🔥 ट्रेंडिंग मासूम की हत्या से शाहबाद में सनसनी: ला... पुलिस अधीक्षक सुरेश चंद्र रावत ने पुलि... WHO ಹೊಸ ಭಾರತೀಯ ಮಲೇರಿಯಾ ಲಸಿಕೆಗೆ ಉನ್ನತ ಸ... પાટણમાં 'સતર્કતા જાગૃતિ સપ્તાહ-2026' હ... ಮೇಡ್ ಇನ್ ಇಂಡಿಯಾ ಸುರಕ್ಷಿತ OS ಫೋನ್‌ಗಳ ಮಾ... ಭಾರತದಲ್ಲಿ ಏಷ್ಯಾದ ಅತಿ ದೊಡ್ಡ ಗ್ರೀನ್ ಡೇಟಾ...
06 नव. 2026•
ગુજરાતી मराठी ਪੰਜਾਬੀ বাংলা

ಸುಳ್ಳು ಸುದ್ದಿ, RTI ದುರುಪಯೋಗ, ಬ್ಲಾಕ್ ಮೇಲ್ ಆರೋಪ - ಜನಬಲ ವಾರ್ತೆ ಪತ್ರಕರ್ತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸರ್ಕಾರಿ ನೌಕರರ ಸಂಘದಿಂದ ತಹಶೀಲ್ದಾರರಿಗೆ ಮನವಿ

✍️ रिपोर्टर: Ningappa 🗓 06 नव. 2026, 01:46 PM 👁 18
शेयर करें: 💬 WhatsApp 📘 Facebook 𝕏 Post

ದೇವದುರ್ಗದಲ್ಲಿ ಸರ್ಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಅಭಿಷೇಕ ಸುರೇಶ ಹುಡೆದ ವಿರುದ್ಧ ಸುಳ್ಳು ಸುದ್ದಿ ಪ್ರಕಟಿಸಿದ ಆರೋಪ - ಜನಬಲ ವಾರ್ತೆ ಪತ್ರಕರ್ತನ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ತಹಶೀಲ್ದಾರರಿಗೆ ಮನವಿ - RTI ದುರುಪಯೋಗ, ಬ್ಲಾಕ್ ಮೇಲ್, ಕಿರುಕುಳ ಆರೋಪ - ಸ್ಪಷ್ಟೀಕರಣ ಪ್ರಕಟಿಸಲು ಒತ್ತಾಯ

ಸುಳ್ಳು ಸುದ್ದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸರ್ಕಾರಿ ನೌಕರರ ಸಂಘದಿಂದ ತಹಶೀಲ್ದಾರರಿಗೆ ಮನವಿ

ದೇವದುರ್ಗ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ ದೇವದುರ್ಗ ವತಿಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ.

ಸಂಘದ ಜಂಟಿ ಕಾರ್ಯದರ್ಶಿ ಶ್ರೀ ಅಭಿಷೇಕ ಸುರೇಶ ಹುಡೆದ ರವರ ವಿರುದ್ಧ ಸುಳ್ಳು ಸುದ್ದಿ ಪ್ರಕಟಿಸಿ, RTI ದುರುಪಯೋಗಪಡಿಸಿಕೊಂಡು ಬ್ಲಾಕ್ ಮೇಲ್ ಮಾಡುತ್ತಿರುವ ಜನಬಲ ವಾರ್ತೆ ಪತ್ರಕರ್ತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ದಿನಾಂಕ 06-11-2026 ರಂದು ಜನಬಲ ವಾರ್ತೆ ದಿನಪತ್ರಿಕೆಯಲ್ಲಿ ಅವರ ಬಗ್ಗೆ ಕುರ್ಚಿ ಪುರಾಣ: ವರ್ಗಾವಣೆ ಭೀತಿಯಿಂದ ರಾಜೀ ನಾಟಕ, ವೈಯಕ್ತಿಕ ಕೆಲಸಗಳಿಗೆ ನಿರತ ಎಂಬ ಶೀರ್ಷಿಕೆಯಡಿ ಸುಳ್ಳು, ಆಧಾರರಹಿತ ಮತ್ತು ಮಾನಹಾನಿಕರ ವರದಿ ಪ್ರಕಟವಾಗಿದೆ. ಇದರಿಂದ ಸಂಘದ ಎಲ್ಲಾ ಸದಸ್ಯರಿಗೆ ತೀವ್ರ ನೋವು ಮತ್ತು ಆತಂಕ ಉಂಟಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇದಕ್ಕೂ ಮಿಗಿಲಾಗಿ, ಸದರಿ ಪತ್ರಕರ್ತನು ಕಳೆದ ಹಲವಾರು ತಿಂಗಳುಗಳಿಂದ ಮಾಹಿತಿ ಹಕ್ಕು ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡು, ಶ್ರೀ ಅಭಿಷೇಕ ರವರ ವೈಯಕ್ತಿಕ ಮಾಹಿತಿಯನ್ನು ಪದೇ ಪದೇ ಕೇಳಿ, ಅವರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾನೆ. ಇದು ಒಬ್ಬ ಸರ್ಕಾರಿ ನೌಕರನಿಗೆ ಕಿರುಕುಳ ನೀಡಿದಂತಾಗಿದೆ. ಇಂದು ಅವರಿಗೆ ಆಗಿರುವುದು ನಾಳೆ ಬೇರೆ ಯಾವುದೇ ಸರ್ಕಾರಿ ನೌಕರನಿಗೂ ಆಗಬಹುದು ಎಂದು ಸಂಘ ತಿಳಿಸಿದೆ.

ಮನವಿಯಲ್ಲಿ ಈ ಕೆಳಗಿನ ಬೇಡಿಕೆಗಳನ್ನು ಇಡಲಾಗಿದೆ.

1. ಸದರಿ ಪತ್ರಕರ್ತನ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಆತನು ಕೇಳುತ್ತಿರುವ ಅಭಿಷೇಕ ರವರ ವೈಯಕ್ತಿಕ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯ್ದೆ ಸೆಕ್ಷನ್ 8(1)(j) ರಂತೆ ನೀಡಬಾರದು ಎಂದು ಸೂಚನೆ ನೀಡಬೇಕು.
2. ಕಚೇರಿಯ ಕೆಲಸದ ಸಮಯದಲ್ಲಿ ಬಂದು ಕಿರುಕುಳ ನೀಡದಂತೆ ಆತನಿಗೆ ಲಿಖಿತ ಎಚ್ಚರಿಕೆ ನೀಡಬೇಕು.
3. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಹಾಗೂ ಮೇಲಾಧಿಕಾರಿಗಳಿಗೆ ಶಿಫಾರಸು ಮಾಡಬೇಕು.
4. ಈ ಸುಳ್ಳು ವರದಿಯನ್ನು ಖಂಡಿಸಿ, ಶ್ರೀ ಅಭಿಷೇಕ ರವರ ಸ್ಪಷ್ಟೀಕರಣವನ್ನು ಅದೇ ಪತ್ರಿಕೆಯಲ್ಲಿ ಪ್ರಕಟಿಸುವಂತೆ ಕಚೇರಿಯ ವತಿಯಿಂದ ಒತ್ತಾಯಿಸಬೇಕು.

ಈ ವಿಷಯದಲ್ಲಿ ತಾವು ಕ್ರಮ ಕೈಗೊಳ್ಳದಿದ್ದಲ್ಲಿ, ಸಂಘದ ಸದಸ್ಯರೆಲ್ಲರೂ ತೀವ್ರ ಅಸಮಾಧಾನಗೊಂಡು, ಮುಂದಿನ ಹಂತದಲ್ಲಿ ಜಿಲ್ಲಾ ಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಈ ಮೂಲಕ ತಿಳಿಸುತ್ತೇವೆ. ತಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಶ್ರೀ ಅಭಿಷೇಕ ರವರಿಗೆ ನ್ಯಾಯ ಹಾಗೂ ರಕ್ಷಣೆ ಒದಗಿಸಬೇಕಾಗಿ ವಿನಂತಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
📲Get App