ಶ್ರಾವಣ ಮಾಸದ ಭಜನಾ ಮುಕ್ತಾಯ ಕಾರ್ಯಕ್ರಮ ದೇವರಭೂಪುರ ಮಠ
ಸುದ್ದಿಗಾಗಿ ಸಂಪರ್ಕಿಸಿ
ಶ್ರಾವಣ ಮಾಸದ ಭಜನಾ ಮುಕ್ತಾಯ ಸಮಾರಂಭ
ವಿಶೇಷ ಪೂಜೆ – ಭಕ್ತರ ದರ್ಶನ ಹಾಗೂ ಆಶೀರ್ವಾದ
ದೇವರ ಭೂಪುರ: ಸುಕ್ಷೇತ್ರ ದೇವರ ಭೂಪುರದ ಶ್ರೀ ಅಮರೇಶ್ವರ ದೇವರ ಶ್ರಾವಣ ಮಾಸದ ಭಜನಾ ಮುಕ್ತಾಯ ಸಮಾರಂಭವು ಸೆ. 28 2026ರ ಸೋಮವಾರ ಭಕ್ತಿಭಾವದಿಂದ ನೆರವೇರಿತು.
ಈ ಪ್ರಯುಕ್ತ ಶ್ರೀ ವೇ. ಮೂ. ಸಿದ್ದಯ್ಯ ಸ್ವಾಮಿ ಬ್ಯಾಳಿಮಠ ಅವರ ಮನೆಯಲ್ಲಿ ಶ್ರೀ ಅಮರೇಶ್ವರ ದೇವರಿಗೆ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರೀ ಷ. ಬ್ರ. ಅಮರೇಶ್ವರ ಗುರು ಅಭಿನವ ಗಜದಂಡ ಶಿವಾಚಾರ್ಯ ಮಹಾಸ್ವಾಮಿಗಳವರ ಅಮೃತ ಹಸ್ತದಿಂದ ವಿಶೇಷ ಪೂಜಾ ವಿಧಿವಿಧಾನಗಳು ನೆರವೇರಿದವು.
ಸಮಾರಂಭದಲ್ಲಿ ನೂರಾರು ಭಕ್ತರು ಪಾಲ್ಗೊಂಡು ಶ್ರೀ ಅಮರೇಶ್ವರ ದೇವರ ದರ್ಶನ ಪಡೆದು, ಮಹಾಸ್ವಾಮಿಗಳವರ ಆಶೀರ್ವಾದ ಪಡೆದರು. ಭಕ್ತರು ಶ್ರೀ ದೇವರನ್ನು ಶ್ರದ್ಧಾಭಕ್ತಿಯಿಂದ ಆರಾಧಿಸಿ, ಹರಕೆ ಕಟ್ಟಿಕೊಂಡು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ನಂತರ ಭಕ್ತಾದಿಗಳಿಗೆ ಮಹಾಪ್ರಸಾದ ವಿನಿಯೋಗ ನಡೆಯಿತು. ಶ್ರೀ ಅಮರೇಶ್ವರ ದೇವರ ದರ್ಶನ ಹಾಗೂ ಮಹಾಸ್ವಾಮಿಗಳವರ ಆಶೀರ್ವಾದ ಪಡೆದ ಭಕ್ತರು ಪುನೀತರಾದರು.
ಶ್ರಾವಣ ಮಾಸದ ಭಜನಾ ಮುಕ್ತಾಯ ಸಮಾರಂಭವು ಭಕ್ತರ ಸಾಮೂಹಿಕ ಶ್ರದ್ಧೆ, ಭಕ್ತಿ ಹಾಗೂ ಆಧ್ಯಾತ್ಮಿಕ ವಾತಾವರಣದೊಂದಿಗೆ ಯಶಸ್ವಿಯಾಗಿ ನೆರವೇರಿತು.