🔥 TRENDING ਮਦਰਸਾ ਕੌਂਸਲ ਦੀ ਸਥਾਪਨਾ: ਸਿੱਖਿਆ ਅਤੇ ਵਿਦਿ... एटा के अंतरराष्ट्रीय जैवलिन थ्रो स्टार... દિલ્હીમાં અંતિમ સંસ્કાર માટે પૂર્વ-બુક... बिहार के सारण में शादी की सारी रस्में... नव वर्ष समारोह में लड़के ने “नरेंद्र म... Bengal Speaker to Summon Rival Trinamo...
29 Nov 2026•
ગુજરાતી मराठी ਪੰਜਾਬੀ বাংলা
National

ಡಾ. ಶಿವಯ್ಯ ಸ್ವಾಮಿ ಅಭಿನಂದನಾ ಸಮಾರಂಭ ನಾಳೆ

✍️ Reporter: Basavaraj pujari 🗓 29 Nov 2026, 12:37 PM 👁 13
Share: 💬 WhatsApp 📘 Facebook 𝕏 Post

ಬೀದರ್: ಬೀದರ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‍ಗೆ ಭಾಜನರಾದ ಪ್ರಯುಕ್ತ ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಅವರಿಗೆ ಡಿಸೆಂಬರ್ 1 ರಂದು ಬೆಳಿಗ್ಗೆ 11

ಡಾ. ಶಿವಯ್ಯ ಸ್ವಾಮಿ ಅಭಿನಂದನಾ ಸಮಾರಂಭ ನಾಳೆ

ಬೀದರ್: ಬೀದರ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‍ಗೆ ಭಾಜನರಾದ ಪ್ರಯುಕ್ತ ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಅವರಿಗೆ ಡಿಸೆಂಬರ್ 1 ರಂದು ಬೆಳಿಗ್ಗೆ 11ಕ್ಕೆ ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಅಭಿನಂದನಾ ಸಮಾರಂಭ ಹಾಗೂ ಶಿವಪಥ ಅಭಿನಂದನಾ ಗ್ರಂಥದ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಕಾಶಿ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ದಿವ್ಯ ಸಾನಿಧ್ಯ, ಶ್ರೀಶೈಲದ ಅಕ್ಕ ಮಹಾದೇವಿ ಚೈತನ್ಯ ಪೀಠದ ಮಾತೆ ಕರುಣಾದೇವಿ, ಬೇಮಳಖೇಡ ಮಠದ ಡಾ. ರಾಜಶೇಖರ ಶಿವಾಚಾರ್ಯ, ಹುಡಗಿ ಮಠದ ವಿರೂಪಾಕ್ಷ ಶಿವಾಚಾರ್ಯ ನೇತೃತ್ವ, ಭಾತಂಬ್ರಾದ ಜಗದ್ಗುರು ಶಿವಯೋಗೀಶ್ವರ ಸ್ವಾಮೀಜಿ, ಭಾಲ್ಕಿಯ ಗುರುಬಸವ ಪಟ್ಟದ್ದೇವರು, ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ, ಕಮಠಾಣದ ರಾಚೋಟೇಶ್ವರ ಶಿವಾಚಾರ್ಯ, ಲಾಡಗೇರಿಯ ಗಂಗಾಧರ ಶಿವಾಚಾರ್ಯ, ಹಳ್ಳಿಖೇಡ(ಬಿ)ದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ, ಬಸವಕಲ್ಯಾಣದ ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ, ಚಾಂಬೋಳದ ಅಭಿನವ ರುದ್ರಮುನಿ ಶಿವಾಚಾರ್ಯ, ಕಿಟ್ಟಾದ ಸಿದ್ದೇಶ್ವರ ಶಿವಾಚಾರ್ಯ, ಬಿಲಗುಂದಿಯ ಚಿದಾನಂದ ಶಿವಾಚಾರ್ಯ, ಖಟಕಚಿಂಚೋಳಿಯ ಬಸವಲಿಂಗ ದೇವರು, ಗುರುದ್ವಾರದ ಹರಪಾಲಸಿಂಗ್, ಆಣದೂರಿನ ಭಂತೆ ಧಮ್ಮಾನಂದ ಮಹಾಥೆರೋ, ಮೆಥೋಡಿಸ್ಟ್ ಚರ್ಚ್ ಹಿರಿಯ ಪಾಸ್ಟರ್ ವಿಜಯಕುಮಾರ ಡೇವಿಡ್ ಬಳಗೇರಿ, ಮೌಲಾನಾ ಮಹಮ್ಮದ್ ಮೊಯಿನ್ಸ್ ಕಿರಮಾನಿ ಸಮ್ಮುಖ ವಹಿಸುವರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸುವರು. ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅಭಿನಂದನಾ ಗ್ರಂಥ ಬಿಡುಗಡೆ ಮಾಡುವರು. ಎನ್.ಎಸ್.ಎಸ್.ಕೆ. ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಅಧ್ಯಕ್ಷತೆ ವಹಿಸುವರು.
ಸಂಸದ ಸಾಗರ್ ಖಂಡ್ರೆ, ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಎಸ್. ಬಿರಾದಾರ, ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ.ಎ. ರಾಮಚಂದ್ರ ನಾಯ್ಕ್, ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಮುಖ್ಯ ಅತಿಥಿಗಳಾಗಿ, ಶಾಸಕರಾದ ರಹೀಂಖಾನ್, ಡಾ. ಶೈಲೇಂದ್ರ ಬೆಲ್ದಾಳೆ, ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ, ಮಾಜಿ ಶಾಸಕ ಸುಭಾಷ್ ಕಲ್ಲೂರ, ವಿಧಾನ ಪರಿಷತ್ ಮಾಜಿ ಸದಸ್ಯ ಅರವಿಂದಕುಮಾರ ಅರಳಿ, ಕೆಆರ್‍ಇ ಸಂಸ್ಥೆಯ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಕನ್ನಡ ಸೇನೆ ಕರ್ನಾಟಕದ ರಾಜ್ಯ ಅಧ್ಯಕ್ಷ ಕೆ.ಆರ್. ಕುಮಾರ್, ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಹಾಗೂ ಇತರ ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳುವರು.
ಸಾರ್ವಜನಿಕರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ನಾಗರಿಕ ಅಭಿನಂದನಾ ಸಮಿತಿಯ ಗೌರವಾಧ್ಯಕ್ಷ ಸುಭಾಷ್ ಕಲ್ಲೂರ, ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಪ್ರಧಾನ ಕಾರ್ಯದರ್ಶಿ ನಾಗಭೂಷಣ ಕಮಠಾಣೆ, ಪ್ರಮುಖರಾದ ಸಂತೋಷ್ ಪಾಟೀಲ ಅಯಾಸಪುರ, ವರದಯ್ಯ ಸ್ವಾಮಿ ಗಾದಗಿ, ಮಹೇಶ ಪಾಟೀಲ, ರೇಣುಕಾದೇವಿ ಮಳ್ಳಿ ಹಾಗೂ ರಮೇಶ್ ಬಿರಾದಾರ ಕೋರಿದ್ದಾರೆ.
📲Get App