🔥 TRENDING ಸೆಂಚುರಿಯನ್‌ನಲ್ಲಿ ದಕ್ಷಿಣ ಆಫ್ರಿಕಾ vs ಬಾಂ... ಏಷ್ಯನ್ ಮಹಿಳಾ ಹಾಕಿ ತಂಡಗಳ ಗುಣಮಟ್ಟ ಕುಸಿತ:... ಸ್ಯಾಂಡ್‌ಪೇಪರ್ ಗೇಟ್ ವಿವಾದ: ಡ್ಯಾರೆನ್ ಲೆಹ... ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ಮಹಿಳಾ ಕ... ବଢ଼ୁଛି ସୁଶାନ୍ତ ନାଥଙ୍କ ଅଡ଼ୁଆ: ସୁପ୍ରିମକୋର୍... ରେଷ୍ଟୁରାଣ୍ଟରେ ଓଡ଼ିଆ ଟେଲି ଅଭିନେତ୍ରୀଙ୍କୁ...
24 Nov 2026•
ગુજરાતી मराठी ਪੰਜਾਬੀ বাংলা

ಸಾಹಿತ್ಯ ಕ್ಷೇತ್ರದಲ್ಲಿ ಡಾ. ಎಂ.ಜಿ. ದೇಶಪಾಂಡೆ ಅವರಿಗೆ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ

✍️ Reporter: Basavaraj pujari 🗓 24 Nov 2026, 01:33 PM 👁 23
Share: 💬 WhatsApp 📘 Facebook 𝕏 Post

ಬೀದರ್: ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಬೀದರ್ ಜಿಲ್ಲೆಯ ಖ್ಯಾತ ಸಾಹಿತಿ ಡಾ. ಎಂ.ಜಿ. ದೇಶಪಾಂಡೆ ಅವರಿಗೆ ಬೆಂಗಳೂರಿನ ಕಲಾಭೂಮಿ ಪ್ರತಿಷ್ಠಾನ ವತಿಯಿಂದ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಸಾಹಿತ್ಯ ಕ್ಷೇತ್ರದಲ್ಲಿ ಡಾ. ಎಂ.ಜಿ. ದೇಶಪಾಂಡೆ ಅವರಿಗೆ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ
ಬೀದರ್: ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಬೀದರ್ ಜಿಲ್ಲೆಯ ಖ್ಯಾತ ಸಾಹಿತಿ ಡಾ. ಎಂ.ಜಿ. ದೇಶಪಾಂಡೆ ಅವರಿಗೆ ಬೆಂಗಳೂರಿನ ಕಲಾಭೂಮಿ ಪ್ರತಿಷ್ಠಾನ ವತಿಯಿಂದ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಇತ್ತೀಚೆಗೆ ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಕಲಾಭೂಮಿ ಪ್ರತಿಷ್ಠಾನ ಆಯೋಜಿಸಿದ್ದ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ವಿಜೃಂಭಣೆಯಿಂದ ನಡೆಯಿತು. ಕನ್ನಡ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರು, ಸಮಾಜ ಸೇವಕರು ಹಾಗೂ ಪ್ರತಿಭಾನ್ವಿತರಿಗೆ ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ನೀಡಲಾಗುವ ಈ ಪ್ರಶಸ್ತಿಯನ್ನು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಡಾ. ಎಂ.ಜಿ. ದೇಶಪಾಂಡೆ ಅವರಿಗೆ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಮಾಜಿ ನಿರ್ಮಾಪಕ ಭಾ.ಮ. ಹರೀಶ, ಹಿರಿಯ ನಟ ಗಣೇಶರಾವ್ ಕೇಸರ್ಕರ್, ಚಲನಚಿತ್ರ ನಿರ್ದೇಶಕ ಸಾಯಿ ರಾಮ್, ನಟಿ ಚೈತ್ರ ಕೊಟೂರು, ನಟ ಆಸ್ಕರ್ ಕೃಷ್ಣ, ಬಿ.ಸಿ. ವೆಂಕಟೇಶಮೂರ್ತಿ, ಡಾ. ಸಿರಿಗೆರೆ ತಿಪ್ಪೇಶ, ಶ್ರೀಧರ ಕುಪ್ಪೂರ್, ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಆರ್.ಜೆ.ಡಿ.ಎಸ್. ಮುಖಂಡೆ ವಿಜಯಲಕ್ಷ್ಮಿ ಗೌಡ, ಹಿರಿಯ ನಿರ್ಮಾಪಕ ಬಿ. ಮಹಾದೇವ (ಚಿಂಗಾರಿ) ಸೇರಿದಂತೆ ಹಲವಾರು ನಟ-ನಟಿಯರು ಹಾಗೂ ರಾಜಕೀಯ ಮುಖಂಡರು ಉಪಸ್ಥಿತರಿದ್ದರು.

ಡಾ. ಎಂ.ಜಿ. ದೇಶಪಾಂಡೆ ಅವರಿಗೆ ಪ್ರಶಸ್ತಿ ಲಭಿಸಿರುವುದಕ್ಕೆ ಬೀದರ್ ಜಿಲ್ಲೆಯ ಸಾಹಿತ್ಯ ವೃಂದದ ಅರವಿಂದ ಕುಲಕರ್ಣಿ, ಕಿರಣ ಮಹಾರಾಜ್, ಬಾಬುರಾವ್ ಗೊಂಡ, ಡಾ. ನಿಜಲಿಂಗ ರಗಟೆ, ವೀರಶೆಟ್ಟಿ ಪಾಟೀಲ (ಬಸವಕಲ್ಯಾಣ), ನಾಗಶೆಟ್ಟಿ ಪಾಟೀಲ ಗಾದಗಿ, ಮಾಣಿಕ ನೇಳ್ಗೆ, ಶಿವಕುಮಾರ್ ನಾಗವಾರ, ಡಾ. ಸುಜಾತಾ ಹೊಸಮನಿ, ಧನಲಕ್ಷ್ಮಿ ಪಾಟೀಲ, ಡಾ. ಶ್ರೇಯಾ ಮಹೇಂದ್ರಕರ್, ಡಾ. ರಘುಶಂಖ ಭಾತಂಬ್ರಾ, ಯೋಗೇಂದ್ರ ಯದಲಾಪೂರೆ, ವಿಶ್ವನಾಥ ತೇಗಂಪುರೆ, ಪ್ರಕಾಶ ಕುಲಕರ್ಣಿ ಮುಗನೂರ್, ಓಂಕಾರ ಪಾಟೀಲ, ನಾಗೇಶ್ ಸ್ವಾಮಿ, ಡಾ. ಜಗದೇವಿ ತಿಬಶೆಟ್ಟಿ, ಮಲ್ಲಿಕಾರ್ಜುನ ಹುಲಸೂರೆ, ವಿಶ್ವನಾಥ ಮುಕ್ತಾ, ನಾಗಪ್ಪ ನಿಣ್ಣೆ ಸೇರಿದಂತೆ ಹಲವರು ಅಭಿನಂದಿಸಿದ್ದಾರೆ.
📲Get App