🔥 TRENDING Delhi's Air Quality Plummets to 'Very... Delhi Public Grievance Hearing Conduct... CM Dr Mohan Yadav inspects ₹126.96 cr... MP MLA’s government house scandal: Cou... ਪੰਜਾਬ ''ਚ ਵੱਡੀ ਸਿਆਸੀ ਹਲਚਲ: 13 ਤਾਰੀਖ਼ ਨ... जालना शेतकरी दुहेरी संकटात: खरीप पिकां...
07 Nov 2026•
ગુજરાતી मराठी ਪੰਜਾਬੀ বাংলা

ಜಾಲಹಳ್ಳಿಯಲ್ಲಿ ಇಂದು ಬರಕೋ ಪದ ಬರಕೋ ನಾಟಕ - ಶಿಶುನಾಳ ಶರೀಫರ ಬದುಕು, ತತ್ವಪದಗಳ ಆಧಾರಿತ ನಾಟಕಕ್ಕೆ ಧಾತ್ತಿ ರಂಗ ಸಂಸ್ಥೆಯಿಂದ ಅಭಿನಯ

✍️ Reporter: Ningappa 🗓 07 Nov 2026, 08:12 PM 👁 13
Share: 💬 WhatsApp 📘 Facebook 𝕏 Post
ಜಾಲಹಳ್ಳಿಯಲ್ಲಿ ಇಂದು "ಬರಕೋ ಪದ ಬರಕೋ ನಾಟಕ"

ದೇವದುರ್ಗ/ಜಾಲಹಳ್ಳಿ: ಜೆ ಜೆ ಶಿಕ್ಷಣ ಸಂಸ್ಥೆ, ಪರಿಸರ ಸ್ನೇಹಿ ಗೆಳೆಯರ ಬಳಗ ಹಾಗೂ ಶ್ರೀ ಭಾಗ್ಯವಂತಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಜಾಲಹಳ್ಳಿ ಇವರ ಆಯೋಜನೆಯಲ್ಲಿ ಬಳ್ಳಾರಿ ಜಿಲ್ಲೆಯ ಸಿರಿಗೇರಿ ಗ್ರಾಮದ ಧಾತ್ತಿ ರಂಗ ಸಂಸ್ಥೆ ಇವರು ಅಭಿನಯಿಸುವ 'ಶಿಶುನಾಳ ಶರೀಫ' ಬದುಕು ಮತ್ತು ತತ್ವಪದಗಳನ್ನು ಆಧರಿಸಿದ 'ಬರಕೋ ಪದ ಬರಕೋ' ನಾಟಕ ಇಂದು ಅದ್ದೂರಿಯಾಗಿ ಉದ್ಘಾಟನೆಗೊಂಡಿತು.

ಗ್ರಾಮ ಪಂಚಾಯತಿ ಅಧ್ಯಕ್ಷೆ ಹನುಮಂತಿ ರಾಂಪಳ್ಳಿ ಅವರು ಉದ್ಘಾಟಿಸಿ ಚಾಲನೆ ನೀಡಿದರು.

ನಾಟಕದ ರಚನೆ ಮತ್ತು ನಿರ್ದೇಶನವನ್ನು ಮಾಂತೇಶ್ ರಾಮದುರ್ಗ ಅವರು ಮಾಡಿದ್ದಾರೆ.

ವೇದಿಕೆ ಮೇಲೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಹನುಮಂತಿ ಗಂ ಬಸವರಾಜ ರಾಂಪಳ್ಳಿ,ಗ್ರಾ.ಪಂ ಉಪಾಧ್ಯಕ್ಷ ಈರಪ್ಪ, ಶಂಕರಗೌಡ,ಬಸವರಾಜ ಪಂಪಾಪತಿ,ಗುರುಸ್ವಾಮಿ,ಗೋವಿಂದಪ್ಪ ಆಡ್ಲಿಗೇರಿ,ಗಿರಿಯಪ್ಪ ಪೂಜಾರಿ, ಕೆರಿಲಿಂಗಪ್ಪ ನಾಡಗೌಡ,ನಂದಪ್ಪ ಮಡ್ಡಿ,ಗ್ರಾ.ಪಂ ಸದಸ್ಯ ಮಲ್ಲಪ್ಪ ಸೌದ್ರಿ ಉಪಸ್ಥಿತರಿದ್ದರು.

ಶಾಲಾ ಮಕ್ಕಳು ಹಾಗೂ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು
📲Get App