇ? - ಗಾಣದಾಳ ಗ್ರಾಮಗಳ ತಾಲೂಕು ಬದಲಾವಣೆ ಕುರಿತು ನ.7 ರಂದು ಗ್ರಾಮಸಭೆ
ರಾಯಚೂರು ಜಿಲ್ಲೆ ಅರಕೇರಾ ತಾಲೂಕು ಗಾಣದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಭವಿಷ್ಯ ನಿರ್ಧಾರ - ಅರಕೇರಾದಲ್ಲೇ ಇರಬೇಕೆ ಅಥವಾ ದೇವದುರ್ಗ ತಾಲೂಕಿಗೆ ಸೇರಬೇಕೆ ಎಂಬ ಬಗ್ಗೆ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹ - ನ.7 ರಂದು ಬೆಳಿಗ್ಗೆ 11 ಗಂಟೆಗೆ ಗಾಣದಾಳ ಪಂಚಾಯಿತಿ ಕಚೇರಿಯಲ್ಲಿ ಗ್ರಾಮಸಭೆ - ಜಿಲ್ಲಾಧಿಕಾರಿ, ಆಯುಕ್ತರಿಗೆ ಮಾಹಿತಿ ನೀಡಿ ಪತ್ರ ಸಲ್ಲಿಕೆ
ಗಾಣದಾಳ ಗ್ರಾಮಗಳ ತಾಲೂಕು ಬದಲಾವಣೆ ಕುರಿತು ನ.7 ರಂದು ಗ್ರಾಮಸಭೆ - ಗ್ರಾಮಸ್ಥರ ಅಭಿಪ್ರಾಯ ಸಂಗ್ರಹ
ಅರಕೇರಾ: ತಾಲೂಕಿಗೆ ಒಳಪಟ್ಟಿರುವ ಗಾಣದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ದೇವದುರ್ಗ ತಾಲೂಕಿಗೆ ಸೇರ್ಪಡೆಗೊಳಿಸಬೇಕೆ ಅಥವಾ ಅರಕೇರಾ ತಾಲೂಕಿನಲ್ಲೇ ಮುಂದುವರಿಸಬೇಕೆ ಎಂಬ ಕುರಿತು ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಲು ಗ್ರಾಮಸಭೆ ಆಯೋಜಿಸಲಾಗಿದೆ.
ಗಾಣದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರದಾಳ ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಸಲ್ಲಿಸಿದ ಮೇರೆಗೆ ಸರ್ಕಾರ ಗೆಜೆಟ್-2 ನೋಟಿಫಿಕೇಶನ್ ಹೊರಡಿಸಿದೆ. ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರ ಸಭೆಯಲ್ಲಿ ಗ್ರಾಮಸ್ಥರ ಅಭಿಪ್ರಾಯ ಪಡೆಯಲು ನಿರ್ಧರಿಸಲಾಗಿದೆ.
ಅದರಂತೆ ದಿನಾಂಕ 07-11-2026 ರಂದು ಬೆಳಿಗ್ಗೆ 11 ಗಂಟೆಗೆ ಗಾಣದಾಳ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ತಿಳಿಸುವಂತೆ ಕೋರಲಾಗಿದೆ.
ಶಾಂತಿಯುತವಾಗಿ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಲು ಜಿಲ್ಲಾಧಿಕಾರಿಗಳು, ಹಾಗೂ ರಾಯಚೂರು ಸಾಮಾಜಿಕ ಆಯುಕ್ತರಿಗೆ ಸಭೆಯ ಕುರಿತು ಮಾಹಿತಿಗಾಗಿ ಪತ್ರವನ್ನು ಸಲ್ಲಿಸಲಾಗಿದೆ.
ಈ ಕುರಿತು ಜಿಲ್ಲಾಧಿಕಾರಿಗಳು, ಹಾಗೂ ರಾಯಚೂರು ಸಾಮಾಜಿಕ ಆಯುಕ್ತರಿಗೆ ಸಭೆಯ ಕುರಿತು ಮಾಹಿತಿಗಾಗಿ ಪತ್ರವನ್ನು ಸಲ್ಲಿಸಲಾಗಿದೆ.