🔥 TRENDING Bombay HC sentences one to 20 years in... Jail Warder Suspended Over Life Convic... US Midterm Results Offer Limited Econo... Falling Crude Prices and a Stronger Ru... India-ASEAN Summit Expected to Leave T... माननीय बच्चूभाऊ कडू यांचा चंद्रपूर जिल...
06 Nov 2026•
ગુજરાતી मराठी ਪੰਜਾਬੀ বাংলা

ಸಿಂಧನೂರು: ತಿಡಿಗೋಳ ಚಲೋ ಹೋರಾಟಕ್ಕೆ ಕರೆ - ಕರಪತ್ರ ಬಿಡುಗಡೆ - ದಲಿತರ ಮೇಲಿನ ದೌರ್ಜನ್ಯ, ಸಾಮಾಜಿಕ ಬಹಿಷ್ಕಾರ ಖಂಡಿಸಿ ನ.8 ರಂದು ಬೃಹತ್ ಹೋರಾಟ

✍️ Reporter: Ningappa 🗓 05 Nov 2026, 08:12 AM 👁 27
Share: 💬 WhatsApp 📘 Facebook 𝕏 Post

ಸಿಂಧನೂರು ತಿಡಿಗೋಳ ಗ್ರಾಮದಲ್ಲಿ ದಲಿತರ ಮೇಲೆ ದೌರ್ಜನ್ಯ, ಸಾಮಾಜಿಕ ಬಹಿಷ್ಕಾರ ಆರೋಪ - ಸಂತ್ರಸ್ತ ಕುಟುಂಬಗಳಿಗೆ ನ್ಯಾಯ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ - ನ.8 ರಂದು 'ತಿಡಿಗೋಳ ಚಲೋ' ಹೋರಾಟ - ಕನಕದಾಸ ವೃತ್ತದಲ್ಲಿ ಕರಪತ್ರ ಬಿಡುಗಡೆ - ದಲಿತಪರ ಸಂಘಟನೆಗಳು, ಪ್ರಗತಿಪರರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ

ತಿಡಿಗೋಳ ಚಲೋ ಹೋರಾಟಕ್ಕೆ ಕರೆ - ಕರಪತ್ರ ಬಿಡುಗಡೆ

ಸಿಂಧನೂರು: ತಿಡಿಗೋಳ ಗ್ರಾಮದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಸಾಮಾಜಿಕ ಬಹಿಷ್ಕಾರದ ವಿರುದ್ಧ ಧ್ವನಿ ಎತ್ತಲು ನವೆಂಬರ್ 8 ರಂದು ಹಮ್ಮಿಕೊಳ್ಳಲಾಗಿರುವ 'ತಿಡಿಗೋಳ ಚಲೋ' ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಾರ್ವಜನಿಕರಿಗೆ ಕರೆ ನೀಡಲಾಯಿತು.

ನಗರದ ಕನಕದಾಸ ವೃತ್ತದಲ್ಲಿ ತಿಡಿಗೋಳ ಚಲೋ ಹೋರಾಟದ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಹೋರಾಟಗಾರರು, ತಿಡಿಗೋಳ ಗ್ರಾಮದ ದಲಿತ ಸಮುದಾಯದವರ ಮೇಲಿನ ದೌರ್ಜನ್ಯ ಹಾಗೂ ಸಾಮಾಜಿಕ ಬಹಿಷ್ಕಾರದ ಘಟನೆಗಳನ್ನು ಖಂಡಿಸಿದರು.

ಸಂತ್ರಸ್ತ ದಲಿತ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು, ದೌರ್ಜನ್ಯಕ್ಕೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಗ್ರಾಮದಲ್ಲಿ ಮುಂದುವರಿದಿರುವ ಸಾಮಾಜಿಕ ಬಹಿಷ್ಕಾರವನ್ನು ಸಂಪೂರ್ಣವಾಗಿ ಕೊನೆಗೊಳಿಸಬೇಕು ಎಂದು ಆಗ್ರಹಿಸಿದರು.

ದಲಿತರ ಹಕ್ಕು, ಗೌರವ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ನಡೆಯಲಿರುವ ಈ ಹೋರಾಟಕ್ಕೆ ಪ್ರಜ್ಞಾವಂತರು, ದಲಿತಪರ ಸಂಘಟನೆಗಳು, ಪ್ರಗತಿಪರರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ನವೆಂಬರ್ 8 ರಂದು ನಡೆಯಲಿರುವ 'ತಿಡಿಗೋಳ ಚಲೋ' ಹೋರಾಟದ ಮೂಲಕ ಸಂತ್ರಸ್ತರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಒಗ್ಗಟ್ಟಿನ ಧ್ವನಿ ಮೊಳಗಿಸೋಣ ಎಂಬ ಸಂದೇಶವನ್ನು ಕರಪತ್ರದ ಮೂಲಕ ಸಾರಲಾಯಿತು.

ಇದೇ ಸಂದರ್ಭದಲ್ಲಿ ಸಂಘದ ಸಂಚಾಲಕರಾದ ನಾಗರಾಜ್ ಪೂಜಾರ್, ಮುಖಂಡರಾದ ಅಶೋಕ್ ನಂಜಲದಿನ್ನಿ, ಪರಶುರಾಮ, ಶಶಿ, ಬಸವರಾಜ, ತಾಯಪ್ಪ, ಪರಶುರಾಮ್ ಭಂಡಾರಿ ಸೇರಿದಂತೆ ತಿಡಿಗೋಳ ಗ್ರಾಮದ ದಲಿತ ಸಮುದಾಯದ ಮುಖಂಡರಿದ್ದರು.
📲Get App