ದೇವದುರ್ಗ: ಹದಿನಾಳ ಭೂಮಾನಂದ ಕೊಲೆ ಪ್ರಕರಣಕ್ಕೆ ನಿಜವಾಗಿಯೂ ನ್ಯಾಯ ಸಿಕ್ಕಿದೆಯೇ? - ಭೂಮಾನಂದ ಹೆಸರಿನಲ್ಲಿ ಹಣ ಪಡೆದವರು ಯಾರು ಎಂದು ಪ್ರಶ್ನಿಸಿದ ಭೀಮ ಪುತ್ರ ನಾಗರಾಜ್ ಬಜ್ಜಲ್ ಕರಿಗುಡ್ಡ
ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಹದಿನಾಳ ಗ್ರಾಮದ ದಲಿತ ಯುವಕ ಭೂಮಾನಂದ ಕೊಲೆ ಪ್ರಕರಣ ಸಡಿಲ - ಭೂಮಾನಂದಗೆ ನಿಜವಾಗಿಯೂ ನ್ಯಾಯ ಸಿಕ್ಕಿದೆಯೇ ಎಂಬ ಪ್ರಶ್ನೆ ಎತ್ತಿದ ನಾಗರಾಜ್ ಬಜ್ಜಲ್ ಕರಿಗುಡ್ಡ - ಭೂಮಾನಂದ ಹೆಸರು ಹೇಳಿ ಹಣ ಸ್ವೀಕಾರ ಮಾಡಿದವರು ಮನಸ್ಸಾಕ್ಷಿ ಮುಟ್ಟಿ ಉತ್ತರಿಸಬೇಕು - ಸಂಘ ಸಂಸ್ಥೆಗಳು ಕುಟುಂಬಕ್ಕಾಗಿ ಅಲ್ಲ, ಸಮಾಜದ ಉದ್ಧಾರಕ್ಕಾಗಿ ಬಾಬಾ ಸಾಹೇಬರು ಹುಟ್ಟುಹಾಕಿದ್ದು ಎಂಬ ಆಕ್ರೋಶ
ಹದಿನಾಳ ಭೂಮಾನಂದ ಪ್ರಕರಣದಲ್ಲಿ ಹಣದ ವ್ಯವಹಾರದ ಬಗ್ಗೆ ಆಕ್ರೋಶ - ವಿಡಿಯೋ ವೈರಲ್
ದೇವದುರ್ಗ, ನ. 4: ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಹದಿನಾಳ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ನಡೆದ ದಲಿತ ಯುವಕ ಮಾದಿಗ ಸಮುದಾಯದ ಭೂಮಾನಂದ ಕೊಲೆ ಪ್ರಕರಣದ ಬಗ್ಗೆ ಸಾಮಾಜಿಕ ಕಾರ್ಯಕರ್ತ, ಭೀಮ ಪುತ್ರ ನಾಗರಾಜ್ ಬಜ್ಜಲ್ ಕರಿಗುಡ್ಡ ಅವರು ವಿಡಿಯೋ ಮೂಲಕ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಎಲ್ಲರಿಗೂ ಜೈ ಭೀಮ್ ಬಂಧುಗಳೇ, ಹದಿನಾಳ ಗ್ರಾಮದಲ್ಲಿ ಭೂಮಾನಂದ ಎಂಬ ದಲಿತ ಯುವಕನ ಕೊಲೆ ಆಯಿತು. ನಂತರ ಹೋರಾಟಗಳು ನಡೆದು ಪ್ರಕರಣ ಸಡಿಲವಾಯಿತು. ಇದಕ್ಕೆ ಕಾರಣ ಏನು? ನಿಜವಾಗಲೂ ಭೂಮಾನಂದಗೆ ನ್ಯಾಯ ಸಿಕ್ಕಿದೆಯಾ ಎಂದು ಅವರು ಪ್ರಶ್ನಿಸಿದ್ದಾರೆ.
ಭೂಮಾನಂದ ವಿಚಾರವಾಗಿ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವ್ಯಕ್ತಿಗಳು ನಿಜವಾಗಲೂ ನ್ಯಾಯ ಕೊಡುತ್ತೇವೆ ಎಂದು ನಿಮ್ಮ ಮನಸ್ಸಾಕ್ಷಿ ಮುಟ್ಟಿ ಕೇಳಿಕೊಳ್ಳಿ. ಭೂಮಾನಂದನ ಹೆಸರು ಹೇಳಿ ನೀವು ಎಷ್ಟು ಹಣ ಸ್ವೀಕಾರ ಮಾಡಿದ್ದೀರಿ ಎಂದು ಮನಸ್ಸಾಕ್ಷಿ ಮುಟ್ಟಿ ಹೇಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇವತ್ತು ನಮ್ಮ ಸಮಾಜದವರೇ ಈ ರೀತಿ ಮಾಡುತ್ತಿರುವುದು ಬೇಜಾರು, ನೋವಾಗುತ್ತಿದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಕಪ್ಪು ಚುಕ್ಕೆ ತರುವಂತಹ ಕೆಲಸ ಮಾಡುತ್ತಿದ್ದೀರಿ. ನಾಳೆ ನಮ್ಮಂತಹ ಯುವಕರು ಎಷ್ಟು ಜನ ಸತ್ತರೂ ನೀವು ಇದೇ ರೀತಿ ಮಾಡಿದರೆ ಸಂಘಟನೆ ಮೇಲೆ ಇರುವ ಗೌರವ, ಸ್ವಾಭಿಮಾನ, ಆತ್ಮಗೌರವ ಏನಾಗಬೇಕು? ಸಂಘ ಸಂಸ್ಥೆಗಳನ್ನು ಬಾಬಾ ಸಾಹೇಬರು ಮಾಡಿದ್ದು ಕುಟುಂಬದ ಸ್ವಾರ್ಥಕ್ಕಾಗಿ ಅಲ್ಲ, ಸಮಾಜದ ಏಳಿಗೆಗಾಗಿ, ಎಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಯುತ್ತದೆಯೋ ಅಲ್ಲಿ ಹೋರಾಡಿ ನ್ಯಾಯ ಪಡೆದುಕೊಳ್ಳಲು ಎಂದು ಅವರು ಹೇಳಿದ್ದಾರೆ.
ನಿಜವಾಗಲೂ ಅಂಬೇಡ್ಕರ್ ರಕ್ತ ಇದ್ದರೆ ಭೂಮಾನಂದಗೆ ನ್ಯಾಯ ಕೊಡಿಸಿ. ಭೂಮಾನಂದ ಹೆಸರು ಹೇಳಿ ಹಣ ತಿಂದಿದ್ದರೆ ಅವನ ಶಾಪ, ಅವನ ಮಕ್ಕಳ ಶಾಪ, ಹೆಂಡತಿಯ ಶಾಪ, ಇಡೀ ಕುಟುಂಬದ ಶಾಪ ತಟ್ಟದೇ ಬಿಡುವುದಿಲ್ಲ, ಸರ್ವನಾಶವಾಗಿ ಹೋಗುತ್ತೀರಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೈಯಲ್ಲಿ ಶಕ್ತಿ ಇದೆ, ದುಡಿದು ತಿನ್ನಬಹುದು, ಸಂಘಟನೆ ಕುಟುಂಬಕ್ಕಾಗಿ ಮಾಡಿದ್ದಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದು ಅವರು ಕರೆ ನೀಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.