🔥 TRENDING અરવલ્લીમાં શામળાજી પોલીસે રાજસ્થાન બોર... Assam Assembly Forms Members’ Amenitie... Suspected Murder of 25‑Year‑Old Man in... Food Safety Dept Seizes 298 kg Mava, S... Madhya Pradesh to Freeze Transfers Jan... 27-Year-Old Bhopal Man Dies After Fall...
29 Oct 2026•
ગુજરાતી मराठी ਪੰਜਾਬੀ বাংলা

ಸಾಧನ ಸಲಕರಣೆಗಳ ಬಳಕೆಯಿಂದ ಬದುಕು ಬದಲಾಗಲಿ - ಶ್ರೀ ಎಮ್ ವ್ಹಿ ಗಬ್ಬೂರ

✍️ Reporter: Mallikarjun Gabbur 🗓 29 Oct 2026, 07:20 PM 👁 19
Watch on: 📘 Facebook
Share: 💬 WhatsApp 📘 Facebook 𝕏 Post

ಎಲ್ಲರಿಗೂ ಸಮ ಬಾಳು ಎಲ್ಲರಿಗೆ ಸಮಪಾಲು ಎನ್ನುವ ರೀತಿಯಲ್ಲಿ ಘನ ಸರಕಾರವು ಮಕ್ಕಳಿಗೆ ಅವರ ಜೀವನದಲ್ಲಿ ಕಲಿಕಾ ಮಟ್ಟವನ್ನು ಹೆಚ್ಚಿಸಲು ಸಾಧನ ಸಲಕರಣೆಗಳು ಬಂದಿರುತ್ತವೆ ಅವುಗಳ ಬಳಕೆಯ ಉಪಯೋಗವನ್ನು ಪಡೆದುಕೊಳ್ಳಬೇಕು. ಸಾಧನ ಸಲಕರಣೆಗಳ ಬಳಕೆಯಿಂದ ಬದುಕು ಬದಲಾಗಲಿ ಎಂದು ಅತಿಥಿಗಳಾದ ಶ್ರೀ ಎಂ ವಿ ಗಬ್ಬೂರು ಮಾತನಾಡಿದರು.

ಎಲ್ಲರಿಗೂ ಸಮ ಬಾಳು ಎಲ್ಲರಿಗೆ ಸಮಪಾಲು ಎನ್ನುವ ರೀತಿಯಲ್ಲಿ ಘನ ಸರಕಾರವು ಮಕ್ಕಳಿಗೆ ಅವರ ಜೀವನದಲ್ಲಿ ಕಲಿಕಾ ಮಟ್ಟವನ್ನು ಹೆಚ್ಚಿಸಲು ಸಾಧನ ಸಲಕರಣೆಗಳು ಬಂದಿರುತ್ತವೆ ಅವುಗಳ ಬಳಕೆಯ ಉಪಯೋಗವನ್ನು ಪಡೆದುಕೊಳ್ಳಬೇಕು. ಸಾಧನ ಸಲಕರಣೆಗಳ ಬಳಕೆಯಿಂದ ಬದುಕು ಬದಲಾಗಲಿ ಎಂದು ಅತಿಥಿಗಳಾದ ಶ್ರೀ ಎಂ ವಿ ಗಬ್ಬೂರು ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಬಸವನಬಾಗೇವಾಡಿ 2025 - 26 ನೇ ಸಾಲಿನ ವಿಶೇಷ ಚೇತನ ಮಕ್ಕಳ ವೈದ್ಯಕೀಯ ಮೌಲಾಂಕನ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ವೈದ್ಯರಿಂದ ಶಿಫಾರಸ್ಸಾದ ಸಾಧನ ಸಲಕರಣೆಗಳ ವಿತರಣೆಯನ್ನು ಮಾಡಿ ಮಾತನಾಡಿರು.
ದಿವ್ಯಾಂಗ ಹೊಂದಿದ ಮಕ್ಕಳಿಗೆ ಸಾಮಾನ್ಯ ಮಕ್ಕಳಂತೆ ಸಮಾನವಾದ ಅವಕಾಶವನ್ನು ಕಲ್ಪಿಸಿಕೊಡಿ ಅವರ ಕಲಿಕೆಗೆ ಉತ್ತಮ ವಾತಾವರಣ ನಿರ್ಮಾಣ ಮಾಡುವುದು ತಂದೆ ತಾಯಿಯಂದಿರ ಕರ್ತವ್ಯವಾಗಿದೆ. ಪಾಲಕರು ಈ ಸಾಧನ ಸಹಕಾರಣೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಅವುಗಳನ್ನು ಬಳಕೆ ಮಾಡಬೇಕು ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶ್ರೀ ಬಿ ಎಸ್ ಅವಟಿ ಹೇಳಿದರು
ಇಂದು ಸಾಧನ ಸಲಕರಣೆಗಳ ವಿತರಣೆಯನ್ನು ವೈದ್ಯಕೀಯ ಶಿಬಿರದಲ್ಲಿ ಭಾಗವಹಿಸಿದ ಅರ್ಹ ಫಲಾನುಭವಿಗಳಿಗೆ ಸಾಧನ ಸಲಕರಣೆಗಳನ್ನು ವಿತರಣೆ ಮಾಡಲಾಯಿತು ಕಾರ್ಯಕ್ರಮದಲ್ಲಿ ಶ್ರೀಮತಿ ಅನುಸೂಯಾ ಜುಗತಿ CRP ಅವರು ಅತಿಥಿಗಳಾಗಿದ್ದರು . ಶ್ರೀಮತಿ ಐ ಎಮ್ ಇಂಡಿ ಬಿ ಐ ಆರ್ ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು
ಬಿ ಐ ಆರ್ ಟಿ ಶ್ರೀಮತಿ ವಿಜಯಲಕ್ಷ್ಮಿ ಕಕ್ಕ ಸಗೇರಿ, ಶ್ರೀಮತಿ ಬೌರಮ್ಮ ಗ್ವಾಲೆದ ಮತ್ತು ಶ್ರೀ ಶರಣಗೌಡ ಬಿರಾದಾರ ಉಪಸ್ಥಿತರಿದ್ದು ಪಾಲಕರಿಗೆ ಸಾಧನ ಸಲಕರಣೆಗಳ ಪರಿಚಯ ಮಾಡಿಕೊಟ್ಟರು ಸುಮಾರು 68 ಮಕ್ಕಳಿಗೆ ಸಲಕರಣೆಗಳನ್ನು ಹಂಚಲಾಯಿತು.
📲Get App