🔥 ट्रेंडिंग સેવા સંકલ્પ અભિયાન માલપુરના ખાતુપગીના મુવાડા ગામે મધ્ય રા... ગુજરાત દારૂબંધી एबीआईएस 2026: भारत के मीडिया एवं मनोरं... फिल्म क्रू ने किया नॉरफ़ॉक पर शॉट्स: ल... सारासोटा हेराल्ड-ट्रिब्यून ने फ़्लोरिड...
03 अक्टू. 2026•
ગુજરાતી मराठी ਪੰਜਾਬੀ বাংলা

ಬೀದರ ನಗರದ ಸುದ್ದಿ

✍️ रिपोर्टर: Basavaraj pujari 🗓 03 अक्टू. 2026, 02:05 PM 👁 19
शेयर करें: 💬 WhatsApp 📘 Facebook 𝕏 Post

ಬೀದರ: ಪಿಸ್ತೋಲ್ ಮತ್ತು ಮದ್ದುಗುಂಡುಗಳ ಜಪ್ತಿ, ನಾಲ್ಕು ಆರೋಪಿಗಳು ಬಂಧನ

ಬೀದರ: ಪಿಸ್ತೋಲ್ ಮತ್ತು ಮದ್ದುಗುಂಡುಗಳ ಜಪ್ತಿ, ನಾಲ್ಕು ಆರೋಪಿಗಳು ಬಂಧನ
: ಬೀದರ ಸಬ್ ಅರ್ಬನ್ ಪೊಲೀಸ್ ಠಾಣೆಯ ಅಡಿಯಲ್ಲಿ ದಾಖಲಾಗಿದ್ದ ಅಪರಾಧ ಪ್ರಕರಣ ಸಂಖೆ 43/2026 ಕಲಂ 25(1)(ಎ), 25(1)(ಬಿ), 27 ರ ಅಡಿಯಲ್ಲಿ ನಾಲ್ಕು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಪೊಲೀಸರು ಆರೋಪಿಗಳಿಂದ 4,00,000 ರೂ ಮೌಲ್ಯದ 5 ಪಿಸ್ತೋಲ್ ಮತ್ತು 12 ಜೀವಂತ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಇಬ್ಬರು ಆರೋಪಿಗಳು ಅಮನಜೀತಸಿಂಗ್ ಮತ್ತು ವೆಂಕಟೇಶ @ ವೆಂಕಿ ಅವರು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಈ ಪ್ರಕರಣದ ತನಿಖೆಯನ್ನು ಶ್ರೀ ಪ್ರದೀಪ್ ಗುಂಟಿ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಮತ್ತು ಶ್ರೀ ಚಂದ್ರಕಾಂತ ಪೂಜಾರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮಾರ್ಗದರ್ಶನದಲ್ಲಿ ಶ್ರೀ ಎನ್.ಡಿ ಸನಧಿ ಉಪಾಧೀಕ್ಷಕರು ಮತ್ತು ತಂಡದವರು ನಡೆಸಿದ್ದಾರೆ. ಪ್ರಮುಖ ಆರೋಪಿಯಾದ ಬಲಬೀರಸಿಂಗ್ @ ಶೇರಾ ಜಾಧವನಿಂದ 3 ಪಿಸ್ತೋಲ್ ಮತ್ತು 4 ಜೀವಂತ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದು, ಇತರ ಆರೋಪಿಗಳಾದ ಆನಂದಕುಮಾರ, ಈಶ್ವರ ಮತ್ತು ಅಶ್ವಿನರನ್ನು ದಸ್ತಗಿರಿ ಮಾಡಿದ್ದಾರೆ. ಪ್ರಕರಣದಲ್ಲಿ ಹೆಚ್ಚಿನ ವಿಚಾರಣೆ ಮುಂದುವರೆದಿದೆ.
📲Get App