🔥 TRENDING ದೀಪಾವಳಿಗೆ ಹಸಿರು ಪಟಾಕಿ ಮಾತ್ರ - ರಾಸಾಯನಿಕ... सतना जिला अस्पताल के डस्टबिन में मिला... હિંમતનગરમાં કુબેરધામ મંદિરે ત્રિદિવસીય... Assam Minister Pijush Hazarika reviews... Meghalaya High Court Rejects Pension C... Delhi's Air Quality Tops World as Wors...
07 Nov 2026•
ગુજરાતી मराठी ਪੰਜਾਬੀ বাংলা

ಜಾಲಹಳ್ಳಿಯಲ್ಲಿ ಬರಕೋ ಪದ ಬರಕೋ ನಾಟಕಕ್ಕೆ ಪ್ರೇಕ್ಷಕರ ಮೆಚ್ಚುಗೆ - ಕಲಾ ಬಳಗಕ್ಕೆ ಗಣ್ಯರ ಅಳಿಲು ಸಹಾಯ, ಪ್ರೋತ್ಸಾಹ - ಇಂತಹ ವೈಚಾರಿಕ ನಾಟಕಗಳು ಹೆಚ್ಚಾಗಲಿ ಎಂದ ಬಸವರಾಜ ಪಂಪಾಪತಿ, ಸಂಜನಾ ಸೌದ್ರಿ

✍️ Reporter: Ningappa 🗓 07 Nov 2026, 11:06 PM 👁 24
Share: 💬 WhatsApp 📘 Facebook 𝕏 Post

ಜಾಲಹಳ್ಳಿಯಲ್ಲಿ ಬರಕೋ ಪದ ಬರಕೋ ನಾಟಕ ಪ್ರೇಕ್ಷಕರ ಗಮನ ಸೆಳೆಯಿತು - ಶಿಶುನಾಳ ಶರೀಫರ ತತ್ವಪದಗಳ ನಾಟಕಕ್ಕೆ ಮೆಚ್ಚುಗೆ - ಕಲಾ ಬಳಗಕ್ಕೆ ಗಣ್ಯಮಾನ್ಯರಿಂದ ಅಳಿಲು ಸಹಾಯ ನೀಡಿ ಪ್ರೋತ್ಸಾಹ - ಬಸವರಾಜ ಪಂಪಾಪತಿ ಹಾಗೂ ಸಂಜನಾ ಸೌದ್ರಿ ನಾಟಕದ ಕುರಿತು ಅಭಿಪ್ರಾಯ ಹಂಚಿಕೊಂಡು ಹಾರೈಸಿದರು

ಜಾಲಹಳ್ಳಿಯಲ್ಲಿ "ಬರಕೋ ಪದ ಬರಕೋ" ನಾಟಕಕ್ಕೆ ಪ್ರೇಕ್ಷಕರ ಮೆಚ್ಚುಗೆ

ರಾಯಚೂರು/ಜಾಲಹಳ್ಳಿ: ಜೆ ಜೆ ಶಿಕ್ಷಣ ಸಂಸ್ಥೆ, ಪರಿಸರ ಸ್ನೇಹಿ ಗೆಳೆಯರ ಬಳಗ ಹಾಗೂ ಶ್ರೀ ಭಾಗ್ಯವಂತಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಜಾಲಹಳ್ಳಿ ಇವರ ಆಯೋಜನೆಯಲ್ಲಿ ನಡೆದ ಬರಕೋ ಪದ ಬರಕೋ ನಾಟಕ ಪ್ರೇಕ್ಷಕರ ಗಮನ ಸೆಳೆಯಿತು.

ಬಳ್ಳಾರಿ ಜಿಲ್ಲೆಯ ಸಿರಿಗೇರಿ ಗ್ರಾಮದ ಧಾತ್ರಿ ರಂಗ ಸಂಸ್ಥೆಯವರು ಶಿಶುನಾಳ ಶರೀಫರ ಬದುಕು ಮತ್ತು ತತ್ವಪದಗಳನ್ನು ಆಧರಿಸಿದ ಈ ನಾಟಕವನ್ನು ಅಭಿನಯಿಸಿದರು. ಮಾಂತೇಶ್ ರಾಮದುರ್ಗ ಅವರ ರಚನೆ ಮತ್ತು ನಿರ್ದೇಶನದಲ್ಲಿ ಮೂಡಿಬಂದ ನಾಟಕ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯಿತು.

ನಾಟಕ ವೀಕ್ಷಿಸಿದ ಗಣ್ಯಮಾನ್ಯರು ಕಲಾ ಬಳಗಕ್ಕೆ ಅಳಿಲು ಸಹಾಯ ನೀಡಿ ಪ್ರೋತ್ಸಾಹಿಸಿದರು.

ಈ ಸಂದರ್ಭದಲ್ಲಿ ಹಿರಿಯರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಆದ ಶ್ರೀಯುತ ಬಸವರಾಜ ಪಂಪಾಪತಿ ಹಾಗೂ ಕುಮಾರಿ ಸಂಜನಾ ಸೌದ್ರಿ ನಾಟಕದ ಕುರಿತು ಅಭಿಪ್ರಾಯ ಹಂಚಿಕೊಂಡರು. ಇನ್ನಷ್ಟು ಇಂತಹ ವೈಚಾರಿಕ ವಿಚಾರವುಳ್ಳ ಕಾರ್ಯಕ್ರಮ, ನಾಟಕಗಳು ಹೆಚ್ಚು ಹೆಚ್ಚು ಆಗಬೇಕು, ಪ್ರತಿಯೊಬ್ಬರೂ ನೋಡುವಂತಾಗಲಿ ಎಂದು ಹಾರೈಸಿದರು.

ನಾಟಕ ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಸ್ಥರು, ಶಾಲಾ ಮಕ್ಕಳು ಹಾಗೂ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
📲Get App