🔥 TRENDING IHCL launches Himalayan Woodcroft – IH... Himachal village forgoes Diwali celebr... Renowned Saints Form Committee to Puri... Roadways staff begin indefinite strike... Daler Mehndi thanks supporters after U... கணபதி அருகே கார் ஒர்க் ஷாப்பில் தீ வி...
08 Nov 2026•
ગુજરાતી मराठी ਪੰਜਾਬੀ বাংলা

ಗಾಣಧಾಳ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹ - ಮರಳಿ ದೇವದುರ್ಗ ತಾಲ್ಲೂಕಿಗೆ ಸೇರಿಸುವಂತೆ ಒತ್ತಾಯ - ಅರಕೇರಾ ತಾಲ್ಲೂಕು ರಚನೆಯೇ ಅವೈಜ್ಞಾನಿಕ ಎಂದು ಗ್ರಾಮಸ್ಥರ ಆರೋಪ

✍️ Reporter: Ningappa 🗓 08 Nov 2026, 10:58 PM 👁 7
Share: 💬 WhatsApp 📘 Facebook 𝕏 Post

ಗಾಣಧಾಳ ಗ್ರಾಮವನ್ನು ಅರಕೇರಾ ತಾಲ್ಲೂಕಿನಿಂದ ಮರಳಿ ದೇವದುರ್ಗ ತಾಲ್ಲೂಕಿಗೆ ಸೇರಿಸುವಂತೆ ಗ್ರಾಮಸ್ಥರ ಪ್ರತಿಭಟನೆ ಹಿನ್ನೆಲೆ ಶನಿವಾರ ಜನಾಭಿಪ್ರಾಯ ಸಂಗ್ರಹ - ಗ್ರೇಡ್-2 ತಹಶೀಲ್ದಾರ್ ಶ್ರೀನಿವಾಸ್ ಪವಾರ ನೇತೃತ್ವದಲ್ಲಿ ಸಭೆ - ಸಾವಿರಾರು ಮಹಿಳೆಯರು ಭಾಗಿ - ಎಚ್.ಸಿದ್ದಾಪುರ ಮಾದರಿಯಲ್ಲಿ ಗಾಣಧಾಳವನ್ನೂ ದೇವದುರ್ಗಕ್ಕೆ ಸೇರಿಸಲು ಒತ್ತಾಯ

ಗಾಣಧಾಳ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹ - ಮರಳಿ ದೇವದುರ್ಗಕ್ಕೆ ಸೇರಿಸುವಂತೆ ಒತ್ತಾಯ

ಜಾಲಹಳ್ಳಿ: ಸಮೀಪದ ಗಾಣಧಾಳ ಗ್ರಾಮದಲ್ಲಿ ಶನಿವಾರ ಗ್ರೇಡ್-2 ತಹಶೀಲ್ದಾರ್ ಶ್ರೀನಿವಾಸ್ ಪವಾರ ನೇತೃತ್ವದಲ್ಲಿ ಜನಾಭಿಪ್ರಾಯ ಸಂಗ್ರಹಿಸಲಾಯಿತು.

ಕೆಲ ದಿನಗಳ ಹಿಂದೆ ಗಾಣಧಾಳ ಗ್ರಾಮ ವ್ಯಾಪ್ತಿಯ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ತಮ್ಮ ಗ್ರಾಮವನ್ನು ಅರಕೇರಾ ತಾಲ್ಲೂಕಿನಿಂದ ಮರಳಿ ದೇವದುರ್ಗ ತಾಲ್ಲೂಕಿಗೆ ಸೇರಿಸಬೇಕು ಎಂದು ಬೃಹತ್ ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನೆಯಲ್ಲಿ ಭಾಗವಹಿಸಿ ಅಧಿಕಾರಿಗಳು ತಮ್ಮ ಗ್ರಾಮಗಳಲ್ಲಿ ಜನರ ಜನಾಭಿಪ್ರಾಯ ಸಭೆ ಮಾಡಿ ಅಲ್ಲಿ ಬರುವ ಅಭಿಪ್ರಾಯವನ್ನು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ವರದಿ ಕಳಿಸಲಾಗುವುದು ಎಂದು ಭರವಸೆ ನೀಡಿದ್ದರು. ಹೀಗಾಗಿ ಗ್ರಾಮದಲ್ಲಿ ಶನಿವಾರ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರನ್ನು ಸಭೆಗೆ ಸೇರಿಸಲಾಗಿತ್ತು. ಸಭೆಯಲ್ಲಿ ಉಪ ತಹಶೀಲ್ದಾರ್ ಅವರು ಜನರ ಅಭಿಪ್ರಾಯವನ್ನು ಸಂಗ್ರಹಿಸಿ ವರದಿ ಸಿದ್ಧಪಡಿಸಿ ಓದಿ ಹೇಳಿದರು.

ಮುಖಂಡರಾದ ಬಸವರಾಜ ಪಾಟೀಲ ವಕೀಲ, ಸಿದ್ದನಗೌಡ ಪಾಟೀಲ ಮಾತನಾಡಿ, ಹೊಸ ಅರಕೇರಾ ತಾಲ್ಲೂಕು ರಚನೆಯೇ ಅವೈಜ್ಞಾನಿಕವಾಗಿದೆ. ನಾಗರಿಕ ಸೌಲಭ್ಯ ಇಲ್ಲದಿದ್ದರೂ ಅರಕೇರಾ ಗ್ರಾಮವನ್ನು ತಾಲ್ಲೂಕು ಎಂದು ಘೋಷಣೆ ಮಾಡಿರುವುದೇ ತಪ್ಪು ಎಂದು ಆರೋಪಿಸಿದರು.

ಈಗಾಗಲೇ ಎಚ್.ಸಿದ್ದಾಪುರ ಗ್ರಾಮವನ್ನು ಅರಕೇರದಿಂದ ಮರಳಿ ದೇವದುರ್ಗಕ್ಕೆ ಸೇರ್ಪಡೆ ಮಾಡಲಾಗಿದೆ. ಅದೇ ತರಹ ತಮ್ಮ ಗ್ರಾಮವನ್ನು ಕೂಡ ದೇವದುರ್ಗದಲ್ಲಿ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಬರೀ ಸುಳ್ಳು ದಾಖಲೆಗಳನ್ನು ಸರ್ಕಾರಕ್ಕೆ ಸಲ್ಲಿಸಿ, ಅಕ್ರಮವಾಗಿ ತಾಲ್ಲೂಕು ಘೋಷಣೆಗೆ ಕಾರಣರಾದ ಚುನಾಯಿತ ಪ್ರತಿನಿಧಿಗಳ ಮತ್ತು ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದರು.

ಗ್ರಾಮ ಅಭಿವೃದ್ಧಿ ಅಧಿಕಾರಿ ಗಂಗಮ್ಮ, ಕಾರ್ಯದರ್ಶಿ ಯಮುನೂರಪ್ಪ, ಗ್ರಾಮ ಆಡಳಿತಾಧಿಕಾರಿ ರುಕ್ಮಿಣಿ ನಾಯಕ, ಪಿಎಸ್‌ಐ ವೈಶಾಲಿ ಝಳಕಿ, ಮುಖಂಡರಾದ ಶಿವನಗೌಡ ದೇಸಾಯಿ, ಅಮರೇಗೌಡ, ಸಾಬಣ್ಣ ಹೂಗಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
📲Get App