🔥 TRENDING સુમેરપુરમાં કાર‑બાઈક ટક્કર, ડ્રાઇવર સ્... Key Accused in Sagar Hooch Tragedy Arr... Ganpati chants reverberate through Kum... Congress workers march on foot in Mung... Madhya Pradesh transfers 10 IPS, 127 S... સિનોર તાલુકામાં વરસાદની આવકથી ખેડુતોમા...
13 Sep 2026
ગુજરાતી मराठी ਪੰਜਾਬੀ বাংলা

ಜಾಲಹಳ್ಳಿಯಲ್ಲಿ ಗಣೇಶೋತ್ಸವ ಶಾಂತಿಯುತ ಆಚರಣೆಗೆ ಸಿಪಿಐ ಪುಂಡಲೀಕ ಪಾಟತಾರ್ ಕರೆ

✍️ Reporter: Khajahussain baba Jalahalli 🗓 12 Sep 2026, 12:00 PM 👁 24
Share: 💬 WhatsApp 📘 Facebook 𝕏 Post
📰 ಜಾಲಹಳ್ಳಿ–ದೇವದುರ್ಗ ಬ್ರೇಕಿಂಗ್ ನ್ಯೂಸ್

ಜಾಲಹಳ್ಳಿಯಲ್ಲಿ ಗಣೇಶೋತ್ಸವ ಶಾಂತಿಯುತ ಆಚರಣೆಗೆ ಸಿಪಿಐ ಪುಂಡಲೀಕ ಪಾಟತಾರ್ ಕರೆ

ಜಾಲಹಳ್ಳಿ, ಸೆ.11: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಸಿಪಿಐ ಪುಂಡಲೀಕ ಪಾಟತಾರ್ ಅವರ ನೇತೃತ್ವದಲ್ಲಿ ಗಣೇಶೋತ್ಸವ ಶಾಂತಿ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಸಿಪಿಐ ಪುಂಡಲೀಕ ಪಾಟತಾರ್, ಗಣೇಶೋತ್ಸವವನ್ನು ಶಾಂತಿಯುತವಾಗಿ ಹಾಗೂ ಸೌಹಾರ್ದಯುತವಾಗಿ ಆಚರಿಸುವಂತೆ ಕರೆ ನೀಡಿದರು. ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪನಾ ಸ್ಥಳದಲ್ಲಿ ಕನಿಷ್ಠ ಇಬ್ಬರು ಜವಾಬ್ದಾರಿಯುತ ವ್ಯಕ್ತಿಗಳು ಸದಾ ಇರುವಂತೆ ನೋಡಿಕೊಳ್ಳಬೇಕು. ಭದ್ರತಾ ದೃಷ್ಟಿಯಿಂದ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸೂಚಿಸಿದರು.

ಯುವಕರು ದುಶ್ಚಟ ಹಾಗೂ ಮದ್ಯಪಾನದಿಂದ ದೂರವಿದ್ದು, ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿ, ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಅವರು ತಿಳಿಸಿದರು.

ಪಿಎಸ್‌ಐ ವೈಶಾಲಿ ಝಳಕಿ, ವಕೀಲ ರಾಜಾವಾಸುದೇವ ನಾಯಕ ಹಾಗೂ ಸಾಬಣ್ಣ ಕಮ್ಮಲದಿನ್ನಿ ಅವರು ಸಭೆಯಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ ಊರಿನ ಮುಖಂಡರಾದ ಶ್ರೀಧರ್ ದೇಸಾಯಿ, ಶಂಕರಗೌಡ ಪಾಟೀಲ, ಗೋವಿಂದಪ್ಪ ಅಲಗೇರಿ, ದುರುಗಪ್ಪ ರಾಂಪಳ್ಳಿ, ವೆಂಕೋಬ ಪೂಜಾರಿ, ವೆಂಕೋಬ ತೋಟದ್, ಬಾಳಪ್ಪ ಬಾವಿಮನಿ, ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ ಗೋಪಾಳಪುರ, ರಂಗಪ್ಪ ತೊಗರಿ, ರಂಗಪ್ಪ ಬಂಡಿ, ರಮೇಶ್ ಬಾವಿಮನಿ, ಮಲ್ಲು ಚಿತಲಕುಂಟಿ, ಅಪ್ಪು ಪಾಟೀಲ್, ರಾಜು ದೊರೆ ಸೇರಿದಂತೆ ಗಣೇಶೋತ್ಸವ ಸಮಿತಿ ಸದಸ್ಯರು, ಗ್ರಾಮಸ್ಥರು ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

ಪತ್ರಕರ್ತರಾದ ಅಲಿಬಾಬಾ ಪಟೇಲ್, ಗಿರಿಯಪ್ಪ ಪೂಜಾರಿ, ಮಹಾಲಿಂಗ ದೊಡ್ಮನಿ, ನಂದಪ್ಪ ಪಿ. ಮಡ್ಡಿ, ಚನ್ನು ಭವಾನಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ವರದಿ: ಖಾಜಾ ಹುಸೇನ್ ಬಾಬಾ, ಜಾಲಹಳ್ಳಿ.
📲Get App