🔥 TRENDING IHCL launches Himalayan Woodcroft – IH... Himachal village forgoes Diwali celebr... Renowned Saints Form Committee to Puri... Roadways staff begin indefinite strike... Daler Mehndi thanks supporters after U... கணபதி அருகே கார் ஒர்க் ஷாப்பில் தீ வி...
08 Nov 2026•
ગુજરાતી मराठी ਪੰਜਾਬੀ বাংলা

ಜನನುಡಿ - 2026 ರಲ್ಲಿ ಲೇಖಕ, ಅನುವಾದಕ, ಚಿಂತಕ ವಿಕಾಸ್ ಆರ್ ಮೌರ್ಯ ಭಾಗಿ - ನವೆಂಬರ್ 28, 29 ರಂದು ಮಂಗಳೂರಿನಲ್ಲಿ ಜನನುಡಿ - ಗೋಷ್ಠಿಯಲ್ಲಿ ಮಾತನಾಡಲಿದ್ದಾರೆ

✍️ Reporter: Ningappa 🗓 08 Nov 2026, 10:50 PM 👁 9
Share: 💬 WhatsApp 📘 Facebook 𝕏 Post

ಜನನುಡಿ - 2026 ರಲ್ಲಿ ಲೇಖಕ, ಅನುವಾದಕ, ಚಿಂತಕ ವಿಕಾಸ್ ಆರ್ ಮೌರ್ಯ ಮಾತನಾಡಲಿದ್ದಾರೆ - ದಲಿತ ಸಾಹಿತ್ಯ, ಸಾಮಾಜಿಕ ಚಿಂತನೆ, ಅನುವಾದ ಕ್ಷೇತ್ರದಲ್ಲಿ ಸಕ್ರಿಯರು - ಎಂಡ್ಲೂರಿ ಸುಧಾಕರ್ ಕೃತಿಗಳನ್ನು ಕನ್ನಡಕ್ಕೆ ಅನುವಾದ, ನುಡಿ ಚಮ್ಮಾಳಿಗೆ ಖ್ಯಾತ ಕೃತಿ - ನ.28, 29 ರಂದು ಮಂಗಳೂರಿನಲ್ಲಿ ಜನನುಡಿ - ಎರಡೂ ದಿನ ಭಾಗಿ

ಜನನುಡಿ - 2026 ರಲ್ಲಿ ಲೇಖಕ ವಿಕಾಸ್ ಆರ್ ಮೌರ್ಯ ಭಾಗಿ

ಮಂಗಳೂರು: ಲೇಖಕ, ಅನುವಾದಕ, ಚಿಂತಕರು ಆಗಿರುವ ವಿಕಾಸ್ ಆರ್ ಮೌರ್ಯ ಅವರು ಜನನುಡಿ - 2026 ರಲ್ಲಿ ಮಾತನಾಡಲಿದ್ದಾರೆ.

ಗಣಿತದಲ್ಲಿ ಸ್ನಾತಕೋತ್ತರ ಪದವಿ (M.Sc) ಪಡೆದಿರುವ ವಿಕಾಸ್ ಆರ್ ಮೌರ್ಯ ಅವರು ದಲಿತ ಸಾಹಿತ್ಯ, ಸಾಮಾಜಿಕ ಚಿಂತನೆಗಳು ಮತ್ತು ಅನುವಾದ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.

ದುರಿತ ಕಾಲದಲ್ಲಿ ಎಲ್ಲಾ ಜನಪರ ಚಳವಳಿಗಳು ಐಕ್ಯತೆಯನ್ನು ಹೊಂದಿರಬೇಕು ಎಂಬ ಅಚಲ ನಿಲುವು ಹೊಂದಿರುವ ಅವರು, ಎಂಡ್ಲೂರಿ ಸುಧಾಕರ್ ಅವರಂತಹ ಲೇಖಕರ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ನುಡಿ ಚಮ್ಮಾಳಿಗೆ ಅವರ ಖ್ಯಾತ ಕೃತಿ. ನಾನು ಗೌರಿ ಸೇರಿದಂತೆ ವಿವಿಧ ಪತ್ರಿಕೆಗಳು ಮತ್ತು ಜಾಲತಾಣಗಳಲ್ಲಿ ಸಾಮಾಜಿಕ ಹಾಗೂ ಇತಿಹಾಸಕ್ಕೆ ಸಂಬಂಧಿಸಿದ ಲೇಖನಗಳನ್ನು ಬರೆದಿದ್ದಾರೆ.

ಅವರು ಈ ಬಾರಿ ಜನನುಡಿಯ ಎರಡೂ ದಿನ ನಮ್ಮೊಂದಿಗಿದ್ದು, ಗೋಷ್ಠಿಯೊಂದರಲ್ಲಿ ಮಾತನಾಡಲಿದ್ದಾರೆ.

ಜನನುಡಿ - 2026
ನವೆಂಬರ್ 28, 29
ಶನಿವಾರ, ರವಿವಾರ
ಮಂಗಳೂರು

ಜನನುಡಿಯಲ್ಲಿ ಭಾಗವಹಿಸುವವರು ವಸತಿಗಾಗಿ ಸಂಪರ್ಕಿಸಿ
ಸಂತೋಷ್ ಬಜಾಲ್ - 9449225636
ಕಾವ್ಯ ಅಚ್ಯುತ್ - 9591967557
ರಿಜ್ವಾನ್ ಹರೇಕಳ - 91130 63350
📲Get App