ರಾಯಚೂರಿನ ಮುರಾರ್ಜಿ ದೇಸಾಯಿ ಬಾಲಕಿಯರ ವಸತಿ ನಿಲಯದಲ್ಲಿ ಬಿಸಿ ನೀರಿನ ವ್ಯವಸ್ಥೆ ಇಲ್ಲ - ಹಾಸ್ಟೆಲ್ ಮೇಲ್ವಿಚಾರಕರ ಮೇಲೆ ಶಿಸ್ತು ಕ್ರಮಕ್ಕೆ ರೈತ ಸಂಘದ ಆಗ್ರಹ
ರಾಯಚೂರಿನ ಮುರಾರ್ಜಿ ದೇಸಾಯಿ ಬಾಲಕಿಯರ ವಸತಿ ನಿಲಯದಲ್ಲಿ ಅವ್ಯವಸ್ಥೆ - ಚಳಿಗಾಲದಲ್ಲೂ ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ ಇಲ್ಲ - ಬಾಯ್ಲರ್ ಸರಿಪಡಿಸದೆ ನಿರ್ಲಕ್ಷ್ಯ - ಮೇಲ್ವಿಚಾರಕರ ಉಡಾಫೆ ಉತ್ತರಕ್ಕೆ ಆಕ್ರೋಶ - ಹಾಸ್ಟೆಲ್ ಮೇಲ್ವಿಚಾರಕರ ಮೇಲೆ ಶಿಸ್ತು ಕಾನೂನು ಕ್ರಮಕ್ಕೆ ರೈತ ಸಂಘದ ಆಗ್ರಹ
ರಾಯಚೂರಿನ ಮುರಾರ್ಜಿ ದೇಸಾಯಿ ಬಾಲಕಿಯರ ವಸತಿ ನಿಲಯದಲ್ಲಿ ಬಿಸಿ ನೀರಿನ ವ್ಯವಸ್ಥೆ ಇಲ್ಲ - ಹಾಸ್ಟೆಲ್ ಮೇಲ್ವಿಚಾರಕರ ಮೇಲೆ ಶಿಸ್ತು ಕ್ರಮಕ್ಕೆ ಆಗ್ರಹ
ರಾಯಚೂರು: ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ಬಾಲಕಿಯರ ವಸತಿ ನಿಲಯ ಬೋಳನ್ ದೊಡ್ಡಿ ರೋಡ್ ರಾಯಚೂರ್ ಹಾಸ್ಟೆಲ್ ಮೇಲ್ವಿಚಾರಕರ ಮೇಲೆ ಶಿಸ್ತು ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ರೈತ ಸಂಘ ದೇವದುರ್ಗ ತಾಲೂಕು ಅಧ್ಯಕ್ಷ ಹಾಜಿ ಮಸ್ತಾನ್ ಬಿ ಗಣೇಕಲ್ (ನಜೀರ್ ಅಹ್ಮದ್) ಅವರು ಮನವಿ ಮಾಡಿದ್ದಾರೆ.
ತಮ್ಮ ಮಕ್ಕಳನ್ನು ವಸತಿ ನಿಲಯಕ್ಕೆ ಬಿಡಲು ಹೋದಾಗ ಅಲ್ಲಿನ ಅವ್ಯವಸ್ಥೆ ಇನ್ನೂ ಸರಿಪಡಿಸಿಲ್ಲದಿರುವುದು ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ. ಈಗ ಚಳಿಗಾಲ ಪ್ರಾರಂಭವಾಗಿದ್ದರಿಂದ ಅಲ್ಲಿನ ಮಕ್ಕಳಿಗೆ ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ ಇಲ್ಲದಿರುವುದನ್ನು ಕಂಡು ತುಂಬಾ ಬೇಸರವಾಯಿತು ಎಂದು ಅವರು ಹೇಳಿದ್ದಾರೆ.
ಈ ವಿಷಯವಾಗಿ ಮೇಲ್ವಿಚಾರಕರಿಗೆ ಹಲವು ಸಾರಿ ಹೇಳಿದರೂ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ, ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಹಾಸ್ಟೆಲ್ ರಿಮೋಡಲಿಂಗ್ ಸಮಯದಲ್ಲಿ ತೆಗೆದುಹಾಕಲಾಗಿದ್ದ ಬಿಸಿನೀರಿನ ಬಾಯ್ಲರ್ ಸರಿಪಡಿಸಿಲ್ಲ ಎಂದು ಅವರು ದೂರಿದ್ದಾರೆ.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಹಾಸ್ಟೆಲ್ ಮೇಲ್ವಿಚಾರಕರ ಮೇಲೆ ಶಿಸ್ತು ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಮಕ್ಕಳಿಗೆ ಕೂಡಲೇ ಬಿಸಿ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.