🔥 TRENDING સાણંદ ના બળિયાદેવ મંદિરમાં પ્રાગટ્ય દિ... PM Modi Announces 24,000-Crore Nepal R... Meghalaya Police Officer Suspended Ove... Six Awami League Leaders Sent to Jail... Congress attacks BJP government in Sab... Joint Police Operation Seizes Contraba...
23 Nov 2026•
ગુજરાતી मराठी ਪੰਜਾਬੀ বাংলা
Health

ವಾರ್ತಾ ಇಲಾಖೆ ಸುತ್ತೊಲೆ ಹಿಂಪಡೆಯಲು ಮುಖ್ಯಮಂತ್ರಿ ಮನವೊಲಿಸಲು

✍️ Reporter: Basavaraj pujari 🗓 23 Nov 2026, 07:23 PM 👁 18
Share: 💬 WhatsApp 📘 Facebook 𝕏 Post

ಆರೋಗ್ಯ ಸಚಿವರಿಗೆ ಬೀದರ್ ಸಂಪಾದಕರ ಸಂಘದ ಮನವಿ ಬೀದರ್,ನ.23:- ಇತ್ತೀಚಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅವರು ಹೊರಡಿಸಿರುವ ಸುತ್ತೊಲೆಯನ್ನು ಹಿಂಪಡೆಯಬೇಕೆAದು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಬೇಕೆಂದು

ವಾರ್ತಾ ಇಲಾಖೆ ಸುತ್ತೊಲೆ ಹಿಂಪಡೆಯಲು ಮುಖ್ಯಮಂತ್ರಿ ಮನವೊಲಿಸಲು
ಆರೋಗ್ಯ ಸಚಿವರಿಗೆ ಬೀದರ್ ಸಂಪಾದಕರ ಸಂಘದ ಮನವಿ
ಬೀದರ್,ನ.23:- ಇತ್ತೀಚಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅವರು ಹೊರಡಿಸಿರುವ ಸುತ್ತೊಲೆಯನ್ನು ಹಿಂಪಡೆಯಬೇಕೆAದು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಬೇಕೆಂದು ಆರೋಗ್ಯ ಸಚಿವರಿಗೆ ಮನವಿ ಪತ್ರ ನೀಡಲಾಯಿತು. ಬೀದರನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ. ಖಾದರ್ ಅವರನ್ನು ಬೀದರ್ ಜಿಲ್ಲಾ ಸಂಪಾದಕರು ಭೇಟಿ ಮಾಡಿ ಸುಧೀರ್ಘ ಚರ್ಚೆ ನಡೆಸಿ ವಾರ್ತಾ ಇಲಾಖೆ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕೆAದು ಸನ್ಮಾನ್ಯ ಮುಖ್ಯಮಂತ್ರಿ ಮೇಲೆ ತಾವು ಪ್ರಭಾವ ಬೀರಿ ನಮ್ಮೆಲ್ಲರಿಗೂ ನ್ಯಾಯ ಒದಗಿಸಬೇಕೆಂದು ಬೀದರ್ ಜಿಲ್ಲಾ ಕಾರ್ಯನಿರತ ದಿನ ಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷ ವಿಜಯಕುಮಾರ ಪಾಟೀಲ ಮತ್ತು ಅವರ ತಂಡ ಸಚಿವರಿಗೆ ಮನವಿ ಮಾಡಲಾಯಿತು. ಅನೇಕ ಅವೈಜ್ಞಾನಿಕ ಮತ್ತು ಅಸಾಧ್ಯವಾದ ಕೆಲವು ಕಠಿಣ ನಿಯಮಗಳನ್ನು ಜಾರಿಗೊಳಿಸಿರುವುದನ್ನು ಹಿಂತೆಗೆದುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಸಚಿವರಿಗೆ ವಿವರಿಸಲಾಯಿತು. ತಮ್ಮೆಲ್ಲರ ಜೊತೆ ಸದಾ ನಾವು ನಮ್ಮ ಸರ್ಕಾರ ಇರುತ್ತದೆ ಕೂಡಲೇ ಮಾನ್ಯ ಮುಖ್ಯಮಂತ್ರಿ ಮತ್ತು ವಾರ್ತಾ ಇಲಾಖೆಯವರಿಗೆ ಪತ್ರ ಬರೆಯುತ್ತೇನೆ ಹಾಗೂ ನಿಮ್ಮ ಜೊತೆ ಇರುತ್ತೇನೆ ಎಂದು ನಮಗೆ ಆರೋಗ್ಯ ಸಚಿವ ಯು.ಟಿ.ಖಾದರ್ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಬೀದರಿನ ಶಾಸಕರಾದ ರಹಿಮ್ ಖಾನ್ ಅವರು ಸಚಿವರಿಗೆ ನಮ್ಮ ಸಮಸ್ಯೆ ಮನವರಿಕೆ ಮಾಡಿದರು ಮತ್ತು ಸಂಪಾದಕರುಗಳ ಸಮಸ್ಯೆ ಈಡೇರಿಸುವಂತೆ ಅವರು ಸಹ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಂಪಾದಕರುಗಳಾದ ಸೈಯದ್ ಹಸನ್ ಖಾದ್ರಿ, ಶ್ರೀನಿವಾಸ್ ಚೌದ್ರಿ, ಪೃಥ್ವಿರಾಜ್ ಎಸ್, ಅಬ್ದುಲ್ ಖದೀರ್, ಸುನಿಲ್ ಕುಲಕರ್ಣಿ, ಶರದ ಘಂಟೆ ಸೇರಿದಂತೆ ಅನೇಕರು ಹಾಜರಿದ್ದರು ನಂತರ ಮನವಿ ಪತ್ರ ನೀಡಲಾಯಿತು.
📲Get App