🔥 TRENDING રસુલપુરમાં પુરુષ ગળાફાંસો ખાધેલી હાલતમ... દિવાળી પહેલા AC, ફ્રીઝ સહિતના ઉપકરણો મ... কোলকাতা નવરાત્રિ ગરબા આયોજન: ફાયર વિભાગની નવી... સુરતમાં પ્રોપર્ટી પર ગેરકાયદે કબજાના બ... Sikkim CM Calls on Youth to Become Ent...
28 Sep 2026•
ગુજરાતી मराठी ਪੰਜਾਬੀ বাংলা
ಸೆ. 29 ರಂದು ಕೇಂದ್ರ ಸಚಿವರ ಮನೆಗೆ ರೈತರೊಂದಿಗೆ  ಪ್ರತಿಭಟನೆ ಮೂಲಕ ಮುತ್ತಿಗೆ: ಚುನ್ನಪ್ಪ ಪೂಜಾರಿ

ಸೆ. 29 ರಂದು ಕೇಂದ್ರ ಸಚಿವರ ಮನೆಗೆ ರೈತರೊಂದಿಗೆ ಪ್ರತಿಭಟನೆ ಮೂಲಕ ಮುತ್ತಿಗೆ: ಚುನ್ನಪ್ಪ ಪೂಜಾರಿ

✍️ Reporter: KALLAPPA MIRJI 🗓 28 Sep 2026, 09:34 PM 👁 7
Share: 💬 WhatsApp 📘 Facebook 𝕏 Post

ಪಟ್ಟಣದ ಹನ್ನೆರಡು ಮಠದ ಸಭಾಭವನದಲ್ಲಿ ಸುದ್ದಿಗೋಷ್ಠಿ ಕರೆದು ಮಾಹಿತಿ ನೀಡಿದರು.

ಕಲಘಟಗಿ: ಪ್ರತಿ ಟನ್ನ ಕಬ್ಬಿಗೆ 5,500 ನಿಗದಿಗೊಳ್ಳಿಸುವದು ಹಾಗೂ ಸ್ವಾಮಿನಾಥನ ವರದಿ ಜಾರಿಗೊಳ್ಳಿಸಲು ಒತ್ತಾಯಿಸಿ ಸೆ. 29 ರಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮನೆಗೆ ಸಾವಿರಾರು ರೈತರೊಂದಿಗೆ ಪ್ರತಿಭಟನೆ ಮೂಲಕ ಮುತ್ತಿಗೆ ಹಾಕಲಾಗುವದು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಚುನ್ನಪ್ಪ ಪೂಜಾರಿ ಹೇಳಿದರು.
ಪಟ್ಟಣದ ಹನ್ನೆರಡು ಮಠದ ಸಭಾಭವನದಲ್ಲಿ ಸುದ್ದಿಗೋಷ್ಠಿ ಕರೆದು ಮಾಹಿತಿ ನೀಡಿದರು.
9 ವರ್ಷಗಳಿಂದ ಎಂಎಸ್ ಪಿ ಧರ ಬದಲಾವಣೆ ಮಾಡದೇ ಇರುವವದರಿಂದ.ರೈತರ ಒಕ್ಕಲುತನದ ಖರ್ಚು 3 ಪಟ್ಟು ಹೆಚ್ಚಾಗಿದೆ. ಎಂಎಸ್ಪಿ ಧರ ಕೇವಲ 30 ರಷ್ಟು ಇದ್ದು 60 ರಷ್ಟು ಹೆಚ್ಚಿಸಬೇಕು. ರೈತರ ಕಬ್ಬು,ಮೆಕ್ಕೆಜೋಳ,ಭತ್ತ ಪಸಲಿನಿಂದ ಎಥೆನಾಲ್ ತಯಾರುಗುತ್ತದೆ. ಸಂಪೂರ್ಣ ಎಥೆನಾಲ್ ಖರೀದಿಸಿ ಕ್ರಮ ಕೈಗೊಂಡು ರೈತರ ಹಿತ ಕಾಪಾಡಬೇಕು ಎಂದರು.
ವಿ. ಬಿ.ರಾಮ್ ಜೀ ಕಾಮಗಾರಿ ಸಂಪೂರ್ಣ ಕೃಷಿ ಚಟುವಟಿಕೆಗೆ ಅಳವಡಿಸಬೇಕು. ಬರಗಾಲದ ಪರಿಸ್ಥಿತಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು 50 ಸಾವಿರ ಬರ ಪರಿಹಾರ, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಒತ್ತಾಯ ಮಾಡಲಾಗುವುದು ಎಂದರು.
ಇದು ದೇಶದ ರೈತರ ಹೋರಾಟವಾಗಿದ್ದು 30 ಜಿಲ್ಲೆಗಳಿಂದ ಸಾವಿರಾರು ರೈತರು ಆಗಮಿಸಲಿದ್ದಾರೆ. ವಿವಿಧ ರಾಜ್ಯಗಳಿಂದ ರೈತ ಮುಖಂಡರು ಪ್ರತಿಭಟನೆಗೆ ಬರಲಿದ್ದಾರೆ.ಸ್ವಾಮಿನಾಥನ ವರದಿ ಹಾಗೂ ಕಬ್ಬಿಗೆ ಎಂಎಸ್ಪಿ ಜಾರಿ ಆಗುವವರಿಗೆ ನಮ್ಮ ಚಳುವಳಿ ನಿಲ್ಲುವುದಿಲ್ಲ ಎಂದರು.
ಜಿಲ್ಲೆಯ ಎಲ್ಲ ರೈತರು ಪಕ್ಷಾತೀತವಾಗಿ ಹೋರಾಟಕ್ಕೆ ಬಂದು ಬೆಂಬಲಿಸಲು ಕರೆ ನೀಡಿದರು.
ರೈತ ಮುಖಂಡರಾದ ನಾಗೇಶ್ ಇಟಗಿ, ಕಿಶನ್ ನಂದಿ, ಕುಮಾರ ಬಾಬಜಿ, ವಿಜಯ ಬೆಣ್ಣೆ, ಪ್ರಕಾಶ ನಾಯಕ, ಸಿದ್ದು ಬೆಣ್ಣೆ, ಜ್ಯೋತಿಬಾ ಹುಲಕೊಪ್ಪ, ಮಂಜುನಾಥ ಹೊಸಮನಿ ಹಾಗೂ ರೈತರು ಇದ್ದರು.
📲Get App