🔥 TRENDING Omar Government Unveils Development Ro... MMU Calls for Investigation into Unsaf... LG Sinha urges security forces to dism... Two Individuals Defrauded of Rs 3.71 L... Prakash Parv preparations intensify in... Nine Mobile Phones Seized from Faridko...
21 Nov 2026•
ગુજરાતી मराठी ਪੰਜਾਬੀ বাংলা

ಕಿತ್ತೂರು ರಾಣಿ ಚನ್ನಮ್ಮ ವಿಜಯೋತ್ಸವಕ್ಕೆ ಶ್ರೀಗಳ ಚಾಲನೆ

✍️ Reporter: Viswanatha D R 🗓 21 Nov 2026, 05:23 PM 👁 35
Share: 💬 WhatsApp 📘 Facebook 𝕏 Post
ಸವಣೂರು: ಸವಣೂರಿನ ದೊಡ್ಡಹುಣಸೆಮರದ ಮಠದಲ್ಲಿ ಆಯೋಜಿಸಲಾಗಿದ್ದ ವೀರರಾಣಿ ಕಿತ್ತೂರು ಚನ್ನಮ್ಮಾಜಿಯವರ ವಿಜಯೋತ್ಸವ ಸಮಾರಂಭವನ್ನು ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು ಹಾಗೂ ಶ್ರೀ ಚನ್ನಬಸವ ಮಹಾಸ್ವಾಮಿಗಳು ದೀಪ ಬೆಳಗಿಸುವ ಮೂಲಕ ವಿಧ್ಯುಕ್ತವಾಗಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು ವೀರರಾಣಿ ಕಿತ್ತೂರು ಚನ್ನಮ್ಮಾಜಿಯವರ ಧೈರ್ಯ, ಸಾಹಸ, ದೇಶಪ್ರೇಮ ಹಾಗೂ ಬ್ರಿಟಿಷರ ವಿರುದ್ಧದ ಹೋರಾಟದ ಆದರ್ಶಗಳನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಅಧ್ಯಕ್ಷರಾದ ಬಿ.ಎಂ. ಪಾಟೀಲ, ವಕೀಲರಾದ ಎಸ್.ವಿ. ಪಾಟೀಲ, ನಿವೃತ್ತ ಸೈನಿಕರು, ಸಮುದಾಯದ ಹಿರಿಯರು, ತಾಯಂದಿರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
📲Get App