🔥 ट्रेंडिंग ब्रेकिंग न्यूज राजस्थान उदयपुर में जयस... నామినేషన్ కార్యక్రమాన్ని జయప్రదం చేయవల... सेवा में, ಜನನುಡಿ 2026 ಕಾರ್ಯಕ್ರಮ ಸಭೆ ಹಾಗೂ ಪೋಸ್ಟರ್... फ़िल्म "Merri Boys" को रिलीज़ विंडो मि... मणिपुर में युवा ओलंपिक स्वर्ण पदक विजे...
18 नव. 2026•
ગુજરાતી मराठी ਪੰਜਾਬੀ বাংলা

ಮುಳಬಾಗಿಲು TP ಮತ್ತು ZP ಚುನಾವಣೆಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿ - ಬೆಂಗಳೂರಿನಿಂದ ಬಂದು ಗೆದ್ದು ಮತ್ತೆ ಬೆಂಗಳೂರಿಗೆ ಹೋಗುವವರಿಗೆ ಅವಕಾಶ ಬೇಡ - ಹಣಬಲಕ್ಕಿಂತ ಜನಸೇವೆಗೆ ಮನ್ನಣೆ ನೀಡಿ - ಯುವಜನ ನಾಯಕ ಶಿವಪ್ಪ ಎನ್. ಅಂಬ್ಲಿಕಲ್ ಮನವಿ

✍️ रिपोर्टर: Ningappa 🗓 18 नव. 2026, 09:47 PM 👁 20
शेयर करें: 💬 WhatsApp 📘 Facebook 𝕏 Post

ಮುಳಬಾಗಿಲು TP ಮತ್ತು ZP ಚುನಾವಣೆಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿ - ಬೆಂಗಳೂರಿನಿಂದ ಬಂದು ಗೆದ್ದು ಮತ್ತೆ ಬೆಂಗಳೂರಿಗೆ ಹೋಗುವವರಿಗೆ ಅವಕಾಶ ಬೇಡ - ಜನರ ನಡುವೆ ಇದ್ದು ಸಮಸ್ಯೆಗಳಿಗೆ ಸ್ಪಂದಿಸುವವರಿಗೆ ಆದ್ಯತೆ ನೀಡಿ - ಹಣಬಲಕ್ಕಿಂತ ಜನಸೇವೆಗೆ ಮನ್ನಣೆ, ಯುವಕರಿಗೆ ಅವಕಾಶ ನೀಡಿ - ಶಿವಪ್ಪ ಎನ್. ಅಂಬ್ಲಿಕಲ್ ಮನವಿ

ಮುಳಬಾಗಿಲು: ಮುಂಬರುವ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ರಾಜಕೀಯ ಪಕ್ಷಗಳು ಸ್ಥಳೀಯ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಯುವಜನ ನಾಯಕ ಶಿವಪ್ಪ ಎನ್. ಅಂಬ್ಲಿಕಲ್ ಮನವಿ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕೆಲವರು ಕೇವಲ ಆರು ತಿಂಗಳು ಅಥವಾ ಒಂದು ವರ್ಷದ ಹಿಂದೆ ಬೆಂಗಳೂರಿನಿಂದ ಮುಳಬಾಗಿಲಿಗೆ ಬಂದು ಸಮಾಜಸೇವೆಯ ಹೆಸರಿನಲ್ಲಿ ಗುರುತಿಸಿಕೊಳ್ಳುತ್ತಾರೆ. ನಂತರ ತಾಲೂಕು ಪಂಚಾಯತ್ ಅಥವಾ ಜಿಲ್ಲಾ ಪಂಚಾಯತ್ ಚುನಾವಣೆಯ ಆಕಾಂಕ್ಷಿಗಳೆಂದು ಘೋಷಿಸಿಕೊಳ್ಳುತ್ತಾರೆ. ಚುನಾವಣೆಯಲ್ಲಿ ಗೆದ್ದು ಜನಪ್ರತಿನಿಧಿಗಳಾದ ಬಳಿಕ ಮತ್ತೆ ಬೆಂಗಳೂರಿಗೆ ಹೋಗುತ್ತಾರೆ. ನಂತರ ಜನರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಜನರು ಬೆಂಗಳೂರಿನ ಮನೆಗಳಿಗೆ ಹುಡುಕಿಕೊಂಡು ಹೋದರೂ ಅವರನ್ನು ಭೇಟಿಯಾಗಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಜನಪ್ರತಿನಿಧಿಗಳು ಜನರ ನಡುವೆ ಇರಬೇಕು ಮತ್ತು ಜನರ ಕಷ್ಟ-ನೋವುಗಳಿಗೆ ಸ್ಪಂದಿಸಬೇಕು. ಸ್ಥಳೀಯ ಸಮಸ್ಯೆಗಳ ಬಗ್ಗೆ ಜನರೊಂದಿಗೆ ನಿರಂತರ ಸಂಪರ್ಕ ಮತ್ತು ಕ್ಷೇತ್ರದ ಅಭಿವೃದ್ಧಿಯ ಪರ ಕಾಳಜಿ ಅಭ್ಯರ್ಥಿಗಳ ಆಯ್ಕೆಗೆ ಪ್ರಮುಖ ಮಾನದಂಡಗಳಾಗಬೇಕು ಎಂದು ಅವರು ಹೇಳಿದ್ದಾರೆ.

ಮುಳಬಾಗಿಲು ತಾಲೂಕು ಪಂಚಾಯತ್ 21, ಜಿಲ್ಲಾ ಪಂಚಾಯತ್ 6 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅನೇಕ ಯುವಕರು ಆಸಕ್ತಿ ತೋರಿಸುತ್ತಿದ್ದಾರೆ. ಇಂತಹ ಯುವ ಪ್ರತಿಭೆಗಳನ್ನು ಹಣಬಲದ ಕಾರಣಕ್ಕೆ ಕಡೆಗಣಿಸಬಾರದು.

ರಾಜಕೀಯ ಪಕ್ಷಗಳು ಹಣವಂತರಿಗೆ ಮಾತ್ರ ಅವಕಾಶ ನೀಡದೆ, ಜನರೊಂದಿಗೆ ಬೆರೆತು ಕೆಲಸ ಮಾಡುವ ಸ್ಥಳೀಯ ಯುವಕರಿಗೂ ಅವಕಾಶ ಕಲ್ಪಿಸಬೇಕು.

ನನ್ನ ಮನವಿ - ಅಭ್ಯರ್ಥಿಗಳ ಆಯ್ಕೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿ. ಯುವಕರಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿ. ಹಣಬಲಕ್ಕಿಂತ ಜನಸೇವೆಗೆ ಮನ್ನಣೆ ನೀಡಿ. ಆಯ್ಕೆಯಾದ ಜನಪ್ರತಿನಿಧಿಗಳು ಜನರ ನಡುವೆ ಇದ್ದು ಸಮಸ್ಯೆಗಳಿಗೆ ಸ್ಪಂದಿಸಲಿ ಎಂದು ಶಿವಪ್ಪ ಎನ್. ಅಂಬ್ಲಿಕಲ್ ಮನವಿ ಮಾಡಿದ್ದಾರೆ.
📲Get App