🔥 TRENDING Karnataka Artist Creates World's Large... Rajasthan CM Bhajanlal Sharma to Tour... ਪੁਲਸ ਮੁਲਾਜ਼ਮਾਂ ਦੀਆਂ ਤਰੱਕੀਆਂ ਅਤੇ ਪੈਨਸ਼ਨਾ... Rajasthan Braces for Rain: Jaipur, Bha... ପରସ୍ପର ସହ ଧକ୍କା ହେଲା ରାହୁଲ ଗାନ୍ଧୀଙ୍କ କ... Rajasthan Women Supervisor 2026 Result...
26 Oct 2026•
ગુજરાતી मराठी ਪੰਜਾਬੀ বাংলা

ಕೆ. ಬೇವಿನಹಳ್ಳಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ

✍️ Reporter: Viswanatha D R 🗓 26 Oct 2026, 10:27 AM 👁 159
Watch on: 📘 Facebook
Share: 💬 WhatsApp 📘 Facebook 𝕏 Post
ಹರಿಹರ, ಅ. 26: ತಾಲೂಕಿನ ಕೆ. ಬೇವಿನಹಳ್ಳಿ ಗ್ರಾಮದಲ್ಲಿ ಶ್ರೀ ವಾಲ್ಮೀಕಿ ಮಹರ್ಷಿ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಮಹರ್ಷಿಯವರ ಭಾವಚಿತ್ರಕ್ಕೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ವಿವಿಧ ಸಮುದಾಯಗಳ ಗ್ರಾಮಸ್ಥರು ಒಗ್ಗೂಡಿ ಶಾಂತಿ ಹಾಗೂ ಸೌಹಾರ್ದತೆಗಾಗಿ ಪ್ರಾರ್ಥಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು. ಗ್ರಾಮಸ್ಥರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ವಾಲ್ಮೀಕಿ ಮಹರ್ಷಿಯವರ ಜೀವನ, ಆದರ್ಶಗಳು ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ರಾಮಾಯಣದಲ್ಲಿ ಪ್ರತಿಪಾದಿಸಿರುವ ನೀತಿ, ಧರ್ಮ ಮತ್ತು ಮಾನವೀಯ ಮೌಲ್ಯಗಳ ಮಹತ್ವವನ್ನು ಕಾರ್ಯಕ್ರಮದಲ್ಲಿ ತಿಳಿಸಲಾಯಿತು. ಯುವಜನರು ವಾಲ್ಮೀಕಿಯವರ ಆದರ್ಶಗಳನ್ನು ಅಳವಡಿಸಿಕೊಂಡು ಶಿಕ್ಷಣ, ಶಿಸ್ತು ಹಾಗೂ ಸಮಾಜಸೇವೆಗೆ ಆದ್ಯತೆ ನೀಡಬೇಕೆಂದು ಕರೆ ನೀಡಲಾಯಿತು. ಬಳಿಕ ಗ್ರಾಮಸ್ಥರಿಗೆ ಪ್ರಸಾದ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಚನ್ನಪ್ಪ, ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು, ರಾಜಶೇಖರಪ್ಪ,ಬೂದಿಹಾಳ್ ಹಾಲೇಶ್, ಸಲಗನಹಳ್ಳಿ ವಿಜಯಕುಮಾರ್, ರುದ್ರಮುನಿ, ಉಮಾ ಮಹೇಶ್ವರ್, ನಂದಿ ಬಸಯ್ಯ, ಕಾಂತರಾಜ್, ಮಂಜಣ್ಣ, ನಾಗರಾಜ್, ವಿರೂಪಾಕ್ಷಪ್ಪ, ಹಾಲನಗೌಡ, ಸೋಮಶೇಖರಯ್ಯ, ಶಿವರಾಜ್, ಮಹೇಶ್, ರೇವಣಸಿದ್ಧಪ್ಪ, ಬಸೆಟಪ್ಪ, ಕೊಟ್ಟಪ, ಮಲ್ಲಿಕಾರ್ಜುನ, ವಿಶ್ವನಾಥ, ಸಿದ್ದಪ್ಪ, ಚಂದ್ರಪ್ಪ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.
📲Get App