🔥 ट्रेंडिंग भैया मित्तल के आगमन पर सिटापुर में उत्... Blast reported in Ghaziabad, Uttar Pra... सर्जियो गोर ने यूएस दूतावास में दिवाली... यात्रियों ने चलती ट्रेन की खिड़की से च... दिल्ली के बाजारों में दीवाली की अंतिम‑... प्रधानमंत्री नरेंद्र मोदी ने दीपावली प...
07 नव. 2026•
ગુજરાતી मराठी ਪੰਜਾਬੀ বাংলা

ಜಿಲ್ಲಾಧಿಕಾರಿಗೆ AIKKMS ನಿಂದ 10 ಬೇಡಿಕೆಗಳ ಮನವಿ - ಎಕರೆಗೆ ರೂ.50,000 ಬೆಳೆ ನಷ್ಟ ಪರಿಹಾರ, ಡಿಸೆಂಬರ್ 30ರವರೆಗೆ ಬಲದಂಡೆ ಕಾಲುವೆಗೆ ನೀರಿಗೆ ಆಗ್ರಹ

✍️ रिपोर्टर: Ningappa 🗓 07 नव. 2026, 11:25 PM 👁 20
शेयर करें: 💬 WhatsApp 📘 Facebook 𝕏 Post

ಪ್ರಜಾಸೇವಾ ಆಂದೋಲನದಲ್ಲಿ ಜಿಲ್ಲಾಧಿಕಾರಿ ಪೂವಿತಾ ಎಸ್. ಅವರಿಗೆ AIKKMS ನಿಂದ 10 ಬೇಡಿಕೆಗಳ ಮನವಿ - ಎಕರೆಗೆ ರೂ.50,000 ಬೆಳೆ ನಷ್ಟ ಪರಿಹಾರ, ಬಲದಂಡೆ ಕಾಲುವೆಗೆ ಡಿಸೆಂಬರ್ 30ರವರೆಗೆ ನೀರು, ಸುಟ್ಟ ಟಿಸಿ ದುರಸ್ತಿ, ಲಿಫ್ಟ್ ಇರಿಗೇಷನ್, 14 ಕೆರೆಗಳಿಗೆ ನೀರು, ಶಾಲಾ ಕೊಠಡಿ ದುರಸ್ತಿ, ನಿರಂತರ ಜ್ಯೋತಿ, ರಸ್ತೆ, ಪಶು ಚಿಕಿತ್ಸಾಲಯಕ್ಕೆ ವೈದ್ಯರು, ಹಾಸ್ಟೆಲ್ ಸೌಲಭ್ಯಕ್ಕೆ ಆಗ್ರಹ

ರಾಯಚೂರು: ಜಿಲ್ಲಾಧಿಕಾರಿಗಳಾದ ಶ್ರೀಮತಿ ಪೂವಿತಾ ಎಸ್. ಅವರಿಗೆ, ಅರಕೇರಾ ತಾಲೂಕಿನಲ್ಲಿ ನಡೆದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದ ಸಂದರ್ಭದಲ್ಲಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (AIKKMS) ವತಿಯಿಂದ ರೈತರ ಬೆಳೆ ನಷ್ಟ ಪರಿಹಾರ, ನಾರಾಯಣಪುರ ಬಲದಂಡೆ ಕಾಲುವೆಗೆ ಡಿಸೆಂಬರ್ 30ರವರೆಗೆ ನೀರು ಹರಿಸುವುದು ಸೇರಿದಂತೆ ಅರಕೇರಾ ಮತ್ತು ದೇವದುರ್ಗ ತಾಲೂಕುಗಳ ವಿವಿಧ ಗ್ರಾಮಗಳ ಸಮಸ್ಯೆಗಳನ್ನು ಬಗೆಹರಿಸುವಂತೆ 10 ಪ್ರಮುಖ ಬೇಡಿಕೆಗಳ ಮನವಿ ಪತ್ರ ಸಲ್ಲಿಸಲಾಯಿತು.

ಬೇಡಿಕೆಗಳು:
1. ರೈತರಿಗೆ ಎಕರೆಗೆ ಕನಿಷ್ಠ ರೂ.50,000 ಬೆಳೆ ನಷ್ಟ ಪರಿಹಾರ ನೀಡಿ, ಕೂಡಲೇ ಪಾವತಿಸಬೇಕು.
2. ನಾರಾಯಣಪುರ ಬಲದಂಡೆ ಕಾಲುವೆಗೆ ಡಿಸೆಂಬರ್ 30ರವರೆಗೆ ನೀರು ಹರಿಸಬೇಕು.
3. ಸುಟ್ಟ ವಿದ್ಯುತ್ ಪರಿವರ್ತಕಗಳನ್ನು (TC) ತಕ್ಷಣ ದುರಸ್ತಿಗೊಳಿಸಿ ರೈತರಿಗೆ ನೀಡಬೇಕು.
4. ಭೂಮನಗುಂಡ, ಮಲ್ಲಾಪುರ, ಅಡಕಲಗುಡ್ಡ ಮತ್ತು ಸಿಂಗರಿದೊಡ್ಡಿ ಗ್ರಾಮಗಳಿಗೆ ಲಿಫ್ಟ್ ಇರಿಗೇಷನ್ ಮೂಲಕ ನೀರಾವರಿ ಕಲ್ಪಿಸಬೇಕು.
5. ಟ್ಯಾಂಕ್ ಫಿಲ್ಲಿಂಗ್ ಯೋಜನೆಯಡಿ ಅರಕೇರಾ ತಾಲೂಕಿನ 14 ಕೆರೆಗಳಿಗೆ ಜಾನುವಾರುಗಳ ಕುಡಿಯುವ ನೀರಿಗಾಗಿ ನೀರು ಹರಿಸಬೇಕು.
6. ಅಡಕಲಗುಡ್ಡ, ಭೂಮನಗುಂಡ ಮತ್ತು ಕುರ್ಲೆದೊಡ್ಡಿ ಸರ್ಕಾರಿ ಶಾಲೆಗಳ ಶಿಥಿಲಗೊಂಡ ಕೊಠಡಿಗಳನ್ನು ದುರಸ್ತಿಗೊಳಿಸಬೇಕು.
7. ಮಂಡ್ಯದೊಡ್ಡಿ ಗ್ರಾಮಕ್ಕೆ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು.
8. ಬಂಡೆಮೇಲೆ ಸಿಂಗರಿದೊಡ್ಡಿಯಿಂದ ಸರ್ಕಾರಿ ಶಾಲೆಯವರೆಗೆ ಡಾಂಬರ್ ರಸ್ತೆ ನಿರ್ಮಿಸಬೇಕು.
9. ಆಲ್ಕೋಡ ಪ್ರಾಥಮಿಕ ಪಶು ಚಿಕಿತ್ಸಾಲಯಕ್ಕೆ ಖಾಯಂ ವೈದ್ಯರನ್ನು ನೇಮಿಸಬೇಕು.
10. ಅರಕೇರಾ ತಾಲೂಕಿನಲ್ಲಿ ಪುರುಷ ವಿದ್ಯಾರ್ಥಿಗಳಿಗೆ ಸರ್ಕಾರಿ ಹಾಸ್ಟೆಲ್ ಸೌಲಭ್ಯ ಕಲ್ಪಿಸಬೇಕು.

ಈ ಸಂದರ್ಭದಲ್ಲಿ ರೈತ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಮಲ್ಲನಗೌಡ ಅಂಚೆಸಗೂರು, ಜಿಲ್ಲಾ ಉಪಾಧ್ಯಕ್ಷ ದುರ್ಗಣ್ಣ ಅಡಕಲಗುಡ್ಡ ಹಾಗೂ ರೈತ ಮುಖಂಡರಾದ ಒಂದಲ್ಲಯ, ರಮೇಶ, ಯಲ್ಲಪ್ಪ ಮತ್ತು ಹನುಮಯ್ಯ ಇನ್ನಿತರ 8 ಹಳ್ಳಿಗಳ ರೈತರು ಉಪಸ್ಥಿತರಿದ್ದರು.
📲Get App