🔥 TRENDING ಪ್ರಜಾಪ್ರಭುತ್ವ ಉಳಿಸಿ – ಅರಾಜಕತೆ ಅಳಿಸಿ ಪಾ... चौप ग्राम पंचायत में कैलाश जी इंदौरा न... ದೆಹಲಿಯಲ್ಲಿ ಡಿಸೆಂಬರ್ 01ರಂದು ಕಾರ್ಮಿಕ ಸಂಘ... MP NEET PG Counselling 2026 Paused Aft... ABVP to hold 'Kolkata Chalo' rally on... EC asks Bengal election judges to prov...
04 Nov 2026•
ગુજરાતી मराठी ਪੰਜਾਬੀ বাংলা

ಸಿರವಾರದ ಮಾಜಿ ಎಪಿಎಂಸಿ ಸದಸ್ಯ ಈಶಪ್ಪ ಹೂಗಾರ ನಿವಾಸಕ್ಕೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ - ಆರೋಗ್ಯ ವಿಚಾರಣೆ

✍️ Reporter: Ningappa 🗓 04 Nov 2026, 03:30 PM 👁 10
Share: 💬 WhatsApp 📘 Facebook 𝕏 Post

ಸಿರವಾರ ಪಟ್ಟಣದ 4ನೇ ವಾರ್ಡ್ ಮಾಜಿ ಎಪಿಎಂಸಿ ನಾಮನಿರ್ದೇಶಿತ ಸದಸ್ಯ ಈಶಪ್ಪ ಹೂಗಾರ ಅವರ ಆರೋಗ್ಯದಲ್ಲಿ ವ್ಯತ್ಯಯ - ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ - ಶೀಘ್ರ ಗುಣಮುಖರಾಗಲಿ ಎಂದು ಹಾರೈಕೆ

ಸಿರವಾರ ಮಾಜಿ ಎಪಿಎಂಸಿ ಸದಸ್ಯರ ನಿವಾಸಕ್ಕೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ

ಸಿರವಾರ: ಪಟ್ಟಣದ 4ನೇ ವಾರ್ಡ್‌ನ ಮಾಜಿ ಎಪಿಎಂಸಿ ನಾಮನಿರ್ದೇಶಿತ ಸದಸ್ಯರಾದ ಈಶಪ್ಪ ಹೂಗಾರ ಅವರ ಆರೋಗ್ಯ ಸರಿಯಿಲ್ಲದಿರುವ ವಿಷಯ ತಿಳಿದ ತಕ್ಷಣ ಅವರ ನಿವಾಸಕ್ಕೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಈ ಸಂದರ್ಭದಲ್ಲಿ ಅವರೊಂದಿಗೆ ಮಾತನಾಡಿ, ನಿಮ್ಮ ಜೊತೆಗೆ ನಾವಿದ್ದೇವೆ. ಯಾವುದೇ ಕಾರಣಕ್ಕೂ ಆರೋಗ್ಯದ ಬಗ್ಗೆ ಆತಂಕಪಡಬೇಡಿ. ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಿ, ಶೀಘ್ರವಾಗಿ ಗುಣಮುಖರಾಗಿ ಎಂದು ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರು, ಮಹಿಳಾ ಘಟಕದ ಅಧ್ಯಕ್ಷರು, ವಿವಿಧ ಘಟಕಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಈಶಪ್ಪ ಹೂಗಾರ ಅವರು ಶೀಘ್ರವಾಗಿ ಗುಣಮುಖರಾಗಿ ಆರೋಗ್ಯವಂತರಾಗಲಿ ಎಂದು ಹಾರೈಸುತ್ತೇನೆ ಎಂದು ಮಾಜಿ ಶಾಸಕರು ತಿಳಿಸಿದರು.
📲Get App