🔥 TRENDING वाराणसी के नए नगर आयुक्त शाश्वत त्रिपु... मुरबाड येथे भाजप अनुसूचित जमाती मोर्चा... હિંમતનગરમાં દિવાળી દરમિયાન કચરા ડમ્પિં... ધંધુકા માં ટ્રાફિક જમાવટ સર્જાઈ, માર્ગ... विद्यादान निःशुल्क कोचिंग सेंटर ने 300... ਚਾਚਾ ਨੇਹਰੂ ਦੀ ਕਹਾਣੀ ਨਾਲ ਬਾਲ ਦਿਵਸ ਮਨਾਇਆ...
14 Nov 2026•
ગુજરાતી मराठी ਪੰਜਾਬੀ বাংলা

ನವೆಂಬರ್16ರಂದು ರೈತರ ಬೃಹತ್ ಹೋರಾಟ ಪಕ್ಷಾತೀತವಾಗಿ ಭಾಗವಹಿಸುವಂತೆ ಗೌರಿ ಮನವಿ

✍️ Reporter: Ningappa 🗓 14 Nov 2026, 05:42 PM 👁 26
Share: 💬 WhatsApp 📘 Facebook 𝕏 Post
ರಾಯಚೂರು: ಇದೇ ನವೆಂಬರ್ 16ರಂದು ಸಿರವಾರ ಕ್ರಾಸ್ ಬಳಿ ದೇವದುರ್ಗ ಕ್ಷೇತ್ರದ ಶಾಸಕಿ ಕರಿಯಮ್ಮ ಜಿ ನಾಯಕ ಅವರ ನೇತೃತ್ವದಲ್ಲಿ ನಡೆಯಲಿರುವ ಬೃಹತ್ ರೈತ ಹೋರಾಟದ ರೂಪೂರೇಷದ ತಯಾರಿ ಭಾಗವಾಗಿ ಹಳ್ಳಿ ಹಳ್ಳಿಗೆ ಪಕ್ಷದ ಕಾರ್ಯಕರ್ತರು,ಮುಖಂಡರು ಅಭೂತಪೂರ್ವ ಪ್ರಚಾರಾಂದೋಲನ ನಡೆಸಿದರು.

ಹೋರಾಟದ ಪ್ರಚಾರಾಂದೋಲನ ಕುರಿತು ಕುಮಾರಿ ಗೌರಿ ರೈತರನ್ನು ಉದ್ದೇಶಿ ಮಾತನಾಡಿದ ಅವರು,ಇದು ಪಕ್ಷಾತೀತ ಹೋರಾಟ ರೈತರಿಗೆ ಜನವರಿ ವರಗೆ ನೀರು ಹರಿಸಬೇಕು ಅಂದಾಗ ಮಾತ್ರ ಪೂರ್ಣಪ್ರಮಾಣದ ಬೆಳೆ ಬರಲು ಸಾಧ್ಯ ಹಾಗಾಗಿ ರೈತರು ದೊಡ್ಡ ಸಂಖ್ಯೆಯಲ್ಲಿ ಇದೇ ನ.16 ನಡೆಯಲಿರುವ ಬೃಹತ್ ಹೋರಾಟದಲ್ಲಿ ಜಾತಿ,ಧರ್ಮ ಪಕ್ಷ ಎನ್ನದೇ ಎಲ್ಲರೂ ಭಾಗವಹಿಸಬೇಕೆಂದು ಮನವಿ ಮಾಡಿದರು.

ಜೆಡಿಎಸ್ ಪಕ್ಷದ ವಕ್ತಾರರಾದ ಗೋವಿಂದರಾಜ ನಾಯಕ ಕೊತ್ತದೊಡ್ಡಿ,ಸಿದ್ದಣ್ಣ ಗಣೇಕಲ್, ಚನ್ನಪ್ಪ ಮಸೀದಾಪುರ ,ಕೆ ವೆಂಕಟೇಶ ಗೌಡ,ತಿಮ್ಮಾರೆಡ್ಡಿ ,ಮರಣ್ಣಮಲದಕಲ್ ಗುರುನಾಥರೆಡ್ಡಿ ,ಇಸಾಕ್ ಮೇಸ್ತ್ರಿ ಸೇರಿದಂತೆ ಇತರರು ಇದ್ದರು.
📲Get App