🔥 TRENDING Aryan Khan's Breakdown During NCB Prob... Two Young Men Die in Separate Well-Dro... Winter Fog Disrupts Rail Travel in Bih... Bhopal to Experience Power Outage on N... Bihar Agriculture Department Announces... Shiv Sena’s Sanjay Raut warns NCP, SP...
28 Nov 2026•
ગુજરાતી मराठी ਪੰਜਾਬੀ বাংলা
National

ಜಾನಪದ ಸಾಹಿತ್ಯ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಔಷದವಾಗಿದೆ,- ವಿಜಕುಮಾರ ಸೋನಾರೆ,

✍️ Reporter: Basavaraj pujari 🗓 28 Nov 2026, 02:41 PM 👁 27
Share: 💬 WhatsApp 📘 Facebook 𝕏 Post

ಬೀದರ: ನಗರದ ಯಾತ್ರಿ ಸಭಾಂಗದಲ್ಲಿ ಸಂವಿಧಾನ ಅಂಗಿಕಾರ ದಿನದ ಪ್ರಯುಕ್ತ ಶ್ರೀ ವಹಾ ಮಲ್ಲಿನಾಥ ಗುರುಜಿ ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಸಂಸ್ಥೆ ಬೀದರ ಇವರು ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ತಮಟೆ ಭಾರಿಸಿ ಹಾಡುವುದರ ಮ

ಜಾನಪದ ಸಾಹಿತ್ಯ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಔಷದವಾಗಿದೆ,- ವಿಜಕುಮಾರ ಸೋನಾರೆ,



ಬೀದರ: ನಗರದ ಯಾತ್ರಿ ಸಭಾಂಗದಲ್ಲಿ ಸಂವಿಧಾನ ಅಂಗಿಕಾರ ದಿನದ ಪ್ರಯುಕ್ತ ಶ್ರೀ ವಹಾ ಮಲ್ಲಿನಾಥ ಗುರುಜಿ ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಸಂಸ್ಥೆ ಬೀದರ ಇವರು ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ತಮಟೆ ಭಾರಿಸಿ ಹಾಡುವುದರ ಮೂಲಕ ಉದ್ಘಾಟಿಸಿ ಕರ್ನಾಟಕ ಜಾನಪದ ಆಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ಮಾತನಾಡಿದರು. ಜಾನಪದ ಎಂದರೆ ಜನರ ಬಾಯಲ್ಲಿ ಹುಟ್ಟುವ ಹಾಡು ಅಜ್ಜಿ ಹೇಳಿದ ಕಥೆ ಹಾಡು ತಾಯಿಯ ಲಾಲಿಹಾಡು ಹೊಲದಲ್ಲಿ ರೈತನ ಹಾಡು ಕೂಲಿ ಕಾರ್ಮಿಕನ ಹಾಡು ದನ ಕಾಯುವವನ ಹಾಡು, ಗ್ರಾಮಗಳಲ್ಲಿ ನಡೆಯುವ ಜಾತ್ರೆ ಉತ್ಸವಗಳಲ್ಲಿ ಹಾಡುವ ಹಾಡು ಶೋಭಾನ ಪದ ತತ್ವಪದ ಭಜನೆ ಲಾವಣಿ, ಕೋಲಾಟ ಡೊಳ್ಳು ಕುಣಿತ, ಜಾನಪದ ಉಳಿದರೆ ಮಾತ್ರ ನಮ್ಮ ಗ್ರಾಮ ಸಂಸ್ಕೃತಿ ಉಳಿದು ಬೆಳೆಯುತ್ತದೆ. ಆರೋಗ್ಯವಂತ ಸಮಾಜ ನಿರ್ಮಾಣ ಮಾಡುತ್ತದೆ. ಅಧ್ಯಕ್ಷತೆ, ಸಂಸ್ಥೆ ಅಧ್ಯಕ್ಷರಾದ ಅವಿನಾಶ ರಾಯ್ ವಹಿಸಿದರು, ಕರ್ನಾಟಕ ಜಾನಪದ ಆಕಾಡೆಮಿ 2026 ಪ್ರಶಸ್ತಿ ಪುರಸ್ಕೃತರಾದ ದೇವದಾಸ ಚಿಮಕೊಡೆ ತಂಡದವರು ಜಾನಪದ ಹಾಡುಗಳುನ್ನು ಹಾಡಿದರು. ಮುಖ್ಯ ಅತಿಥಿಗಳಾಗಿ, ಬಸವರಾಜ ಜಡಗೆ, ಶಿವರಾಜ ತಡಪಳ್ಳಿ, ಉದಯ ನಾಯಕ ಉಪಸ್ಥಿತರಿದ್ದರು. ಧಮ್ಮದೀಪ ಜಾನಪದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಅನುಷಾಯ ತಂಡದವರು ಭಜನೆ ಹಾಡುಗಳು, ಶಂಕ್ರಮ್ಮ ತಂಡದವರು ಆರೋಗ್ಯವೆ ಭಾಗ್ಯ ಎನ್ನುವ ಹಾಡುಗಳು ಹಾಡಿದರು. ಕಾರ್ಯಕ್ರಮಕ್ಕೆ ಸ್ವಾಗತ ಪ್ರಸ್ತಾವಿಕ ನುಡಿ ಸಾಹಿತಿ ಸುಬ್ಬಣ್ಣ ಕರಕನಳ್ಳಿ ಮಾಡಿದರು. ಕಲಾವಿದರಿಗೆ ಗೌರವಿಸಿ ಸನ್ಮಾನ ಪ್ರಮಾಣ ಪತ್ರವನ್ನು ನೀಡಲಾಯಿತು.
📲Get App