देश
ಯೋಗಸಾಧಕರಿಂದ ಸಾಲುಮರದ ತಿಮ್ಮಕ್ಕನ ಪ್ರಥಮ ಪುಣ್ಯಸ್ಮರಣೆ
ಗಿಡಮರ ಬೆಳೆಸಿ, ಪರಿಸರ ಸಂರಕ್ಷಿಸಿ, ಮಾಲಿನ್ಯ ತಡೆದು ತಿಮ್ಮಕ್ಕನ ಆಶಯ ಈಡೇರಿಸಿ: ವೀರಭದ್ರಪ್ಪ ಉಪ್ಪಿನ್ ಬೀದರ್: ಉದ್ಯಾನಗಳು ಹಾಗೂ ಅರಣ್ಯ ಪ್ರದೇಶಗಳನ್ನು ಹೆಚ್ಚಿಸಿ, ಪರಿಸರವನ್ನು ಹಸಿರಾಗಿಡಲು ಮತ್ತು ಮಾಲಿನ್ಯ ನಿಯಂತ್
ಯೋಗಸಾಧಕರಿಂದ ಸಾಲುಮರದ ತಿಮ್ಮಕ್ಕನ ಪ್ರಥಮ ಪುಣ್ಯಸ್ಮರಣೆ
ಗಿಡಮರ ಬೆಳೆಸಿ, ಪರಿಸರ ಸಂರಕ್ಷಿಸಿ, ಮಾಲಿನ್ಯ ತಡೆದು ತಿಮ್ಮಕ್ಕನ ಆಶಯ ಈಡೇರಿಸಿ: ವೀರಭದ್ರಪ್ಪ ಉಪ್ಪಿನ್
ಬೀದರ್: ಉದ್ಯಾನಗಳು ಹಾಗೂ ಅರಣ್ಯ ಪ್ರದೇಶಗಳನ್ನು ಹೆಚ್ಚಿಸಿ, ಪರಿಸರವನ್ನು ಹಸಿರಾಗಿಡಲು ಮತ್ತು ಮಾಲಿನ್ಯ ನಿಯಂತ್ರಿಸಲು ಪ್ರತಿಯೊಬ್ಬರೂ ಗಿಡಮರಗಳನ್ನು ಬೆಳೆಸಬೇಕು ಎಂದು ರಾಜ್ಯ ಹಿರಿಯ ನಾಗರಿಕರ ಪ್ರಶಸ್ತಿ ಪುರಸ್ಕೃತ ವೀರಭದ್ರಪ್ಪ ಉಪ್ಪಿನ್ ಕರೆ ನೀಡಿದರು.
ನಗರದ ಬರೀದ್ಶಾಹಿ ಉದ್ಯಾನದಲ್ಲಿ ಪರಿಸರವಾದಿ, ಪದ್ಮಶ್ರೀ ಪುರಸ್ಕೃತ ದಿವಂಗತ ಸಾಲುಮರದ ತಿಮ್ಮಕ್ಕ ಅವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಿಮ್ಮಕ್ಕ ಅವರು ತಮ್ಮ ಸುದೀರ್ಘ 114 ವರ್ಷಗಳ ಜೀವನವನ್ನು ಪರಿಸರ ಸಂರಕ್ಷಣೆಗೆ ಮುಡಿಪಾಗಿಟ್ಟು, ಕೊನೆಯ ಉಸಿರಿನವರೆಗೂ ಪರಿಸರದ ಬಗ್ಗೆ ಕಾಳಜಿ ಹೊಂದಿದ್ದದ್ದು ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ್ದ ಯೋಗ ಮೇಲ್ವಿಚಾರಕ ಗಂಗಪ್ಪ ಸಾವಳೆ ಮಾತನಾಡಿ, ಮುಂದಿನ ಪೀಳಿಗೆಯ ಸುಖ, ಸಮೃದ್ಧಿಗಾಗಿ ಪರಿಸರವನ್ನು ಸಂರಕ್ಷಿಸಬೇಕೆಂಬ ಕನಸನ್ನು ತಿಮ್ಮಕ್ಕ ಕಂಡಿದ್ದರು. ಅವರ ಕನಸನ್ನು ನನಸಾಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಹಾಗೂ ಮಾಲಿನ್ಯ ತಡೆಗೆ ಸಾಮೂಹಿಕ ಸಂಕಲ್ಪ ಕೈಗೊಳ್ಳಲಾಯಿತು. ನಿಜಲಿಂಗಪ್ಪ ತಗಾರೆ ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಪಾಟೀಲ್, ಜ್ಞಾನೇಶ್, ವೈಜನಾಥ, ಸತೀಶ್, ವೀಣಾ, ಪಾರ್ವತಿ, ವಿಜಯಲಕ್ಷ್ಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.