🔥 TRENDING Hornbill Music Festival 2026 to Featur... Nagaland Police Announces 1,137 Consta... Manipuri Performance from Venice Bienn... Manipur CM reviews development challen... ANSAM Holds Fourth Legislative Assembl... Meghalaya Minister Sanbor Shullai Appl...
29 Nov 2026•
ગુજરાતી मराठी ਪੰਜਾਬੀ বাংলা

ದೇವದುರ್ಗದಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ - ಪ್ರಜಾ ಹಕ್ಕುಗಳ ಜಾಗೃತಿ ಸಭೆ, ಒಂದು ದಿನದ ಕಾರ್ಯಾಗಾರ - ಮಾನವ ಬಂಧುತ್ವ ವೇದಿಕೆಯೇ ಮುಖ್ಯ ಉದ್ದೇಶ ಎಂದ ವೆಂಕನಗೌಡ ನಾಯಕ ವಕೀಲರು

✍️ Reporter: Ningappa 🗓 29 Nov 2026, 12:49 PM 👁 17
Watch on: 📘 Facebook
Share: 💬 WhatsApp 📘 Facebook 𝕏 Post

ದೇವದುರ್ಗದಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ - ಮಾನವ ಬಂಧುತ್ವ ವೇದಿಕೆ ವತಿಯಿಂದ ಪ್ರಜಾ ಹಕ್ಕುಗಳ ಜಾಗೃತಿ ಸಭೆ ಹಾಗೂ ಒಂದು ದಿನದ ಕಾರ್ಯಾಗಾರ - ವೈಜ್ಞಾನಿಕ ಚಿಂತನೆ, ವೈಚಾರಿಕ ಬೋಧನೆ, ಸಂವಿಧಾನದ ಆಶಯಗಳನ್ನು ಎಲ್ಲರಿಗೂ ತಿಳಿಸುವುದೇ ಉದ್ದೇಶ - ಸಮಾನತೆ, ಸಹಬಾಳ್ವೆ, ಪರಸ್ಪರ ಗೌರವ, ಮಾನವೀಯ ಮೌಲ್ಯಗಳಿಗೆ ಕರೆ - ಬಿ ವೆಂಕನಗೌಡ ನಾಯಕ ವಕೀಲರು

ದೇವದುರ್ಗದಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ

ದೇವದುರ್ಗ: ಪಟ್ಟಣದ ಆಮಂತ್ರಣ ಹೋಟೆಲ್ ಸಭಾಂಗಣದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಪ್ರಜಾ ಹಕ್ಕುಗಳ ಜಾಗೃತಿ ಸಭೆ ಹಾಗೂ ಒಂದು ದಿನದ ಕಾರ್ಯಾಗಾರ ನಡೆಯಿತು.

ಕಾರ್ಯಾಗಾರ ಉದ್ದೇಶಿ ಮಾತನಾಡಿದ ಬಹುಜನ ಸಮಾಜವಾದಿ ಪಕ್ಷದ ಮುಖಂಡ ಹಾಗೂ ಲೋಕಸಭಾ ಕ್ಷೇತ್ರ ಸೇವಾ ಆಕಾಂಕ್ಷೆ ಬಿ ವೆಂಕನಗೌಡ ನಾಯಕ ವಕೀಲರು, ಸಮಾಜದಲ್ಲಿನ ಮೌಡ್ಯಾಚಾರ,ಅಸಮಾನತೆ, ಶೋಷಣೆ ಮುಕ್ತ ಪ್ರಮುಖ ಉದ್ದೇಶವೇ ಮಾನವ ಬಂಧುತ್ವ ವೇದಿಕೆಯ ಮುಖ್ಯ ಉದ್ದೇಶ ಎಂದು ಹೇಳಿದರು.

ಸಮಾನತೆ, ಸಹಬಾಳ್ವೆ ಮತ್ತು ಪರಸ್ಪರ ಗೌರವ ಮನೋಭಾವದಿಂದ ಮಾತ್ರ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದ ನೆಲೆಸಲು ಸಾಧ್ಯ. ಕೆಲಸ್ತರದ ಸಮುದಾಯಗಳು ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಸಮಾಜದಲ್ಲಿರುವ ಪ್ರತಿಯೊಬ್ಬರೂ ಮೂಢನಂಬಿಕೆಯಿಂದ ಹೊರಬಂದು ವೈಚಾರಿಕತೆ ಬೆಳೆಸಿಕೊಳ್ಳಬೇಕು. ಮೇಲು-ಕೀಳು ಎಂಬ ಅಸಮಾನತೆ ಮತ್ತು ಭೇದಭಾವ ತೊರೆದು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ರಾಜಪ್ಪ ಸಿರವಾರಕರ ಭೀಮ ಗೀತೆಗಳನ್ನು ಹಾಡಿದರು. ಹೈದರಾಲಿ ಪಲಕನಮರಡಿ ಸ್ವಾಗತಿಸಿ, ನಿರೂಪಿಸಿದರು.

ಮುಖಂಡ ಬೂದೆಪ್ಪ ಕ್ಯಾದಿಗೇರಾ, ಮನೇಶ ಗಾಣಧಾಳ, ಯಂಕೋಬ ನಾಯಕ, ಪಾರ್ವತಿ ಬಾಗೂರು, ರಮೇಶ ಗೋಸ್ಸಿ, ಮಹಾದೇವಪ್ಪ ಪರಂಪೂರ, ಬೂದೆಪ್ಪ ಗಬ್ಬೂರು, ಚಿನ್ನಪ್ಪ ಪಟ್ಟದಕಲ್ಲು, ರಾಮಮೂರ್ತಿ, ಶಿವರಾಜ ಕೋರಿ, ನಾಗಮ್ಮ, ಶೇಖಮ್ಮ, ಬಸವರಾಜ ಹುಲಿಗುಡ್ಡ, ಸಲಿಂ ಅರಕೇರಾ, ರವಿ ಮತ್ತು ಮಾನವ ಬಂಧುತ್ವ ವೇದಿಕೆ ಪದಾಧಿಕಾರಿಗಳು, ವಿವಿಧ ದಲಿತಪರ ಸಂಘಟನೆಯ ಮುಖಂಡರು, ಪ್ರಗತಿಪರರು, ಯುವಕರು ಭಾಗವಹಿಸಿದ್ದರು.
📲Get App