🔥 ट्रेंडिंग तमिलनाडु के मुख्यमंत्री एमके स्टालिन न... कांग्रेस ने तमिलनाडु और कर्नाटक इकाइयो... સાવરકુંડલા: યુવક પર છરીથી હુમલો, હત્યા... एमपी हाई कोर्ट ने राज्य परिवहन प्राधिक... दिल्ली में गैंग के सरगना की हत्या, करी... जिलाधिकारी ने बहराइच में मतदाता सूची प...
17 नव. 2026•
ગુજરાતી मराठी ਪੰਜਾਬੀ বাংলা

ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ದಲಿತ ಸಂರಕ್ಷ ಸಮಿತಿಯ ಅನಿರ್ದಿಷ್ಟಾವಧಿ ಧರಣಿ - ಅಧಿಕಾರಿಗಳ ಭರವಸೆ ಮೇರೆಗೆ ತಾತ್ಕಾಲಿಕವಾಗಿ ಹಿಂಪಡೆತ - ಬೇಡಿಕೆ ಈಡೇರದಿದ್ದರೆ ಗ್ರಾ.ಪಂ. ಮುಂದೆ ಉಗ್ರ ಹೋರಾಟದ ಎಚ್ಚರಿಕೆ

✍️ रिपोर्टर: Ningappa 🗓 17 नव. 2026, 08:28 PM 👁 15
शेयर करें: 💬 WhatsApp 📘 Facebook 𝕏 Post

ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ದಲಿತ ಸಂರಕ್ಷ ಸಮಿತಿಯ ಅನಿರ್ದಿಷ್ಟಾವಧಿ ಧರಣಿ - ಲಿಂಗಸಗೂರಿನಲ್ಲಿ ಎರಡನೇ ದಿನಕ್ಕೆ ಕಾಲಿಟ್ಟಿದ್ದ ಧರಣಿ - ಅಧಿಕಾರಿಗಳ ಭರವಸೆ ಮೇರೆಗೆ ತಾತ್ಕಾಲಿಕವಾಗಿ ಹಿಂಪಡೆತ - 2-3 ದಿನಗಳಲ್ಲಿ ಬೇಡಿಕೆ ಪರಿಹರಿಸುವ ಭರವಸೆ, ಇಲ್ಲದಿದ್ದರೆ ಗ್ರಾ.ಪಂ. ಮುಂದೆ ಉಗ್ರ ಹೋರಾಟದ ಎಚ್ಚರಿಕೆ

ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ದಲಿತ ಸಂರಕ್ಷ ಸಮಿತಿಯ ಅನಿರ್ದಿಷ್ಟಾವಧಿ ಧರಣಿ - ಅಧಿಕಾರಿಗಳ ಭರವಸೆ ಮೇರೆಗೆ ತಾತ್ಕಾಲಿಕವಾಗಿ ಹಿಂಪಡೆತ

ಲಿಂಗಸಗೂರು:ದಲಿತ ಕಾಲೋನಿ ಹಾಗೂ ಗ್ರಾಮಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ದಲಿತ ಸಂರಕ್ಷ ಸಮಿತಿ (ರಿ), ಕರ್ನಾಟಕ - ಲಿಂಗಸಗೂರು ತಾಲೂಕು ಸಮಿತಿ ವತಿಯಿಂದ ದಿನಾಂಕ 16-11-2026 ರಿಂದ ಹಳೆಯ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ಇಂದು ಎರಡನೇ ದಿನಕ್ಕೆ ಕಾಲಿಟ್ಟಿತ್ತು.

ಧರಣಿ ಸ್ಥಳಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ (EO) ನೇತೃತ್ವದಲ್ಲಿ ಸಹಾಯಕ ನಿರ್ದೇಶಕರು (AD) ಹಾಗೂ ತಾಲೂಕು ಪಂಚಾಯಿತಿ ಸಿಬ್ಬಂದಿ ವರ್ಗದವರು ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಚರ್ಚಿಸಿದರು.

ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದ ಸಮಿತಿಯ ಎಲ್ಲಾ ಬೇಡಿಕೆಗಳನ್ನು ಮುಂದಿನ ಎರಡು-ಮೂರು ದಿನಗಳ ಒಳಗಾಗಿ ಪರಿಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದು, ಸಂಘಟನೆಯ ಮನವಿ ಪತ್ರವನ್ನು ಸ್ವೀಕರಿಸಿದ್ದಾರೆ.

ಅಧಿಕಾರಿಗಳ ಭರವಸೆಯ ಹಿನ್ನೆಲೆಯಲ್ಲಿ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಒಂದು ವೇಳೆ ನಿಗದಿತ ಎರಡು-ಮೂರು ದಿನಗಳ ಗಡುವಿನೊಳಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅಧಿಕಾರಿಗಳು ವಿಫಲವಾದಲ್ಲಿ, ಸಂಘಟನೆಯ ವತಿಯಿಂದ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಕಚೇರಿಯ ಮುಂಭಾಗದಲ್ಲಿ ಪುನಃ ಅನಿರ್ದಿಷ್ಟಾವಧಿ ಧರಣಿ ನಡೆಸುವ ಮೂಲಕ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಸಲ್ಲಿಸಿರುವ ಲಿಖಿತ ಮನವಿ ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.
📲Get App