🔥 TRENDING ਮਜ਼ਦੂਰ ਕਾ ਸਾਥ ਸੰਸਥਾ ਵੱਲੋਂ ਦਿਵਾਲੀ ਅਤੇ ਬ... Maharashtra grants age relaxation, pro... Yastika Bhatia Faces Backlash After WB... Former India cricketer backs Anshul Ka... Manu Bhaker, Suruchi Inder Singh finis... IMD Alerts 15 States to Heavy Rain, St...
06 Nov 2026•
ગુજરાતી मराठी ਪੰਜਾਬੀ বাংলা

ದೇವದುರ್ಗದಲ್ಲಿ ₹4.13 ಕೋಟಿ ವೆಚ್ಚದಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆ ನಿರ್ಮಾಣಕ್ಕೆ ಭೂಮಿಪೂಜೆಶಿಕ್ಷಣ ಕ್ಷೇತ್ರಕ್ಕೆ ತಮ್ಮ ಶಾಸಕತ್ವದ ಅವಧಿಯಲ್ಲಿ ₹100 ಕೋಟಿಗೂ ಅಧಿಕ ಅನುದಾನ ಬಳಕೆ: ಶಾಸಕಿ ಕರೆಮ್ಮ ಜಿ. ನಾಯಕ

✍️ Reporter: Khaja Hussain 🗓 03 Nov 2026, 10:27 AM 👁 53
Share: 💬 WhatsApp 📘 Facebook 𝕏 Post
**ದೇವದುರ್ಗ | ಬ್ರೇಕಿಂಗ್ ನ್ಯೂಸ್**

# ದೇವದುರ್ಗದಲ್ಲಿ ₹4.13 ಕೋಟಿ ವೆಚ್ಚದಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆ ನಿರ್ಮಾಣಕ್ಕೆ ಭೂಮಿಪೂಜೆ

### ಶಿಕ್ಷಣ ಕ್ಷೇತ್ರಕ್ಕೆ ತಮ್ಮ ಶಾಸಕತ್ವದ ಅವಧಿಯಲ್ಲಿ ₹100 ಕೋಟಿಗೂ ಅಧಿಕ ಅನುದಾನ ಬಳಕೆ: ಶಾಸಕಿ ಕರೆಮ್ಮ ಜಿ. ನಾಯಕ

**ದೇವದುರ್ಗ, ನ. 2:** ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದ ಶಂಕರಬಂಡಿ ರಸ್ತೆಯಲ್ಲಿರುವ ಪುರಸಭೆಯ ಸಿಎ ನಿವೇಶನದಲ್ಲಿ ₹4.13 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮೌಲಾನಾ ಆಜಾದ್ ಮಾದರಿ ಶಾಲೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಕರೆಮ್ಮ ಜಿ. ನಾಯಕ ಅವರು ಭೂಮಿಪೂಜೆ ನೆರವೇರಿಸಿದರು.

ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ಅನುಮೋದನೆಯೊಂದಿಗೆ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು. ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದ್ದು, ಈಗಾಗಲೇ ಶಾಲೆಯಲ್ಲಿ 260ಕ್ಕೂ ಹೆಚ್ಚು ಮಕ್ಕಳು ದಾಖಲಾತಿ ಪಡೆದಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ಕರೆಮ್ಮ ಜಿ. ನಾಯಕ ಅವರು, ತಮ್ಮ ಶಾಸಕತ್ವದ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಾಗಿ ₹100 ಕೋಟಿಗೂ ಅಧಿಕ ಅನುದಾನವನ್ನು ಬಳಸಲಾಗಿದೆ. ಶಾಲಾ-ಕಾಲೇಜುಗಳ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಗ್ರಾಮೀಣ ಭಾಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಬಾಕ್ಸ್ ನಲ್ಲಿ

**ತಾಲೂಕಿಗೆ ನಾಲ್ಕು ಮೌಲಾನಾ ಆಜಾದ್ ಶಾಲೆಗಳು ಮಂಜೂರು**

ದೇವದುರ್ಗ ತಾಲೂಕಿಗೆ ಒಟ್ಟು ನಾಲ್ಕು ಮೌಲಾನಾ ಆಜಾದ್ ಮಾದರಿ ಶಾಲೆಗಳು ಮಂಜೂರಾಗಿದ್ದು, ದೇವದುರ್ಗ, ಗಬ್ಬೂರು, ಅರಕೇರ ಹಾಗೂ ಜಾಲಹಳ್ಳಿ ಪಟ್ಟಣಗಳಲ್ಲಿ ಶಾಲಾ ಕಟ್ಟಡಗಳನ್ನು ನಿರ್ಮಿಸಲಾಗುವುದು ಎಂದು ಶಾಸಕಿ ಮಾಹಿತಿ ನೀಡಿದರು.

ಇದಲ್ಲದೆ, ಹೂವಿನಹೆಡಗಿ ಬ್ರಿಡ್ಜ್‌ ಬಳಿ ಹದಗೆಟ್ಟ ರಸ್ತೆಯ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಯಿಂದ ₹2.50 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ತಾಲೂಕಿಗೆ ಒಂದು ಎಂ.ಡಿ.ಆರ್.ಎಸ್. ವಸತಿ ಶಾಲೆಯೂ ಮಂಜೂರಾಗಿದ್ದು, ಗೋವಿಂದಪಲ್ಲಿ ಗ್ರಾಮದಲ್ಲಿ ಕನಿಷ್ಠ 11 ಎಕರೆ ಜಮೀನನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

**ಕಾರ್ಯಕ್ರಮದಲ್ಲಿ ಉಪಸ್ಥಿತಿ:**

ಈ ಸಂದರ್ಭದಲ್ಲಿ ಹಜರತ್ ಜಹಿರುದ್ದಿನ್ ಪಾಶ ದರ್ಗಾದ ಹಜರತ್ ಜಹಿರ್ ಪಾಶ ಖಾದ್ರಿ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಶರಣಪ್ಪ ಬಳಿ, ಉಪಾಧ್ಯಕ್ಷ ಇಸಾಕ್ ಮೇಸ್ತ್ರಿ, ತಾಲೂಕು ಜೆಡಿಎಸ್ ಅಧ್ಯಕ್ಷ ಬಸನಗೌಡ ದೇಸಾಯಿ ವಕೀಲರು, ಮಾಜಿ ಪುರಸಭೆ ಸದಸ್ಯೆ ತಬಸಮ್ ಉದ್ದಾರ್, ಅಲ್ಪಸಂಖ್ಯಾತರ ಅರಕೇರ ಬ್ಲಾಕ್ ಅಧ್ಯಕ್ಷ ಮಹೇಬೂಬ್ ಯಗ್ಗಡದಿನ್ನಿ, ಅಯೂಬ್ ಖಾನ್, ತಾಲೂಕು ಜೆಡಿಎಸ್ ವಿದ್ಯಾರ್ಥಿ ಘಟಕದ ಅಧ್ಯಕ್ಷ ಕಾಸಿಮ್ ಬುವಾಜಿ, ಜೆಡಿಎಸ್ ನಗರ ಘಟಕದ ಉಪಾಧ್ಯಕ್ಷ ಜಹಿರುದ್ದಿನ್, ತಾಲೂಕು ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮಹಿಬೂಬ್ ಬುವಾಜಿ (ಗೌರಂಪೇಟೆ), ಬಂದೇನವಾಜ್ ಬುವಾಜಿ, ಕಾಸಿಮ್ ಸಾಬ್, ಟಿ. ಜಾಕಿರ್ ಹುಸೇನ್, ಮೊಯಿನುದ್ದಿನ್ ಎಲೆಕ್ಟ್ರಿಕಲ್, ಬುವಾಜಿ ಸೊಸೈಟಿ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಶ್ರೀನಿವಾಸ್, ಮೌಲಾನಾ ಆಜಾದ್ ಶಾಲೆಯ ಮುಖ್ಯಗುರು ನಾಗರಾಜ್ ಸೇರಿದಂತೆ ವಿವಿಧ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App