🔥 TRENDING India junior men clinch record sixth A... Yellow Rain Alert Issued for Seven Dis... Mumbai, Thane on Orange Alert as Monso... IMD Issues Yellow Alert as Heavy Rain... Viral Video: Ganesh Idol Falls as Trol... Schoolchildren's Viral Video Prompts R...
13 Sep 2026
ગુજરાતી मराठी ਪੰਜਾਬੀ বাংলা

ನಾರಾಯಣಪುರ ನೀರಾವರಿ ಇಲಾಖೆ ದೇವದುರ್ಗದಲ್ಲೇ ಉಳಿಸಲು ಅಗ್ರಹ ಚಿಕ್ಕ ಹೂನ್ನಕುಣಿ ವಿಭಾಗ ಸಂಖ್ಯೆ 6ರ ಕಚೇರಿ ಸ್ಥಳಾಂತರ ನಿರ್ಧಾರ ಕೈಬಿಡುವಂತೆ ರೈತರ ಒತ್ತಾಯ

✍️ Reporter: MAHAMAD WALI QURESHI 🗓 13 Sep 2026, 07:20 PM 👁 20
Share: 💬 WhatsApp 📘 Facebook 𝕏 Post
ನಾರಾಯಣಪುರ ನೀರಾವರಿ ಇಲಾಖೆ ದೇವದುರ್ಗದಲ್ಲೇ ಉಳಿಸಲು ಆಗ್ರಹ

ಚಿಕ್ಕಹೊನ್ನಕುಣಿ ವಿಭಾಗ ಸಂಖ್ಯೆ6ರ ಕಚೇರಿ ಸ್ಥಳಾಂತರ ನಿರ್ಧಾರ ಕೈಬಿಡುವಂತೆ ರೈತರ ಒತ್ತಾಯ

ನೀಡ್ 24 ನ್ಯೂಸ್

ದೇವದುರ್ಗ,ಸೆ.12-ನಾರಾಯಣಪುರ ನೀರಾವರಿ ಇಲಾಖೆಯ ಚಿಕ್ಕಹೊನ್ನಕುಣಿ ವಿಭಾಗ ಸಂಖ್ಯೆ 6ರ ಕಚೇರಿಯನ್ನು ಸ್ಥಳಾಂತರಿಸುವ ನಿರ್ಧಾರವನ್ನು ಕೂಡಲೇ ಕೈಬಿಡಬೇಕು ಎಂದು ರೈತರ ಹಿತಾಸಕ್ತಿಗಾಗಿ ಆಗ್ರಹಿಸಲಾಗಿದೆ.

ನೀರಾವರಿ ಇಲಾಖೆ ದೇವದುರ್ಗದಲ್ಲೇ ಕಾರ್ಯನಿರ್ವಹಿಸುವುದರಿಂದ ಸುತ್ತಮುತ್ತಲಿನ ಸಾವಿರಾರು ರೈತರಿಗೆ ತಮ್ಮ ನೀರಾವರಿ ಸಮಸ್ಯೆಗಳು, ಕಾಲುವೆ ನಿರ್ವಹಣೆ, ನೀರು ಹರಿವು ಹಾಗೂ ಬೆಳೆಗಳಿಗೆ ಸಂಬಂಧಿಸಿದ ತುರ್ತು ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ನೇರವಾಗಿ ತಂದು ಪರಿಹಾರ ಪಡೆಯಲು

ಅನುಕೂಲವಾಗಲಿದೆ ಎಂದು ಒತ್ತಾಯಿಸಲಾಗಿದೆ. ಇಲಾಖೆಯನ್ನು ದೂರದ ಸ್ಥಳಕ್ಕೆ ಸ್ಥಳಾಂತರಿಸಿದರೆ, ಈಗಾಗಲೇ ಕೃಷಿ ಸಂಕಷ್ಟದಲ್ಲಿರುವ ರೈತರು

ಸಣ್ಣಪುಟ್ಟ ಸಮಸ್ಯೆಗಳಿಗೂ ಅಧಿಕಾರಿಗಳ ಕಚೇರಿಗೆ ಅಲೆದಾಡಬೇಕಾಗುತ್ತದೆ. ಇದರಿಂದ ರೈತರ ಸಮಯ, ಹಣ ಹಾಗೂ ಶ್ರಮ ವ್ಯರ್ಥವಾಗಲಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ರೈತರಿಗೆ ಅನುಕೂಲವಾಗಬೇಕಾದ ಇಲಾಖೆ ರೈತರಿಂದ ದೂರವಾಗಬಾರದು. ರೈತರ ಬಳಿಯೇ ಇಲಾಖೆ ಇರಬೇಕು ಹಾಗೂ ರೈತರ ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದನೆ ದೊರೆಯಬೇಕು ಎಂದು ಆಗ್ರಹಿಸಲಾಗಿದೆ. ಆದ್ದರಿಂದ ಚಿಕ್ಕಹೊನ್ನಕುಣಿ ವಿಭಾಗ ಸಂಖ್ಯೆ 6ರ ನೀರಾವರಿ ಇಲಾಖೆಯನ್ನು ಇಲ್ಲಿಂದ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಿ, ಮರೀಲಿಂಗಪಾಟೀಲ... Reporter Wali Qureshi
📲Get App