🔥 TRENDING નવા વાડજમાં 'લોકતંત્ર બચાવો, અરાજકતા હ... Maharashtra MLC Election Results 2026... Maharashtra Cyber Police Nab 23-Year-O... Maharashtra Cracks Down on Ride-Hailin... અમરેલી સિંચાઈ વિભાગમાં જુનિયર ક્લાર્ક... નવા વાડજમાં 'લોકતંત્ર બચાવો, અરાજકતા હ...
28 Oct 2026•
ગુજરાતી मराठी ਪੰਜਾਬੀ বাংলা

ರೈತ–ಕೂಲಿಕಾರ್ಮಿಕರ ಎರಡನೇ ದಿನದ ಪಾದಯಾತ್ರೆಗೆ ಮುರಾನಪೂರ ಬಳಿ ಶಾಸಕಿ ಕರೆಮ್ಮ ಜಿ. ನಾಯಕ ಬೆಂಬಲ

✍️ Reporter: Khaja Hussain 🗓 25 Oct 2026, 04:42 PM 👁 21
Watch on: 📘 Facebook
Share: 💬 WhatsApp 📘 Facebook 𝕏 Post
**ರಾಯಚೂರು | ಬ್ರೇಕಿಂಗ್ ನ್ಯೂಸ್**

# ರೈತ–ಕೂಲಿಕಾರ್ಮಿಕರ ಎರಡನೇ ದಿನದ ಪಾದಯಾತ್ರೆಗೆ ಮುರಾನಪೂರ ಬಳಿ ಶಾಸಕಿ ಕರೆಮ್ಮ ಜಿ. ನಾಯಕ ಬೆಂಬಲ

### ನಾರಾಯಣಪುರ ಬಲದಂಡೆ ಕಾಲುವೆಗೆ ನವೆಂಬರ್ ಅಂತ್ಯದವರೆಗೆ ನೀರು ಹರಿಸಲು ಆಗ್ರಹ; ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳೊಂದಿಗೆ ಚರ್ಚಿಸುವ ಭರವಸೆ

**ಮುರಾನಪೂರ, ಅ. 25:** ರೈತರು ಮತ್ತು ಕೃಷಿ ಕೂಲಿಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇವದುರ್ಗದಿಂದ ರಾಯಚೂರು ಜಿಲ್ಲಾಧಿಕಾರಿಗಳ ಕಚೇರಿವರೆಗೆ ನಡೆಯುತ್ತಿರುವ ಪಾದಯಾತ್ರೆಯ ಎರಡನೇ ದಿನವಾದ ಶನಿವಾರ, ಮುರಾನಪೂರ ಗ್ರಾಮದ ಬಳಿ ಶಾಸಕಿ ಕರೆಮ್ಮ ಜಿ. ನಾಯಕ ಅವರು ಹೋರಾಟಗಾರರನ್ನು ಭೇಟಿ ಮಾಡಿ ಬೆಂಬಲ ವ್ಯಕ್ತಪಡಿಸಿದರು.

ಬಾಕ್ಸ್ ನಲ್ಲಿ

ಈ ಸಂದರ್ಭದಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಹೋರಾಟಗಾರರನ್ನು ಸನ್ಮಾನಿಸಿದ ಶಾಸಕರು, ಅವರಿಗೆ ಹಣ್ಣುಹಂಪಲು ಮತ್ತು ನೀರು ನೀಡಿ ಶುಭ ಹಾರೈಸಿದರು. ಅಲ್ಲದೆ, ಹೋರಾಟಕ್ಕೆ ದೇಣಿಗೆ ನೀಡಿ ತಮ್ಮ ಬೆಂಬಲ ಸೂಚಿಸಿದರು.

ಅಕ್ಟೋಬರ್ 27ರಂದು ರಾಯಚೂರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹಮ್ಮಿಕೊಳ್ಳಲಾಗಿರುವ ಬೃಹತ್ ಪ್ರತಿಭಟನೆಯ ಕುರಿತು ಪ್ರಾಂತ ರೈತ ಸಂಘಟನೆಯ ತಾಲೂಕು ಕಾರ್ಯದರ್ಶಿ ಮೌನೇಶ ಜಾಲಹಳ್ಳಿ ಅವರು ಶಾಸಕರಿಗೆ ಮಾಹಿತಿ ನೀಡಿದರು. ರೈತರು ಮತ್ತು ಕೃಷಿ ಕೂಲಿಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಪಾದಯಾತ್ರೆಯ ಉದ್ದೇಶವನ್ನು ವಿವರಿಸಿದರು.

ಈ ವೇಳೆ ಸಂಘಟನೆಗಳ ಮುಖಂಡರು, ನಾರಾಯಣಪುರ ಬಲದಂಡೆ ಕಾಲುವೆಗೆ ನವೆಂಬರ್ ಅಂತ್ಯದವರೆಗೆ ನೀರು ಹರಿಸುವುದು, ವಿದ್ಯುತ್ ಸಮಸ್ಯೆ ಪರಿಹರಿಸುವುದು, ವಸತಿ ನಿವೇಶನಗಳನ್ನು ಒದಗಿಸುವುದು ಹಾಗೂ ಭೂಮಿಯ ಹಕ್ಕು ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಶಾಸಕರ ಗಮನಕ್ಕೆ ತಂದರು.

ಬಾಕ್ಸ್ ನಲ್ಲಿ

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕಿ ಕರೆಮ್ಮ ಜಿ. ನಾಯಕ ಅವರು, ನಾರಾಯಣಪುರ ಬಲದಂಡೆ ಕಾಲುವೆಯ ನೀರಾವರಿ ಸಮಸ್ಯೆಯನ್ನು ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದೆ. ಸ್ಥಳೀಯವಾಗಿ ರೈತರು ಮತ್ತು ಕೃಷಿ ಕೂಲಿಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಪರಿಹಾರ ಕಲ್ಪಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಪಾದಯಾತ್ರೆಗೆ ಶುಭ ಹಾರೈಸಿದ ಶಾಸಕರಿಗೆ ಪ್ರಾಂತ ರೈತ ಸಂಘಟನೆ, ಕೃಷಿ ಕೂಲಿಕಾರ್ಮಿಕರ ಸಂಘಟನೆಗಳ ಮುಖಂಡರು ಹಾಗೂ ರೈತರ ಪರವಾಗಿ ಧನ್ಯವಾದಗಳನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಹಾಲಿಂಗ ದೊಡ್ಡಮನಿ, ಸಂತೋಷ ತ್ಯಾಪ್ಲಿ, ಬಸವರಾಜ ಲಿಂಗದಹಳ್ಳಿ, ಶಿವರಾಜ ನಡಿಗೇರ್, ಚಂದ್ರಶೇಖರ ಕುನಿಗುಂದಿ, ರಂಗನಾಥ ಬುಂಕಲದೊಡ್ಡಿ, ಮಾನಪ್ಪ ಲಿಂಗದಹಳ್ಳಿ, ಸುರೇಶಗೌಡ, ತಮ್ಮಣ್ಣ, ನರೇಶ, ಅಂಬ್ರೇಶ, ರಮೇಶ, ಗಂಗಪ್ಪ, ಗೌಡಪ್ಪ ಹಾಗೂ ಶರಣಬಸವ ಸೇರಿದಂತೆ ಇತರರು ಉಪಸ್ಥಿತರಿದ್ದರು.

**ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ**
📲Get App