🔥 ट्रेंडिंग રાજુલા ખાતે રાજ્યપાલ આચાર્ય દેવવ્રત દ્... હિંડોરણા ચોકડી પાસે અકસ્માતમાં ફસાયેલ... दिल्ली में 250 कैमरों की फुटेज देख कर... गोपालगंज के कटेया ब्लॉक के विष्णु मठ म... डीटीयू के शिक्षकों को शिक्षण‑शोध में ए... ਠੰਢ ਕਾਰਨ ਬਦਲਿਆ ਸਕੂਲਾਂ ਦਾ ਸਮਾਂ ! ਕਸ਼ਮੀਰ...
17 नव. 2026•
ગુજરાતી मराठी ਪੰਜਾਬੀ বাংলা

ಚಲುವಾದಿ ದೊಡ್ಡಿ ಶಾಲೆಗೆ SFI ಮುಖಂಡರ ಭೇಟಿ - 15 ದಿನಗಳಿಂದ ಬೋರ್‌ವೆಲ್ ಕೆಟ್ಟು ಕುಡಿಯುವ ನೀರಿಗೆ ತೊಂದರೆ - ಗಿಡಗಂಟಿಗಳಿಂದ ಹಾವುಗಳ ಭೀತಿ - ತಕ್ಷಣ ದುರಸ್ತಿಗೆ ಆಗ್ರಹಿಸಿ ಗಲಗ ಗ್ರಾ.ಪಂ.ಗೆ ಮನವಿ

✍️ रिपोर्टर: Ningappa 🗓 17 नव. 2026, 09:01 PM 👁 20
शेयर करें: 💬 WhatsApp 📘 Facebook 𝕏 Post

ಚಲುವಾದಿ ದೊಡ್ಡಿ ಶಾಲೆಗೆ SFI ಮುಖಂಡರ ಭೇಟಿ - 15 ದಿನಗಳಿಂದ ಬೋರ್‌ವೆಲ್ ಕೆಟ್ಟು ಕುಡಿಯುವ ನೀರಿಗೆ ತೊಂದರೆ, ಗಿಡಗಂಟಿಗಳಿಂದ ಹಾವುಗಳ ಭೀತಿ - ತಕ್ಷಣ ಬೋರ್‌ವೆಲ್ ದುರಸ್ತಿ ಮತ್ತು ಸ್ವಚ್ಛತೆಗೆ ಆಗ್ರಹಿಸಿ ಗಲಗ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ

ಚಲುವಾದಿ ದೊಡ್ಡಿ ಶಾಲೆಗೆ SFI ಮುಖಂಡರ ಭೇಟಿ - ಬೋರ್‌ವೆಲ್ ದುರಸ್ತಿಗೆ ಆಗ್ರಹಿಸಿ ಮನವಿ

ರಾಯಚೂರು/ ಅರಕೇರಾ: ಗಲಗ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಚಲುವಾದಿ ದೊಡ್ಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಇಂದು SFI ಸಂಘಟನೆ ಮುಖಂಡರು ಭೇಟಿ ನೀಡಿ, ಶಾಲೆಯಲ್ಲಿರುವ ಮೂಲಭೂತ ಸಮಸ್ಯೆಗಳ ಕುರಿತು ಶಿಕ್ಷಕರೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು.

ಶಾಲೆಯಲ್ಲಿ ಕಳೆದ ಸುಮಾರು 15 ದಿನಗಳಿಂದ ಬೋರ್‌ವೆಲ್ ಕೆಟ್ಟುಹೋಗಿದ್ದು, ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಂತಾಗಿದೆ.

ಅಲ್ಲದೆ, ಶಾಲೆಯ ಸುತ್ತಮುತ್ತ ಗಿಡಗಂಟಿಗಳು ಬೆಳೆದು ನಿಂತಿದ್ದು, ಹಾವುಗಳು ಹಾಗೂ ವಿಷಕಾರಿ ಕ್ರಿಮಿಕೀಟಗಳು ಶಾಲಾ ಕೊಠಡಿಗಳಿಗೆ ಪ್ರವೇಶಿಸುವ ಅಪಾಯವಿದೆ. ಇದರಿಂದ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಗೆ ತೊಂದರೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣವೇ ಬೋರ್‌ವೆಲ್ ದುರಸ್ತಿಗೊಳಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಶಾಲೆಯ ಸುತ್ತಮುತ್ತಲಿನ ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛತೆ ಮತ್ತು ಸುರಕ್ಷತೆಯನ್ನು ಕಾಪಾಡಬೇಕು ಎಂದು ಆಗ್ರಹಿಸಿ ಗಲಗ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಇದೇ ಸಂದರ್ಭದಲ್ಲಿ ಬಾಬು ಶ್ಯಾನೇರದೊಡ್ಡಿ SFI ತಾಲೂಕು ಉಪಾಧ್ಯಕ್ಷರು, ಸಂತೋಷ ತ್ಯಾಪ್ಲಿ – SFI ತಾಲೂಕು ಕಾರ್ಯದರ್ಶಿ, ವೆಂಕಟೇಶ್ ದೊರೆ, DYFI ತಾಲೂಕು ಕಾರ್ಯದರ್ಶಿಯಾದ ನಿಂಗಯ್ಯ ಸುಣ್ಣದಕಲ್ ಮತ್ತು ಗ್ರಾಮಸ್ಥರು ಇದ್ದರು.
📲Get App