ಕಾನಹೊಸಹಳ್ಳಿಯಲ್ಲಿ ಆಧಾರ್ ಕೇಂದ್ರ ಸ್ಥಗಿತ
80ಕ್ಕೂ ಹೆಚ್ಚು ಗ್ರಾಮಗಳ ಜನರಿಗೆ ಸಂಕಷ್ಟ
ಕೂಡ್ಲಿಗಿ: ಕಾನಹೊಸಹಳ್ಳಿ ಹೋಬಳಿ ಕೇಂದ್ರದ ನಾಡಕಚೇರಿಯಲ್ಲಿದ್ದ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಕೇಂದ್ರ ಕೆಲವು ತಿಂಗಳಿಂದ ಸ್ಥಗಿತಗೊಂಡಿದ್ದು, 80ಕ್ಕೂ ಹೆಚ್ಚು ಗ್ರಾಮಗಳ ಜನರು ಪರದಾಡುವಂತಾಗಿದೆ.
ಹೂಡೇಂ, ಪೂಜಾರಹಳ್ಳಿ, ತಿಪ್ಪೇಹಳ್ಳಿ, ತಾಯಕನಹಳ್ಳಿ, ಆಲೂರು, ಕೆಂಚಮಲ್ಲನಹಳ್ಳಿ, ಹಿರೇಕುಂಬಳಗುಂಟೆ, ಸಿದ್ದಾಪುರ ಸೇರಿದಂತೆ ಹಲವು ಗ್ರಾಮಗಳ ಜನರು ಆಧಾರ್ ಸೇವೆಗಾಗಿ ದೂರದ ಕೇಂದ್ರಗಳಿಗೆ ತೆರಳಬೇಕಾಗಿದೆ. ಇದರಿಂದ ಪ್ರಯಾಣ ವೆಚ್ಚ ಹಾಗೂ ಸಮಯ ವ್ಯರ್ಥವಾಗುತ್ತಿದೆ.
ಕೇಂದ್ರ ಪುನರಾರಂಭದ ನಿರೀಕ್ಷೆಯಲ್ಲಿ ನಾಡಕಚೇರಿಗೆ ಬಂದು ನಿರಾಶೆಯಿಂದ ವಾಪಸ್ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರ ಸಮಸ್ಯೆ ಪರಿಗಣಿಸಿ ಆಧಾರ್ ಕೇಂದ್ರವನ್ನು ಶೀಘ್ರ ಪುನರಾರಂಭಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.