🔥 ट्रेंडिंग जमवारामगढ़ के सरजोली गांव में बकरियों... ਜਲੰਧਰ, ਕਾਲੀਆ ਕਾਲੋਨੀ ਫੇਜ਼ 1 ਵਿੱਚ ਗੰਦੀਆਂ... তিনটি বকরের ঘটনা ਜਲੰਧਰ ਦੇ ਕਾਲੀਆ ਕਾਲੋਨੀ ਫੇਜ਼ 1 ਵਿੱਚ ਗਾਂਵ... त्रिपुरा चुनाव आयोग ने मतदान केंद्रों... हिमाचल प्रदेश ने उद्योगों में 80% स्था...
23 नव. 2026•
ગુજરાતી मराठी ਪੰਜਾਬੀ বাংলা

ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ - ರವಿ ಹಂಜ್ ವಿರುದ್ಧ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿಗಳಿಗೆ ಮನವಿ - ಜಾಲಹಳ್ಳಿ ಉಪ ತಹಶೀಲ್ದಾರ್ ಮುಖಾಂತರ ಬಸವ ಸಮಿತಿ ಜಾಲಹಳ್ಳಿಯಿಂದ ಮನವಿ ಪತ್ರ ಸಲ್ಲಿಕೆ - ಬಸವ ಮಂಟಪ ಕೃತಿ ಮುಟ್ಟುಗೋಲು, ಸುಮೋಟೋ ಕೇಸ್‌ಗೆ ಆಗ್ರಹ

✍️ रिपोर्टर: Ningappa 🗓 23 नव. 2026, 03:22 PM 👁 18
शेयर करें: 💬 WhatsApp 📘 Facebook 𝕏 Post

ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ - ರವಿ ಹಂಜ್ ವಿರುದ್ಧ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿಗಳಿಗೆ ಮನವಿ - ಜಾಲಹಳ್ಳಿ ಉಪ ತಹಶೀಲ್ದಾರ್ ಮುಖಾಂತರ ಬಸವ ಸಮಿತಿ ಜಾಲಹಳ್ಳಿಯಿಂದ ಮನವಿ ಪತ್ರ ಸಲ್ಲಿಕೆ - ಬಸವ ಮಂಟಪ ಕೃತಿ ಮುಟ್ಟುಗೋಲು, ಸುಮೋಟೋ ಕೇಸ್ ದಾಖಲಿಸಿ ಶಿಕ್ಷೆಗೆ ಒಳಪಡಿಸಲು ಆಗ್ರಹ - ಚಂದ್ರಶೇಖರ ನಾಡಗೌಡ ನೇತೃತ್ವದಲ್ಲಿ ಮನವಿ

ರಾಯಚೂರು: ಜಿಲ್ಲೆಯ ದೇವದುರ್ಗ ತಾಲುಕಿನ ಜಾಲಹಳ್ಳಿ ಬಸವ ಸಮಿತಿ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ರಾಜ್ಯ ಸರ್ಕಾರ, ಬೆಂಗಳೂರು ಇವರಿಗೆ ಬಸವಣ್ಣ ಅವರಿಗೆ ಅವಮಾನ ಮಾಡಿರುವ ರವಿ ಹಂಜ್ ಮೇಲೆ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ಜಾಲಹಳ್ಳಿ ಉಪ ತಹಶೀಲ್ದಾರ್ ಮುಖಾಂತರ ಮನವಿ ಪತ್ರ ಸಲ್ಲಿಸಲಾಯಿತು.

ನಂತರ ಬಸವ ಸಮಿತಿ ಸಂಚಾಲಕ ಚಂದ್ರಶೇಖರ ನಾಡಗೌಡ ಮಾತನಾಡಿ, ರಾಜ್ಯದ ಸಾಂಸ್ಕೃತಿಕ ನಾಯಕ, ಸಮಾನತೆಯ ಹರಿಕಾರ, ಜಗಜ್ಯೋತಿ ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಅನಿವಾಸಿ ಭಾರತೀಯ ಲೇಖಕ ರವಿ ಹಂಜ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

12ನೇ ಶತಮಾನದಲ್ಲಿ ಸಾಮಾಜಿಕ ಸಮಾನತೆ, ಮಾನವೀಯ ಮೌಲ್ಯಗಳು ಹಾಗೂ ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಬಸವಣ್ಣನವರ ಕುರಿತು ರವಿ ಹಂಜ್ ನೀಡಿರುವ ಹೇಳಿಕೆಗಳು ಬಸವ ಅನುಯಾಯಿಗಳ ಭಾವನೆಗಳಿಗೆ ನೋವುಂಟು ಮಾಡಿದೆ.

ವಚನಗಳನ್ನು ಉಲ್ಲೇಖಿಸುವ ನೆಪದಲ್ಲಿ ಅವರ ತತ್ವಾದರ್ಶಗಳನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ. ಬಸವಣ್ಣನವರು ಬಿಜ್ಜಳನ ಬಂಡಾರವನ್ನು ಕದ್ದವರು ಹಾಗೂ ಬಿಜ್ಜಳನ ಹತ್ಯೆಗೆ ಕಾರಣರಾದವರು ಎಂಬ ಅರ್ಥದಲ್ಲಿ ಹೇಳಿಕೆ ನೀಡುವ ಮೂಲಕ ಇತಿಹಾಸವನ್ನು ತಿರುಚುವ ಪ್ರಯತ್ನ ಮಾಡಿದ್ದಾರೆ. ಇಂತಹ ಹೇಳಿಕೆಗಳು ಬಸವಣ್ಣನವರ ವ್ಯಕ್ತಿತ್ವಕ್ಕೆ, ಗೌರವಕ್ಕೆ ಕಳಂಕ ತರುತ್ತವೆ.

ಬಸವಣ್ಣನವರು ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಾದವರಲ್ಲ. ಅವರ ಸಮಾನತೆ ಕಾಯಕ ಹಾಗೂ ದಾಸೋಹದ ಸಂದೇಶಗಳು ಇಡೀ ಮನುಕುಲಕ್ಕೆ ಮಾರ್ಗದರ್ಶಿಯಾಗಿವೆ. ರಾಜ್ಯ ಸರ್ಕಾರವೇ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ಸಂದರ್ಭದಲ್ಲಿ ಅವರ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದು ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಎರಡು ವರ್ಷಗಳಿಂದ ರವಿ ಹಂಜ್ ಅವರು ಬಸವಣ್ಣನವರ ಕುರಿತು ವಿವಾದಾತ್ಮಕ ವಿಷಯಗಳನ್ನು ಒಳಗೊಂಡ ಅಂಕಣಗಳನ್ನು ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದರು. ಈಗ ಅವುಗಳನ್ನು ಬಸವ ಮಂಟಪ ಎಂಬ ಕೃತಿಯ ರೂಪದಲ್ಲಿ ಹೊರ ತಂದಿದ್ದಾರೆ. ಅಲ್ಲದೆ ಯೂಟ್ಯೂಬ್ ಚಾನಲ್ ಒಂದರಲ್ಲಿ ಮಾತನಾಡುವ ಸಂದರ್ಭದಲ್ಲಿ ಲಿಂಗಾಯತ ಸಮುದಾಯವನ್ನು ಲಿಂಗ ಹತರು ಎಂದು ಸಂಬೋಧಿಸುವ ಮೂಲಕ ಸಮುದಾಯದ ಭಾವನೆಗಳಿಗೆ ದಕ್ಕೆ ತಂದಿದ್ದಾರೆ.

12ನೇ ಶತಮಾನದಲ್ಲಿಯೇ ಕ್ರಾಂತಿಕಾರಿ ಬದಲಾವಣೆಗೆ ಕಾರಣರಾಗಿರುವ ಮಹಾ ಮಾನವತಾವಾದಿಯಾಗಿ ಜಗಜ್ಯೋತಿಯಾಗಿ ಬೆಳಗಿದ ಬಸವಣ್ಣನವರನ್ನು ಕುರಿತು ರವಿ ಹಂಜ್ ಸೇರಿದಂತೆ ಯಾರೇ ನಿಂದನೆ ಮಾಡಿದರೂ ಸಹಿಸಲಾಗದು. ಬಸವಣ್ಣನವರು ಆಶಯಗಳಾದ ಸಮಾನತೆ ಕಾಯಕ ಮತ್ತು ದಾಸೋಹದ ಚಿಂತನೆಗಳು ಈ ಭೂಮಿ ಇರುವವರೆಗೂ ಶಾಶ್ವತವಾಗಿ ಜೀವಂತವಾಗಿರುತ್ತವೆ. 12ನೇ ಶತಮಾನದಿಂದ 21ನೇ ಶತಮಾನದವರೆಗೂ ಬಸವ ತತ್ವ ಮತ್ತು ಶರಣರ ವಿಚಾರಧಾರೆಗಳನ್ನು ಹತ್ತಿಕ್ಕಲು, ವಿರೂಪಗೊಳಿಸಲು, ನಾಶಪಡಿಸಲು ಪಟ್ಟಭದ್ರ ಹಿತಾಸಕ್ತಿಗಳು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಆದರೆ ಅವು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ.

ಒಂದು ನೆನಪಿರಲಿ ಶರಣರ ವಿಚಾರಧಾರೆಗಳಿಗೆ ಸಾವಿಲ್ಲ, ಸಮಾನತೆಯ ಚಿಂತನೆಗೆ ಅಂತ್ಯವಿಲ್ಲ. ಕಾಲ ಬದಲಾಗಬಹುದು, ಆಡಳಿತ ಬದಲಾಗಬಹುದು ಆದರೆ ಬಸವಣ್ಣನವರ ಮಾನವೀಯತೆ, ಸಮಾನತೆ, ತತ್ವಗಳನ್ನು ಯಾರಿಂದಲೂ ನಾಶಪಡಿಸಲು ಸಾಧ್ಯವಿಲ್ಲ. ಸಂಕವ್ವನಂತಹ ಶೋಷಣೆಗೊಳಪಟ್ಟ ಮಹಿಳೆಯರಿಗೆ ಲಿಂಗ ದೀಕ್ಷೆಯನ್ನು ನೀಡಿ ವಾಕ್ ಸ್ವಾತಂತ್ರ್ಯದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಲ್ಲದೆ ಇಡೀ ಮಹಿಳಾ ಕುಲಕ್ಕೆ ಸಮಾನತೆ ಕಲ್ಪಿಸುವಲ್ಲಿ ಅವಿರತವಾಗಿ ಶ್ರಮಿಸಿದ ಮಹಾನ್ ಚೇತನ ಶಕ್ತಿ ಬಸವಣ್ಣ ಅವರ ಕುರಿತು ನಿಂದನೆ ಸಹಿಸಲಾಗದು.


ಸೌಹಾರ್ದತೆ, ಪ್ರೀತಿ, ಸಮಾನತೆ, ವ್ಯಕ್ತಿತ್ವ ಘನತೆ, ಪರಸ್ಪರ ಗೌರವ ಎತ್ತಿ ಹಿಡಿಯುವ ವಾತಾವರಣ ಇರುವುದನ್ನು ಸಹಿಸದ ದುಷ್ಟ ಮನಸುಗಳು, ವ್ಯಕ್ತಿಗಳು ಸಮಾಜದಲ್ಲಿ ಶಾಂತಿಭಂಗ ಉಂಟು ಮಾಡಲು, ಮಾನವ ಪ್ರೀತಿ, ಸಂಬಂಧ ಹಾಳು ಮಾಡಲು ತೊಡಗಿದ್ದಾರೆ. ಅಂತವರಲ್ಲಿ ರವಿ ಹಂಜ್ ಒಬ್ಬರು ಎಂದರು ತಪ್ಪಾಗಲಾರದು. ಇಂಥವರಿಗೆ ಸಾರ್ವಜನಿಕವಾಗಿ ಬಹಿಷ್ಕಾರ ಚಿಮಾರಿ ಹಾಕದಿದ್ದರೆ ಇನ್ನಷ್ಟು ಕೊಳಕು ನುಡಿಗಳು ಮೇಲೇಳುತ್ತವೆ. ಆತನ ಹೇಳಿಕೆ ಸಮಾಜಕ್ಕೆ ಕಂಟಕವಾಗಿದೆ. ಈತನ ಲೇಖನಗಳನ್ನು ಸಂಗ್ರಹಿಸಿ ಹೊರತಂದಿರುವ ಬಸವ ಮಂಟಪ ಕೃತಿಯನ್ನು ಮುಟ್ಟುಗೋಲಾಕಿ ಆತನ ಮೇಲೆ ಸುಮೋಟೋ ಕೇಸ್ ದಾಖಲಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಬಸವ ಸಮಿತಿ ಜಾಲಹಳ್ಳಿ ಸಂಚಾಲಕ ಚಂದ್ರಶೇಖರ ನಾಡಗೌಡ,ಬಸನೌಡ ಪಾಟೀಲ್, ಸಲಬಣ್ಣ ಸೌದ್ರಿ,ಚಂದಪ್ಪ ಬುದ್ದಿನ್ನಿ,ಲಿಂಗಣ್ಣ ಮಕಾಶಿ,ಶಿವಲಿಂಗಪ್ಪ,ಇಮಾಮ್ ಸಾಬ್,ಗುರುನಾಥ ಚಿಂಚೋಡಿ,ಅಮರೇಗೌಡ ಪೋಲಿಸ್ ಪಾಟೀಲ್, ಖುರ್ಷಿದ್ ಪಟೇಲ್,ಸಿದ್ದಪ್ಪ ತೆಗ್ಗಳ್ಳಿ,ನವೀನ್ ಪೊ.ಪಾ, ರಂಗಣ್ಣ ಕೊಲ್ಕಾರ್,ವೆಂಕನಗೌಡ,ಬಸವರಾಜ ಹೈಯಾಳ,ಬಸವರಾಜ ಗೋಪಾಳಪುರ,ಮಹೇಶ್ ಹೊಟ್ಟಿ,ಸಾಬಣ್ಣ ಕಮಲದಿನ್ನಿ,ರಾಮನೌಡ ಪೋಲಿಸ್ ಪಾಟೀಲ್,ಶಿವು ದೇಸಾಯಿ,ಬಸವರಾಜ ಸಿದ್ನಕಲ್ ಸೇರಿದಂತೆ ಇತರರು ಇದ್ದರು.
📲Get App