🔥 ट्रेंडिंग દીપાબેન મિલનભાઈ ઠક્કરની અમદાવાદ જિલ્લા... ନିର୍ବାଚନ ଫଳାଫଳ ପ୍ରକାଶ ପରେ ରାଜ୍ୟ ରାଜନୀତ... ਬਠਿੰਡਾ ’ਚ ਕਿਸਾਨਾਂ ਨਾਲ ਸੰਵਾਦ, ਸ਼ਿਵਰਾਜ ਚੌ... હિંમતનગરમાં સ્પા સેન્ટરોની આડમાં ગેરકા... नागौर एसीबी ने कोतवाली थाने के एएसआई क... બોટાદ: ગઢડામાં ઘેલો નદીમાંથી 110 વર્ષ...
23 सित. 2026
ગુજરાતી मराठी ਪੰਜਾਬੀ বাংলা
ಕಲ್ಲು ಹಾಸಿದ ರಸ್ತೆ... ಡಾಂಬರ್‌ಗಾಗಿ ಕಾಯುತ್ತಿರುವ ಜನ!

ಕಲ್ಲು ಹಾಸಿದ ರಸ್ತೆ... ಡಾಂಬರ್‌ಗಾಗಿ ಕಾಯುತ್ತಿರುವ ಜನ!

✍️ रिपोर्टर: ಮಂಜುನಾಥ ಹೂಡೇಂ 🗓 23 सित. 2026, 06:25 PM 👁 9
शेयर करें: 💬 WhatsApp 📘 Facebook 𝕏 Post

ಮೂರು ತಿಂಗಳಿಂದ ಅಪೂರ್ಣ ಕಾಮಗಾರಿ; ಧೂಳು–ಕಲ್ಲುಗಳ ನಡುವೆ ಸಾಗುತ್ತಿದೆ ಜನಜೀವನ

ಕೂಡ್ಲಿಗಿ: ಅಭಿವೃದ್ಧಿಯ ಹೆಸರಿನಲ್ಲಿ ರಸ್ತೆ ಅಗಲೀಕರಣಗೊಂಡು, ಸುಸಜ್ಜಿತ ರಸ್ತೆಯ ನಿರೀಕ್ಷೆಯಲ್ಲಿದ್ದ ಜನರಿಗೆ ಇದೀಗ ಕಲ್ಲು ಹಾಸಿದ ರಸ್ತೆಯೇ ಸಂಚಾರದ ಸಂಕಷ್ಟವಾಗಿ ಪರಿಣಮಿಸಿದೆ. ಕಾನಹೊಸಹಳ್ಳಿ–ಉಜ್ಜಿನಿ ಸಂಪರ್ಕ ರಸ್ತೆಯ ರಂಗನಾಥನಹಳ್ಳಿ ಹೊರವಲಯದಿಂದ ನಿಂಬಳಗೆರೆ ಅರಣ್ಯ ಪ್ರದೇಶದವರೆಗಿನ ಕಾಮಗಾರಿ ಮೂರು ತಿಂಗಳ ಹಿಂದೆ ಆರಂಭಗೊಂಡಿದ್ದರೂ, ಡಾಂಬರೀಕರಣ ಪೂರ್ಣಗೊಳ್ಳದೆ ಸಾರ್ವಜನಿಕರು ನಿತ್ಯವೂ ಪರದಾಡುವಂತಾಗಿದೆ.
ಅಗಲೀಕರಣ ಆಯ್ತು... ಡಾಂಬರ್‌ ಮಾತ್ರ ಬಾಕಿ!
ಕಾನಹೊಸಹಳ್ಳಿ ಪಟ್ಟಣದಿಂದ ಉಜ್ಜಿನಿ ಸಂಪರ್ಕಿಸುವ ಪ್ರಮುಖ ರಸ್ತೆಯ ಮೊದಲ ಹಂತದ ಕಾಮಗಾರಿ ರಂಗನಾಥನಹಳ್ಳಿ ಹೊರವಲಯದವರೆಗೆ ಪೂರ್ಣಗೊಂಡಿದೆ. ಬಳಿಕ ಎರಡನೇ ಹಂತದಲ್ಲಿ ನಿಂಬಳಗೆರೆ ಅರಣ್ಯ ಪ್ರದೇಶದವರೆಗೆ ರಸ್ತೆ ಅಭಿವೃದ್ಧಿಗೆ ಕಲ್ಲು ಪೀಚಿಂಗ್ ಮಾಡಲಾಗಿದೆ. ಆದರೆ ಅದರ ಮೇಲಿನ ಡಾಂಬರೀಕರಣ ಕಾಮಗಾರಿ ಮಾತ್ರ ಇನ್ನೂ ಆರಂಭವಾಗಿಲ್ಲ.
ಹೀಗಾಗಿ ಕಲ್ಲುಗಳಿಂದ ಕೂಡಿರುವ ರಸ್ತೆಯಲ್ಲಿ ವಾಹನಗಳ ಸಂಚಾರ ದುಸ್ತರವಾಗಿದೆ. ವಾಹನಗಳು ಸಾಗಿದಾಗ ಧೂಳು ಮೇಲೇಳುತ್ತಿದ್ದು, ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ಸುರಿದ ಮಳೆಯಿಂದ ಕಲ್ಲುಗಳ ನಡುವೆ ಕೆಸರು ಉಂಟಾಗಿ ರಸ್ತೆಯ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ.
ಈ ರಸ್ತೆ ಕೇವಲ ಒಂದು ಗ್ರಾಮದ ಸಂಪರ್ಕ ರಸ್ತೆಯಲ್ಲ. ಗಾಣಗಟ್ಟೆ ಮಾಯಮ್ಮ ದೇವಸ್ಥಾನ, ಉಜ್ಜಿನಿ ಪೀಠ ಹಾಗೂ ಕೊಟ್ಟೂರು ಪಟ್ಟಣಕ್ಕೆ ತೆರಳುವ ಪ್ರಮುಖ ಮಾರ್ಗವಾಗಿದೆ. ರಂಗನಾಥನಹಳ್ಳಿ, ಬಯಲುತುಂಬರಗುದ್ದಿ, ಸುರವ್ವನಹಳ್ಳಿ, ನಿಂಬಳಗೆರೆ, ಬೆಳಕ್ಕಟ್ಟೆ ಹಾಗೂ ಹಾರಕಭಾವಿ ಸೇರಿದಂತೆ ಹಲವು ಗ್ರಾಮಗಳ ಜನರು ಆಸ್ಪತ್ರೆ, ದಿನಸಿ, ಶಿಕ್ಷಣ ಹಾಗೂ ನಿತ್ಯದ ಅಗತ್ಯಗಳಿಗಾಗಿ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ರಸ್ತೆ ಕಾಮಗಾರಿ ಅಪೂರ್ಣವಾಗಿರುವುದರಿಂದ ಗ್ರಾಮಸ್ಥರು ಪ್ರತಿನಿತ್ಯ ಅಪಾಯದ ನಡುವೆ ಸಂಚರಿಸುವಂತಾಗಿದೆ. ಕಲ್ಲುಗಳ ಮೇಲೆ ದ್ವಿಚಕ್ರ ವಾಹನಗಳು ಜಾರಿಬಿದ್ದು ಕೆಲವರು ಗಾಯಗೊಂಡಿರುವ ಘಟನೆಗಳೂ ನಡೆದಿವೆ ಎಂದು ಸ್ಥಳೀಯರು ದೂರಿದ್ದಾರೆ. ಕಾಮಗಾರಿ ವಿಳಂಬದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲಿಸಬೇಕು. ಕೇವಲ ತ್ವರಿತವಾಗಿ ಕಾಮಗಾರಿ ಮುಗಿಸುವುದಕ್ಕಿಂತ ಗುಣಮಟ್ಟಕ್ಕೆ ಆದ್ಯತೆ ನೀಡಿ ಡಾಂಬರೀಕರಣ ಪೂರ್ಣಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
📲Get App