🔥 TRENDING India's Last Mughal Emperor Marks 164t... Mohammad Shami’s Test retirement spark... Five arrested in Shahdol counterfeit c... ਹਨੁਮਾਨ ਯਾਤਰਾ ਦੌਰਾਨ ਹੁਸ਼ਿਆਰਪੁਰ ਵਿੱਚ ਸ਼ਰ... ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಗೆ ಪೂರ್... बड़ौद में पंचकुईया शिव मंदिर में स्वच्...
07 Nov 2026•
ગુજરાતી मराठी ਪੰਜਾਬੀ বাংলা

ದೀಪಾವಳಿಗೆ ಹಸಿರು ಪಟಾಕಿ ಮಾತ್ರ - ರಾಸಾಯನಿಕ ಪಟಾಕಿ ಮಾರಾಟಕ್ಕೆ ಸಂಪೂರ್ಣ ನಿಷೇಧ - ಪಟಾಕಿ ಮಾರಾಟಗಾರರಿಗೆ ಆಯುಕ್ತರಿಂದ ಕಟ್ಟುನಿಟ್ಟಿನ ಸೂಚನೆ, ಉಲ್ಲಂಘಿಸಿದರೆ ಪರವಾನಗಿ ರದ್ದು

✍️ Reporter: Ningappa 🗓 07 Nov 2026, 11:20 PM 👁 18
Share: 💬 WhatsApp 📘 Facebook 𝕏 Post

ದೀಪಾವಳಿ ಹಬ್ಬದ ನಿಮಿತ್ತ ಪರಿಸರ ಮತ್ತು ಶಬ್ದ ಮಾಲಿನ್ಯ ನಿಯಂತ್ರಿಸಲು ಆಯುಕ್ತರಿಂದ ಪಟಾಕಿ ಮಾರಾಟಗಾರರ ಸಭೆ - ಸುಪ್ರೀಂ ಕೋರ್ಟ್ ಆದೇಶದಂತೆ ಹಸಿರು ಪಟಾಕಿ ಮಾತ್ರ ಮಾರಾಟ, ರಾಸಾಯನಿಕ ಪಟಾಕಿಗೆ ನಿಷೇಧ - ಪರವಾನಗಿ ಪಡೆದವರಿಗೆ ಮಾತ್ರ ನಿಗದಿತ ಸ್ಥಳದಲ್ಲಿ ಅಂಗಡಿ - ಅಗ್ನಿ ಸುರಕ್ಷತೆಗೆ ಮರಳು, ನೀರು, ಅಗ್ನಿಶಾಮಕ ಉಪಕರಣ ಕಡ್ಡಾಯ - ಉಲ್ಲಂಘಿಸಿದರೆ ಪರವಾನಗಿ ರದ್ದು, ಕಾನೂನು ಕ್ರಮದ ಎಚ್ಚರಿಕೆ

ದೀಪಾವಳಿಗೆ ಹಸಿರು ಪಟಾಕಿ ಮಾತ್ರ - ಪಟಾಕಿ ಮಾರಾಟಗಾರರಿಗೆ ಆಯುಕ್ತರಿಂದ ಕಟ್ಟುನಿಟ್ಟಿನ ಸೂಚನೆ

ರಾಯಚೂರು: ದೀಪಾವಳಿ ಹಬ್ಬದ ನಿಮಿತ್ತ ನಗರದಲ್ಲಿ ಪರಿಸರ ಮತ್ತು ಶಬ್ದ ಮಾಲಿನ್ಯ ನಿಯಂತ್ರಿಸಲು ಮಾನ್ಯ ಆಯುಕ್ತರು ನಗರದ ಪಟಾಕಿ ಮಾರಾಟಗಾರರೊಂದಿಗೆ ಸಭೆ ನಡೆಸಿ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸಲು ಸೂಚನೆ ನೀಡಿದರು.

ಸುಪ್ರೀಂ ಕೋರ್ಟ್ ಆದೇಶದಂತೆ ಹಸಿರು ಪಟಾಕಿ ಮಾತ್ರ ಮಾರಾಟ ನಡೆಸಬೇಕು. ರಾಸಾಯನಿಕ ಪಟಾಕಿ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ. ಪರವಾನಗಿ ಪಡೆದ ಮಾರಾಟಗಾರರು ಮಾತ್ರ ನಿಗದಿತ ಸ್ಥಳದಲ್ಲಿ ಅಂಗಡಿ ತೆರೆಯಬೇಕು. ಅಗ್ನಿ ಸುರಕ್ಷತೆಗೆ ಅಗತ್ಯವಿರುವ ಮರಳು, ನೀರು, ಅಗ್ನಿಶಾಮಕ ಉಪಕರಣಗಳನ್ನು ಅಂಗಡಿಯಲ್ಲಿ ಕಡ್ಡಾಯವಾಗಿ ಇಟ್ಟುಕೊಳ್ಳಲು ಸೂಚಿಸಿದರು.

ನಿಯಮ ಉಲ್ಲಂಘಿಸಿ ಪಟಾಕಿ ಮಾರಾಟ ಮಾಡಿದರೆ ಪರವಾನಗಿ ರದ್ದುಪಡಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಗರದ ಪಟಾಕಿ ಮಾರಾಟಗಾರರು ಮತ್ತು ಅಗ್ನಿಶಾಮಕ ಪೊಲೀಸ್ ಅಧೀಕ್ಷರು ಹಾಗೂ ಉಪ ಆಯುಕ್ತರಾದ ಶ್ರೀ ಮುರಳೀಧರ, ವಲಯ ಆಯುಕ್ತರಾದ ಶ್ರೀ ಮಲ್ಲಿಕಾರ್ಜುನ ಬಿಎಂ, ಶ್ರೀ ಜೈಪಾಲ್ ರೆಡ್ಡಿ ಹಾಗೂ ಆರೋಗ್ಯ ನಿರೀಕ್ಷಕರು ಉಪಸ್ಥಿತರಿದ್ದರು.
📲Get App