🔥 TRENDING સુરતમાં નવરાત્રિ આયોજકો માટે ફાયર NOC... Supreme Court Clarifies New Form 6 Sta... Maharashtra BJP alleges Congress coerc... Fire at Sangameshwar Scrap Warehouse C... Rahul Gandhi Calls MPSC Chief’s Resign... UP Board Topper Gyanesh Kumar Secures...
12 Oct 2026•
ગુજરાતી मराठी ਪੰਜਾਬੀ বাংলা
National

ಮೈಸೂರು ದಸರಾ ಪೂರ್ವ ಸಿದ್ಧತಾ

✍️ Reporter: ಕೆ ಆರ್ ಸುರೇಶ್ 🗓 12 Oct 2026, 02:08 PM 👁 28
Share: 💬 WhatsApp 📘 Facebook 𝕏 Post

ಸರಕಾರಿ ಬಸ್‌ನಲ್ಲಿ ಸಂಚರಿಸಿ ದಸರಾ ಸಿದ್ಧತೆ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ. ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದಲ್ಲಿ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಯಾವುದೇ ರೀತಿಯ ಸಾರಿಗೆ ಹಾಗೂ ಟ್ರಾಫಿಕ್ ಕಿರಿಕಿರಿ ಉಂಟಾಗಬಾರದು ಎನ್ನುವ ಉದ್ದೇಶದಿಂದ ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಖುದ್ದು ಕೆಎಸ್‌ಆರ್‌ಟಿಸಿ ಬಸ್ .

ಸರಕಾರಿ ಬಸ್‌ನಲ್ಲಿ ಸಂಚರಿಸಿ ದಸರಾ ಸಿದ್ಧತೆ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ.

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಗರದಲ್ಲಿ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ಯಾವುದೇ ರೀತಿಯ ಸಾರಿಗೆ ಹಾಗೂ ಟ್ರಾಫಿಕ್ ಕಿರಿಕಿರಿ ಉಂಟಾಗಬಾರದು ಎನ್ನುವ ಉದ್ದೇಶದಿಂದ ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಖುದ್ದು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಂಚರಿಸಿ, ವಿವಿಧ ಸ್ಥಳಗಳ ಪರಿವೀಕ್ಷಣೆ ನಡೆಸಿ ಗಮನ ಸೆಳೆದಿದ್ದಾರೆ.
ಸಾಮಾನ್ಯವಾಗಿ ಗಣ್ಯರ ಹಾಗೂ ಅಧಿಕಾರಿಗಳ ಸಾಲು ಸಾಲು ವಾಹನಗಳ ಬೆಂಗಾವಲು ಪಡೆ ಸಂಚಾರದಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡಚಣೆಯಾಗುವುದನ್ನು ತಡೆಯಲು ಮತ್ತು ರಸ್ತೆಗಳ ವಾಸ್ತವ ಸ್ಥಿತಿಯನ್ನು ತಿಳಿಯಲು ಸಚಿವರು ಈ ವಿಶೇಷ ಹಾಗೂ ಮಾದರಿ ಕ್ರಮ ಕೈಗೊಂಡರು.
ಮಹಾರಾಜ ಕ್ರೀಡಾಂಗಣದ ಆಹಾರ ಮೇಳ ಆವರಣ. ಕೆ.ಆರ್.ಎಸ್. ರಸ್ತೆಯ ರಾಯಲ್ ಇನ್ ಜಂಕ್ಷನ್, ಕೆಂಪೇಗೌಡ ಜಂಕ್ಷನ್, ಪುಷ್ಪಾಶ್ರಮ ರಸ್ತೆ ಹಾಗೂ ದೇವಾಲಪುರ ಸರ್ಕಲ್ ಬಳಿಯ ರಸ್ತೆ ಕಾಮಗಾರಿಗಳು. ಉತ್ತನಹಳ್ಳಿಯ ಯುವ ದಸರಾ ಬೃಹತ್ ವೇದಿಕೆ , ಚಾಮುಂಡಿ ಬೆಟ್ಟ ಹಾಗೂ ವಸ್ತುಪ್ರದರ್ಶನ ಆವರಣ, ಮೈಸೂರು ಅರಮನೆ ಅಂಗಳಕ್ಕೆ ಬಸ್ ನಲ್ಲಿ ತೆರಳಿ ವೀಕ್ಷಿಸಿ ಪರಿಶೀಲಿಸಿದರು.
ಈ ಸ್ಥಳ ಪರಿಶೀಲನಾ ಸಂದರ್ಭದಲ್ಲಿ ಶಾಸಕರಾದ ಶ್ರೀ ದರ್ಶನ್ ಧ್ರುವನಾರಾಯಣ್, ಶ್ರೀ ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಡಾ. ಡಿ. ತಿಮ್ಮಯ್ಯ, ಶ್ರೀ ಶಿವಕುಮಾರ್, ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಬೀರಿಹುಂಡಿ ಬಸವಣ್ಣ, ಸೇರಿದಂತೆ ಹಲವು ಹಿರಿಯ ನಾಯಕರು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
📲Get App