🔥 TRENDING आत्मानंद स्कूल के नाम पर 1.32 करोड़ का... संत नगर में 31 अक्टूबर से 2 नवंबर तक स... રાજકોટમાં ભાજપ દ્વારા ‘લોકતંત્ર બચાવો,... मुख्यमंत्री योगी आदित्यनाथ से मिलीं हा... Rio Calls on Indian Companies to Tap N... সাগরদিঘীতে জাল নোট উদ্ধারের দাবি, আটক...
28 Oct 2026•
ગુજરાતી मराठी ਪੰਜਾਬੀ বাংলা

ದೇವರಗುಡ್ಡ ಸೀಮಾಂತರ ಪ್ರದೇಶದಲ್ಲಿ ಅಕ್ರಮ ಗಾಂಜಾ ಬೆಳೆ ಮೇಲೆ ಪೊಲೀಸ್ ದಾಳಿ: ₹11.94 ಲಕ್ಷ ಮೌಲ್ಯದ ಗಾಂಜಾ ವಶ

✍️ Reporter: Khaja Hussain 🗓 28 Oct 2026, 09:01 PM 👁 15
Watch on: 📘 Facebook
Share: 💬 WhatsApp 📘 Facebook 𝕏 Post
**ದೇವದುರ್ಗ–ಜಾಲಹಳ್ಳಿ | ಬ್ರೇಕಿಂಗ್ ನ್ಯೂಸ್**

# ದೇವರಗುಡ್ಡ ಸೀಮಾಂತರ ಪ್ರದೇಶದಲ್ಲಿ ಅಕ್ರಮ ಗಾಂಜಾ ಬೆಳೆ ಮೇಲೆ ಪೊಲೀಸ್ ದಾಳಿ: ₹11.94 ಲಕ್ಷ ಮೌಲ್ಯದ ಗಾಂಜಾ ವಶ

### 51 ಗಾಂಜಾ ಗಿಡಗಳು, 23 ಕೆ.ಜಿ. 890 ಗ್ರಾಂ ಹಸಿ ಗಾಂಜಾ ಜಪ್ತಿ; ಮದರಕಲ್ ಗ್ರಾಮದ ಸಾಬಣ್ಣ ಬಂಧನ

**ದೇವದುರ್ಗ, ಅ. 28:** ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದೇವರಗುಡ್ಡ ಸೀಮಾಂತರ ಪ್ರದೇಶದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ಸ್ಥಳದ ಮೇಲೆ ಪೊಲೀಸರು ದಾಳಿ ನಡೆಸಿ, ಒಟ್ಟು 51 ಗಾಂಜಾ ಗಿಡಗಳು ಹಾಗೂ 23 ಕೆ.ಜಿ. 890 ಗ್ರಾಂ ಹಸಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಜಪ್ತಿ ಮಾಡಲಾದ ಗಾಂಜಾದ ಅಂದಾಜು ಮೌಲ್ಯ ₹11,94,500 ಎಂದು ತಿಳಿದುಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮದರಕಲ್ ಗ್ರಾಮದ ಸಾಬಣ್ಣ (45), ತಂದೆ ಮಹಾದೇವಪ್ಪ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ರಾಯಚೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಅರುಣಾಂಕುಗಿರಿ, ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ. ಹರೀಶ್ ಹಾಗೂ ಲಿಂಗಸುಗೂರು ಪೊಲೀಸ್ ಉಪಾಧೀಕ್ಷಕ ಸುಲೇಮಾನ ತಹಸೀಲ್ದಾರ್ ಅವರ ಮಾರ್ಗದರ್ಶನದಲ್ಲಿ, ದೇವದುರ್ಗ ಗ್ರಾಮೀಣ ವೃತ್ತದ ಪೊಲೀಸ್ ಇನ್‌ಸ್ಪೆಕ್ಟರ್ ಪುಂಡಲೀಕ ಎಂ. ಪಟಾತರ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.

ಕಾರ್ಯಾಚರಣೆಯಲ್ಲಿ ಎಎಸ್‌ಐ ಸೈಯದ್ ಚಾಂದ್ ಪಾಶ ಹಾಗೂ ಪೊಲೀಸ್ ಸಿಬ್ಬಂದಿಗಳಾದ ನರಸಪ್ಪ, ಪ್ರಕಾಶ, ಉಮೇಶ, ಮುರಿಗೆಪ್ಪ, ಸಂತೋಷ, ರಂಗಪ್ಪ, ಶ್ರೀಶೈಲ, ಅಯ್ಯಪ್ಪ, ಅಕ್ಕಮ್ಮ ಮತ್ತು ಗುರುರಾಜ ಪಾಲ್ಗೊಂಡಿದ್ದರು.

ಈ ಸಂಬಂಧ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

**ವರದಿ: ಖಾಜಾ ಹುಸೇನ್ ಬಾಬಾ, ಪತ್ರಕರ್ತರು, ಜಾಲಹಳ್ಳಿ**
📲Get App