ಆಯುರ್ವೇದವು ಸಮಗ್ರ ಆರೋಗ್ಯಕ್ಕೆ ಭದ್ರ ಬುನಾದಿ: ಜಿಲ್ಲಾ ಆಯುಷ್ ಅಧಿಕಾರಿ ಡಾ. ಪರ್ವತ ಹಿರೇಗೌಡರ
11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ
ಕೊಪ್ಪಳ: ಆಯುರ್ವೇದವು ಸಮಗ್ರ ಆರೋಗ್ಯಕ್ಕೆ ಭದ್ರ ಬುನಾದಿಯಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಪರ್ವತ ಬ. ಹಿರೇಗೌಡರ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಎನ್.ಐ.ಎಂ.ಎ., ಎ.ಎಫ್.ಐ., ಅಗಸ್ತ್ಯ ಆಯುರ್ವೇದ ಮಹಾವಿದ್ಯಾಲಯ, ದದೇಗಲ್‌ನ ಎಸ್.ಎ. ನಿಂಗೋಜಿ ಆಯುರ್ವೇದ ಮಹಾವಿದ್ಯಾಲಯ ಹಾಗೂ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಬುಧವಾರ (ಸೆ. 23ರಂದು) ಹಮ್ಮಿಕೊಂಡಿದ್ದ 11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
"ಸ್ವಸ್ಥ ನಾಳೆಗಳಿಗಾಗಿ ಆಯುರ್ವೇದ" ಎಂಬ ಧ್ಯೇಯವಾಕ್ಯದೊಂದಿಗೆ 11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಆಯುರ್ವೇದ ಸಸ್ಯವನ ನಿರ್ಮಿಸಲು ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದಾರೆ. ಜೊತೆಗೆ ಚಿಕ್ಕಮಾದಿನಾಳದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ 1 ಎಕರೆ ಜಾಗದಲ್ಲಿ ಸಸ್ಯವನ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಇಂದ್ರಕೀಲ ಪರ್ವತದ ಕಲ್ಲಿನಲ್ಲಿ ಆಯುರ್ವೇದ ಸಸ್ಯ ಬೆಳೆಸಿ ಜಾಗತಿಕ ತಾಪಮಾನ ತಗ್ಗಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ವೇದಿಕೆ ಕಾರ್ಯಕ್ರಮವನ್ನು ಎನ್.ಐ.ಎಂ.ಎ ಅಧ್ಯಕ್ಷ ಡಾ. ಶಿವನಗೌಡ ಪಾಟೀಲ್ ಹಾಗೂ ಎ.ಎಫ್.ಐ ಅಧ್ಯಕ್ಷ ಡಾ. ವಿಶ್ವನಾಥ ನಾಲವಾಡ ಅವರು ಪಂಚವಟಿ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
*ವಿಷಯ ತಜ್ಞರಿಂದ ಉಪನ್ಯಾಸ:* ಕಾರ್ಯಕ್ರಮದ ಅಂಗವಾಗಿ ಗಂಗಾವತಿ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಗುರುರಾಜ ಎ. ಉಮಚಗಿ ಅವರು ‘ಗಂಗಾವತಿ ಪಕ್ಷಾಘಾತ ಚಿಕಿತ್ಸಾ ಕೇಂದ್ರ’ದ ಕುರಿತು ಉಪನ್ಯಾಸ ನೀಡಿದರು.
ಎಸ್.ಎ. ನಿಂಗೋಜಿ ಆಯುರ್ವೇದ ಕಾಲೇಜಿನ ಅಧ್ಯಾಪಕ ಡಾ. ಮಂಜುನಾಥ ಸಜ್ಜನ್ ಅವರು ‘ಜಾಗತಿಕ ಆಯುರ್ವೇದಕ್ಕಾಗಿ ಆಯುರ್ವೇದ ನಾವೀನ್ಯತೆ’ ವಿಷಯದ ಕುರಿತು ಮಾತನಾಡಿದರು.
ಯಲಬುರ್ಗಾ ಆಸ್ಪತ್ರೆಯ ಡಾ. ಶಿಲ್ಪಾ ಬಾಚಲಾಪುರ ಅವರು ಪಂಚಕರ್ಮ ಮತ್ತು ಯೋಗದಿಂದ ಸಿಗುವ ದೈಹಿಕ ಹಾಗೂ ಮಾನಸಿಕ ನೆಮ್ಮದಿಯ ಮಹತ್ವವನ್ನು ವಿವರಿಸಿದರು.
ಗಂಗಾವತಿ ತಜ್ಞ ವೈದ್ಯೆ ಡಾ. ವೀಣಾ ಬಿಜ್ಜಳ ಮಾತನಾಡಿ, ಆಯುರ್ವೇದವು ಕೇವಲ ಚಿಕಿತ್ಸೆಯಲ್ಲ, ಅದು ದೈನಂದಿನ ಶಿಸ್ತುಬದ್ಧ ಜೀವನಶೈಲಿ ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಅಗಸ್ತ್ಯ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕ ಡಾ. ಪ್ರಭು ನಾಗಲಾಪುರ ಹಾಗೂ ಗೌರೀಪುರ ವೈದ್ಯಾಧಿಕಾರಿ ಡಾ. ಯಮನಪ್ಪ ಜೆ. ಶಿರವಾರ ಉಪಸ್ಥಿತರಿದ್ದರು.
ಆಯುಷ್ ವೈದ್ಯಾಧಿಕಾರಿಗಳ ತಂಡದವರು ಪ್ರಾರ್ಥನೆ ಗೀತೆಯನ್ನು ಹಾಡಿದರು. ಡಾ. ಗುರುರಾಜ ಉಮಚಗಿ ಕಾರ್ಯಕ್ರಮ ನಿರೂಪಿಸಿದರು, ಡಾ. ಮಾರುತಿ ದೊಡ್ಮನಿ ವಂದನಾರ್ಪಣೆ ಮಾಡಿದರು. ಜಿಲ್ಲೆಯ ಆಯುಷ್ ವೈದ್ಯರು ಹಾಗೂ ವಿದ್ಯಾರ್ಥಿಗಳು ಬಹುಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
*ಜಾಗೃತಿ ಜಾಥಾ:* ಕಾರ್ಯಕ್ರಮಕ್ಕೂ ಮುನ್ನ ಶ್ರೀ ಗವಿಮಠದ ಆವರಣದಿಂದ ಆಯೋಜಿಸಲಾಗಿದ್ದ ಜಾಗೃತಿ ಜಾಥಕ್ಕೆ ಜಿಲ್ಲಾ ಆಯುಷ್ ಅಧಿಕಾರಿ ಡಾ. ಪರ್ವತ ಬ. ಹಿರೇಗೌಡರ ಅವರು ಡೊಳ್ಳು ಬಾರಿಸಿ, ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಜಾಥಾವು ಗಂಜ್ ವೃತ್ತದ ಮಾರ್ಗವಾಗಿ ಜಿಲ್ಲಾಡಳಿತ ಭವನದ ವರೆಗೆ ಅದ್ದೂರಿಯಾಗಿ ನಡೆಯಿತು. ಈ ಜಾಥಾದಲ್ಲಿ 400ಕ್ಕೂ ಹೆಚ್ಚು ಆಯುಷ್ ವೈದ್ಯಾಧಿಕಾರಿಗಳು, ಸಿಬ್ಬಂದಿ ಹಾಗೂ ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.