🔥 TRENDING Ramayana Film Continues Strong Perform... Dhruv Vikram’s Debut Film 'Adithya Var... Tripura Boosts Dearness Allowance to 4... Tripura Launches Training for 16 Maste... Tripura Enhances Security Ahead of Mun... ಸಮಾಜ ಸೇವೆಗೆ ಸದಾ ಸಿದ್ಧ: ಬಿ.ಬಿ.ಆರ್. ಬಾಬಣ...
23 Nov 2026•
ગુજરાતી मराठी ਪੰਜਾਬੀ বাংলা

ಜಾಲಹಳ್ಳಿ ಯಲ್ಲಿ ಹಿಮಾಂಶು ಕ್ಲಿನಿಕ್ ಮತ್ತು ಮೆಡಿಕಲ್ 4ನೇ ವಾರ್ಷಿಕೋತ್ಸವ: ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

✍️ Reporter: Khaja Hussain 🗓 23 Nov 2026, 03:34 PM 👁 19
Share: 💬 WhatsApp 📘 Facebook 𝕏 Post
**ಜಾಲಹಳ್ಳಿ ಬ್ರೇಕಿಂಗ್ ನ್ಯೂಸ್**

# ಜಾಲಹಳ್ಳಿ ಯಲ್ಲಿ ಹಿಮಾಂಶು ಕ್ಲಿನಿಕ್ ಮತ್ತು ಮೆಡಿಕಲ್ 4ನೇ ವಾರ್ಷಿಕೋತ್ಸವ: ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

### ನಂದಿ ಆಸ್ಪತ್ರೆಯ ಸಹಯೋಗದಲ್ಲಿ ವಿವಿಧ ತಜ್ಞ ವೈದ್ಯರಿಂದ ತಪಾಸಣೆ; ಸುಮಾರು 210 ಜನರಿಗೆ ಚಿಕಿತ್ಸೆ ಹಾಗೂ ವೈದ್ಯಕೀಯ ಸಲಹೆ

**ಜಾಲಹಳ್ಳಿ, ನ. 23:** ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪಟ್ಟಣದಲ್ಲಿರುವ ಹಿಮಾಂಶು ಕ್ಲಿನಿಕ್ ಮತ್ತು ಹಿಮಾಂಶು ಮೆಡಿಕಲ್‌ನ 4ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನ. 23ರಂದು ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ಜರುಗಿತು.

ಜಾಲಹಳ್ಳಿಯ ಸಂತೆ ರಸ್ತೆಯ ಬಸವಲಿಂಗಪ್ಪ ಬಾವಿ ಎದುರಿನ ಹಿಮಾಂಶು ಕ್ಲಿನಿಕ್‌ನಲ್ಲಿ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಡೆದ ಶಿಬಿರದಲ್ಲಿ ನಂದಿ ಆಸ್ಪತ್ರೆಯ ಸಹಯೋಗದೊಂದಿಗೆ ವಿವಿಧ ವಿಭಾಗಗಳ ತಜ್ಞ ವೈದ್ಯರು ಭಾಗವಹಿಸಿ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ, ಚಿಕಿತ್ಸಾ ಸಲಹೆ ಹಾಗೂ ವೈದ್ಯಕೀಯ ಮಾರ್ಗದರ್ಶನ ನೀಡಿದರು. ಶಿಬಿರದಲ್ಲಿ ಉಚಿತ ರಕ್ತದೊತ್ತಡ (ಬಿಪಿ) ಮತ್ತು ರಕ್ತದ ಸಕ್ಕರೆ (ಶುಗರ್) ತಪಾಸಣೆ ನಡೆಸಿ, ಉಚಿತ ಔಷಧ ವಿತರಿಸಲಾಯಿತು. ಸುಮಾರು 210 ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಶಿಬಿರದ ಪ್ರಯೋಜನ ಪಡೆದರು.

**ವಿವಿಧ ವಿಭಾಗಗಳ ತಜ್ಞ ವೈದ್ಯರಿಂದ ಸೇವೆ**

ಡಾ. ಸಾಬಣ್ಣ ನಾಯಕ ನಾಗಡದನ್ನಿ (MD ಜನರಲ್ ಮೆಡಿಸಿನ್, MMC ಮಧುರೈ) ಅವರು ಹೃದಯ ಸಂಬಂಧಿ ಕಾಯಿಲೆಗಳು, ರಕ್ತದೊತ್ತಡ, ಮಧುಮೇಹ, ಉಸಿರಾಟದ ತೊಂದರೆ, ಕ್ಷಯರೋಗ (ಟಿಬಿ), ಅಸ್ತಮಾ ಹಾಗೂ ಲಿವರ್ ಮತ್ತು ಕಿಡ್ನಿ ಸಮಸ್ಯೆಗಳ ಕುರಿತು ತಪಾಸಣೆ ನಡೆಸಿ ಸಲಹೆ ನೀಡಿದರು.

ಡಾ. ಮಲ್ಲಿಕಾರ್ಜುನ ಪಿ. (MBBS, RIMS ರಾಯಚೂರು), ಕುಟುಂಬ ವೈದ್ಯರು, ಜಾಲಹಳ್ಳಿ ಅವರು ಅಲರ್ಜಿ, ಕೆಮ್ಮು, ಮಕ್ಕಳ ಅನಾರೋಗ್ಯ, ಚರ್ಮರೋಗ, ಡೆಂಗ್ಯೂ, ಟೈಫಾಯ್ಡ್, ಮಂಡಿನೋವು ಹಾಗೂ ಹೊಟ್ಟೆನೋವು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಮತ್ತು ಸಲಹೆ ನೀಡಿದರು.

ಡಾ. ಶಶಿಕುಮಾರ ಹುದೇದ್ (BDS, NDC ರಾಯಚೂರು), ದಂತ ವೈದ್ಯರು, ಹಲ್ಲಿನ ಹುಳುಕು, ಸಿಮೆಂಟ್ ಫಿಲ್ಲಿಂಗ್, ಬೇರುನಾಳ ಚಿಕಿತ್ಸೆ, ಹಲ್ಲು ಸ್ವಚ್ಛಗೊಳಿಸುವಿಕೆ, ಹಲ್ಲು ಮತ್ತು ವಸಡಿನ ಶಸ್ತ್ರಚಿಕಿತ್ಸೆ, ಕೃತಕ ಹಲ್ಲು ಜೋಡಣೆ, ಹಲ್ಲು ಕೀಳುವುದು ಹಾಗೂ ವಕ್ರ ದಂತ ಚಿಕಿತ್ಸೆಗೆ ಸಂಬಂಧಿಸಿದ ಸೇವೆಗಳನ್ನು ನೀಡಿದರು.

ಡಾ. ಅಕ್ಷತಾ ಸಾಬಣ್ಣ ನಾಯಕ (MD ಪೀಡಿಯಾಟ್ರಿಕ್ಸ್, MMC ಮಧುರೈ), ನವಜಾತ ಶಿಶು ಹಾಗೂ ಮಕ್ಕಳ ತಜ್ಞರು, ಮಕ್ಕಳ ಹೃದಯ ಸಮಸ್ಯೆಗಳು, ಬೆಳವಣಿಗೆಯ ತೊಂದರೆಗಳು, ಉಬ್ಬಸ, ಉಸಿರಾಟದ ಸಮಸ್ಯೆಗಳು, ಅಪೌಷ್ಟಿಕತೆ ಹಾಗೂ ಫಿಟ್ಸ್ ಸಮಸ್ಯೆಗಳ ಕುರಿತು ತಪಾಸಣೆ ನಡೆಸಿ ಪೋಷಕರಿಗೆ ವೈದ್ಯಕೀಯ ಸಲಹೆ ನೀಡಿದರು.



**ಉಚಿತ ಆರೋಗ್ಯ ಶಿಬಿರ ಸ್ಲಾಘನೀಯ: ಅಬ್ದುಲ್ ರಹಮಾನ್ ಖುರೇಶಿ**

ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ರಹಮಾನ್ ಖುರೇಶಿ ಮಾತನಾಡಿ, ಹಿಮಾಂಶು ಕ್ಲಿನಿಕ್ ಮತ್ತು ಮೆಡಿಕಲ್ ಮಾಲೀಕ ಅಸ್ಲಾಂ ಅವರು ವಾರ್ಷಿಕೋತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿರುವುದು ಸ್ಲಾಘನೀಯ ಕಾರ್ಯವಾಗಿದೆ. ಸಾರ್ವಜನಿಕರು ಇಂತಹ ಆರೋಗ್ಯ ಸೇವೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.



**ಜನರ ಸಹಕಾರದಿಂದ ನಾಲ್ಕು ವರ್ಷಗಳ ಯಶಸ್ವಿ ಸೇವೆ: ಅಸ್ಲಾಂ**

ಹಿಮಾಂಶು ಕ್ಲಿನಿಕ್ ಮತ್ತು ಮೆಡಿಕಲ್ ಮಾಲೀಕ ಅಸ್ಲಾಂ ಮಾತನಾಡಿ, ಕ್ಲಿನಿಕ್ ಮತ್ತು ಮೆಡಿಕಲ್‌ನ ನಾಲ್ಕನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಂದಿ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಜಾಲಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.



**ಜನರ ಸಹಕಾರದಿಂದ ನಮ್ಮ ಕ್ಲಿನಿಕ್ ನಾಲ್ಕು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದೆ. ಜಾಲಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರ ಸಹಕಾರ ಹೀಗೆಯೇ ಮುಂದುವರಿಯಲಿ. ಎಲ್ಲರೂ ಉತ್ತಮ ಆರೋಗ್ಯ ಹೊಂದಲಿ ಎಂದು ಹಾರೈಸುತ್ತೇನೆ** ಎಂದು ವೈದ್ಯರಾದ ಡಾ. ಮಲ್ಲಿಕಾರ್ಜುನ ಪಿ. ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ರಹಮಾನ್ ಖುರೇಶಿ, ಬಾಬಾ ಮೆಡಿಕಲ್‌, ತಾತಪ್ಪ ನಾಯಕ, ನಿವೃತ್ತ ಪೊಲೀಸ್ ಅಧಿಕಾರಿ ಫಾಕೃದ್ದಿನ್ ಸೇರಿದಂತೆ ಕ್ಲಿನಿಕ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಜಾಲಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಶಿಬಿರವನ್ನು ಯಶಸ್ವಿಗೊಳಿಸಿದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App