🔥 TRENDING Zee ಕನ್ನಡ हिंदू जागरण मंच ने माननीय हरिपाल सिंह... Zee ಕನ್ನಡ उमंग उत्साह के साथ कटनी में मनाया गया... अंकित जायसवाल को हार्डा जिले के नए एसप... कटक बड़मबड्डी के रॉक्सी होटल से करीबन...
01 Nov 2026•
ગુજરાતી मराठी ਪੰਜਾਬੀ বাংলা

ವೀರಾಪೂರು ಗ್ರಾಮದಲ್ಲಿ ಕೃಷಿ ಕೂಲಿಕಾರರ ವಿಶಿಷ್ಟ ರಾಜ್ಯೋತ್ಸವ ಆಚರಣೆ - ಕೆಲಸದ ಸ್ಥಳದಲ್ಲೇ ಕನ್ನಡದ ಬಾವುಟ ಹಿಡಿದು ಸಂಭ್ರಮ

✍️ Reporter: Ningappa 🗓 01 Nov 2026, 04:33 PM 👁 46
Share: 💬 WhatsApp 📘 Facebook 𝕏 Post

ಲಿಂಗಸುಗೂರು ತಾಲ್ಲೂಕು ವೀರಾಪೂರು ಗ್ರಾಮದಲ್ಲಿ ಕೃಷಿ ಕೂಲಿಕಾರರ ಸರಳ ಮತ್ತು ಅರ್ಥಪೂರ್ಣ 71ನೇ ಕನ್ನಡ ರಾಜ್ಯೋತ್ಸವ - ಕೃಷಿ ಭೂಮಿಯಲ್ಲೇ ನಾಡು-ನುಡಿಗೆ ನಮನ ಸಲ್ಲಿಸಿದ ಕೂಲಿಕಾರ್ಮಿಕರು

*ವೀರಾಪೂರು ಗ್ರಾಮದಲ್ಲಿ ಕೃಷಿ ಕೂಲಿಕಾರರೊಂದಿಗೆ ಸರಳ ಹಾಗೂ ಅರ್ಥಪೂರ್ಣ 71ನೇ ಕನ್ನಡ ರಾಜ್ಯೋತ್ಸವ ಆಚರಣೆ*

ದೇವದುರ್ಗ /ವೀರಾಪೂರು: ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ವೀರಾಪೂರು ಗ್ರಾಮದ ಕೃಷಿ ಕೂಲಿಕಾರರು ಕೆಲಸದ ಸ್ಥಳದಲ್ಲೇ 71ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವಿಭಿನ್ನ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಕನ್ನಡಾಭಿಮಾನ ಮೆರೆದಿದ್ದಾರೆ.

ವೀರಾಪೂರು ಗ್ರಾಮದ ಕೃಷಿ ಭೂಮಿಯಲ್ಲಿ ವಿಬಿಜಿ ರಾಮ್ ಜೀ ಯೋಜನೆ ಅಡಿ ಕೆಲಸದಲ್ಲಿ ಒಟ್ಟುಗೂಡಿದ ಕೂಲಿಕಾರರು ಕನ್ನಡ ನಾಡು-ನುಡಿಗೆ ನಮನ ಸಲ್ಲಿಸಿದರು.

ಈ ವೇಳೆ ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಹಾಗೂ ಕೂಲಿಕಾರರ ಮೇಟ್ ಕಂ ಮುಖಂಡರಾದ *ನಿಂಗಪ್ಪ ಎಂ. ವೀರಾಪೂರು* ಮಾತನಾಡಿ, "ಈ ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದ ನಾವೇ ಪುಣ್ಯವಂತರು. ನಮ್ಮ ಕನ್ನಡ ನೆಲ, ಜಲ, ಮಣ್ಣಿನ ಹಿರಿಮೆ ವಿಶ್ವದಲ್ಲೇ ಅನನ್ಯವಾದದ್ದು. ಇದು ಕವಿಗಳು, ನಾಟಕಕಾರರು, ವಿದ್ವಾಂಸರು ಹಾಗೂ ವಚನಕಾರರ ನೆಲೆವೀಡು. ಇಲ್ಲಿಯ ನೆಲವು ಕೃಷಿಯ ಮೂಲಕ ಬಂಗಾರವನ್ನು ಬೆಳೆಯುವುದರ ಜತೆಗೆ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಶ್ರೀಮಂತಿಕೆಯನ್ನು ಜಗತ್ತಿಗೆ ಸಾರಿದೆ" ಎಂದು ಬಣ್ಣಿಸಿದರು.

"ಕನ್ನಡವೇ ಸತ್ಯ, ಕನ್ನಡವೇ ನಿತ್ಯ" ಎಂದು ಕನ್ನಡಾಭಿಮಾನದ ನುಡಿಗಳನ್ನು ಆಡಿ ಎಲ್ಲರ ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ಕೃಷಿ ಕೂಲಿಕಾರ್ಮಿಕರಾದ *ಅಮರಪ್ಪ, ಕೋಠ, ಮೌನೇಶ, ನಾಗನೂರು, ಅಮರೇಶ ದಿವಾಣದ, ಶಿವಪ್ಪ ಕಾಟಿಗಲ್, ರವಿಕುಮಾರ್, ಗುಂಡಪ್ಪ ದೊಡ್ಡಮನಿ, ಕಡೇವಿರಯ್ಯ, ಕುಮಾರಪ್ಪ, ರಾಮಣ್ಣ ಬಜೆತ್ರಿ, ರಾಯಣ್ಣ ಕಡೆಮನಿ, ಗದ್ದೆಪ್ಪ* ಹಾಗೂ ಮಹಿಳಾ ಕೂಲಿಕಾರರಾದ *ನಾಗಮ್ಮ, ಶರಭಮ್ಮ, ಬಸಮ್ಮ ದಿದಗಿ, ವರಲಕ್ಷ್ಮಿ, ದೇವಮ್ಮ ಗಚಿನಮನಿ, ಹುಚ್ಚಮ್ಮ* ಉಪಸ್ಥಿತರಿದ್ದು
📲Get App