🔥 ट्रेंडिंग Hasanpur vidhansabha Amroha महाड तालुका, बिरवाडी भादेकोंड येथे बिब... रजौली थाना क्षेत्र में पिकअप में सो रह... प्रधानमंत्री आवास योजना से साकार हुआ प... सेवा संकल्प अभियान में ओंकारेश्वर के श... गुवाहाटी ट्रैफिक पुलिस को मिली 50 नई म...
04 अक्टू. 2026•
ગુજરાતી मराठी ਪੰਜਾਬੀ বাংলা
शिक्षा

ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ‘ತೆರೆದ ಮನೆ’ ಕಾರ್ಯಕ್ರಮ – ಶಾಲಾ ಮಕ್ಕಳಿಗೆ ಕಾನೂನು ಮತ್ತು ಸುರಕ್ಷತೆಯ ಪಾಠ

✍️ रिपोर्टर: Uma R 🗓 04 अक्टू. 2026, 08:04 PM 👁 15
शेयर करें: 💬 WhatsApp 📘 Facebook 𝕏 Post

ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾದ ‘ತೆರೆದ ಮನೆ’ ಕಾರ್ಯಕ್ರಮದಲ್ಲಿ ಜೆ.ಪಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಕಾನೂನು, ಸುರಕ್ಷತೆ ಮತ್ತು ಪೊಲೀಸ್ ಕಾರ್ಯಚಟುವಟಿಕೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಾಯಿತು.

ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿಗಳಲ್ಲಿ ಪೊಲೀಸ್ ಬಗ್ಗೆ ಇರುವ ಭಯವನ್ನು ನಿವಾರಿಸಿ, ಕಾನೂನು ಪಾಲನೆ ಹಾಗೂ ಸಮಾಜದಲ್ಲಿ ರಕ್ಷಕರಾಗಿ ಪೊಲೀಸ್ ಪಾತ್ರದ ಅರಿವು ಮೂಡಿಸುವ ಉದ್ದೇಶದಿಂದ ‘ತೆರೆದ ಮನೆ’ ಕಾರ್ಯಕ್ರಮ ಆಯೋಜಿಸಲಾಯಿತು.

ಜೆ.ಪಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳನ್ನು ವಿಶೇಷವಾಗಿ ಆಹ್ವಾನಿಸಿ, ಪೊಲೀಸ್ ಇಲಾಖೆಯ ದೈನಂದಿನ ಕಾರ್ಯಚಟುವಟಿಕೆಗಳ ವಿವರಗಳನ್ನು ನೀಡಲಾಯಿತು. ಕಾರ್ಯಕ್ರಮದ ನೇತೃತ್ವ ವಹಿಸಿದ ತುರುವೇಕೆರೆ ಪೊಲೀಸ್ ಉಪನಿರೀಕ್ಷಕರಾದ (ಪಿಎಸ್ಐ) ಮೂರ್ತಿ ಟಿ. ಅವರು ದೂರು ಸ್ವೀಕರಿಸುವ ವಿಧಾನ, ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆ, ಲಾಕಪ್ ವ್ಯವಸ್ಥೆ, ವೈರ್‌ಲೆಸ್ ಸಂವಹನ ಹಾಗೂ ಅಪರಾಧ ತನಿಖಾ ಹಂತಗಳ ಬಗ್ಗೆ ಪ್ರಾಯೋಗಿಕ ವಿವರಣೆ ನೀಡಿದರು.

ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯ ಮಹತ್ವವನ್ನು ಒತ್ತಿ ಹೇಳಿ, 112, ಚೈಲ್ಡ್‌ಲೈನ್ 1098 ಮುಂತಾದ ಸಹಾಯವಾಣಿಗಳ ಸಂಖ್ಯೆಗಳು, ಸಂಕಷ್ಟದ ಸಮಯದಲ್ಲಿ ಪೊಲೀಸ್ ಸಂಪರ್ಕಿಸುವ ವಿಧಾನ ಹಾಗೂ ಸಂಚಾರ ನಿಯಮಗಳ ಪಾಲನೆ ಬಗ್ಗೆ ಪಿಎಸ್ಐ ಮೂರ್ತಿ ಮನಮುಟ್ಟುವಂತೆ ವಿವರಿಸಿದರು.

ಆರಂಭದಲ್ಲಿ ಆತಂಕದಲ್ಲಿದ್ದ ಮಕ್ಕಳು ಅಧಿಕಾರಿಗಳ ಆತ್ಮೀಯ ಒಡನಾಟದಿಂದ ಉತ್ಸಾಹದಿಂದ ಭಾಗವಹಿಸಿ, ತಮ್ಮ ಸಂಶಯಗಳನ್ನು ಪರಿಹರಿಸಿಕೊಂಡರು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಶಾಲೆಯ ಶಿಕ್ಷಕ ವೃಂದವೂ ಹಾಜರಿದ್ದರು.
📲Get App