🔥 TRENDING PU ਵਿਚ ਵਿਦਿਆਰਥੀ ਨੇ ਕੀਤੀ ਖ਼ੁਦਕੁਸ਼ੀ Himachal Pradesh Sets Raw Water Price... Delhi Opens Former CM Kejriwal's Resid... Meghalaya High Court orders DGP to sus... एशिया का प्रसिद्ध सोनपुर मेला में इस ब... मुकुंदवाडी स्थानकावर रेल्वे धडक्यामुळे...
27 Nov 2026•
ગુજરાતી मराठी ਪੰਜਾਬੀ বাংলা
National

ಎಂ.ಡಿ. ಮೊಹಿಬೋದ್ದಿನ್, ಸಹಾನಾ ಬೇಗಂ ಅವರಿಗೆ ಕರ್ನಾಟಕ ಜನಸೇವಾ ರತ್ನ ಪ್ರಶಸ್ತಿ

✍️ Reporter: Basavaraj pujari 🗓 27 Nov 2026, 09:50 AM 👁 25
Share: 💬 WhatsApp 📘 Facebook 𝕏 Post

ಶಿಕ್ಷಣ ಕ್ಷೇತ್ರದ ಮೂಲಕ ಸಮಾಜ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ಜೈ ಕರ್ನಾಟಕ ರಕ್ಷಣಾ ವೇದಿಕೆಯಿಂದ ಗೌರವ ಬೀದರ್: ಶಿಕ್ಷಣ ಪ್ರೇಮಿಗಳಾಗಿ, ಶಿಕ್ಷಣವೇ ಸರ್ವಸ್ವ, ಶಿಕ್ಷಣದಿಂದಲೇ ಎಲ್ಲವೂ ಸಾಧ್ಯ ಎಂಬ ಆಶಯದೊಂದಿಗೆ ಶಿಕ್ಷ

ಎಂ.ಡಿ. ಮೊಹಿಬೋದ್ದಿನ್, ಸಹಾನಾ ಬೇಗಂ ಅವರಿಗೆ ಕರ್ನಾಟಕ ಜನಸೇವಾ ರತ್ನ ಪ್ರಶಸ್ತಿ
ಶಿಕ್ಷಣ ಕ್ಷೇತ್ರದ ಮೂಲಕ ಸಮಾಜ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ಜೈ ಕರ್ನಾಟಕ ರಕ್ಷಣಾ ವೇದಿಕೆಯಿಂದ ಗೌರವ

ಬೀದರ್: ಶಿಕ್ಷಣ ಪ್ರೇಮಿಗಳಾಗಿ, ಶಿಕ್ಷಣವೇ ಸರ್ವಸ್ವ, ಶಿಕ್ಷಣದಿಂದಲೇ ಎಲ್ಲವೂ ಸಾಧ್ಯ ಎಂಬ ಆಶಯದೊಂದಿಗೆ ಶಿಕ್ಷಕ ವೃತ್ತಿಯಲ್ಲಿ ತೊಡಗಿಸಿಕೊಂಡು ಸಮಾಜ ಸೇವೆ ಸಲ್ಲಿಸುತ್ತಿರುವ ಎಂ.ಡಿ. ಮೊಹಿಬೋದ್ದಿನ್ ಹಾಗೂ ಸಹಾನಾ ಬೇಗಂ ಅವರಿಗೆ ಜೈ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಕರ್ನಾಟಕ ಜನಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

71ನೇ ಕನ್ನಡ ರಾಜ್ಯೋತ್ಸವ ಹಾಗೂ ಯುವ ಸಮಾವೇಶದ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಇವರ ಶಿಕ್ಷಣ ಕ್ಷೇತ್ರದ ಸೇವೆಯನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮಕ್ಕೆ ಪೂಜ್ಯ ಹವಾ ಮಲ್ಲಿನಾಥ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ಬಂಡೆಪ್ಪ ಖಾಶಂಪುರ ಹಾಗೂ ನವಾಜ್ ಖಾನ್ ಉದ್ಘಾಟಕರಾಗಿ ಆಗಮಿಸಿದ್ದರು.

ಮುಖ್ಯ ಅತಿಥಿಗಳಾಗಿ ಸಂಘಟನೆಯ ಸಂಸ್ಥಾಪಕ ಅರುಣಕುಮಾರ ಪಾಟೀಲ, ರಾಜ್ಯಾಧ್ಯಕ್ಷ ಮಂಜುನಾಥ ಬಿ. ಹಾಗರಗಿ, ಜಿಲ್ಲಾಧ್ಯಕ್ಷ ರಮೇಶ್ ಮಾರ್ಜಾಪುರ, ಜಿಲ್ಲಾ ಗೌರವಾಧ್ಯಕ್ಷ ಸೈಯದ್ ನವಾಜ್, ಉಪಾಧ್ಯಕ್ಷ ಮೊಹಸಿನ್ ಪಟೇಲ್, ಪ್ರಧಾನ ಕಾರ್ಯದರ್ಶಿ ತುಕಾರಾಮ ಚಿದ್ರಿ, ಜಿಲ್ಲಾ ಸಂಯೋಜಕ ಶಿವರಾಜ ನೆಲವಾಳಕರ, ಕಾರ್ಮಿಕ ಘಟಕದ ಅಧ್ಯಕ್ಷ ಸಿಜಾವುದ್ದಿನ್, ಕಾರ್ಯಾಧ್ಯಕ್ಷ ಸ್ಯಾಮವೇಲ್ ಸಾಜನ್, ಕಾರ್ಮಿಕ ಉಪಾಧ್ಯಕ್ಷ ಗೌಸ್ ಖಾನ್, ಅಶೋಕ ಮೇತ್ರೆ, ಡಾ. ಉದಯ ಸಿಂಗ್ ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು, ಗಣ್ಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಶಿಕ್ಷಣ ಕ್ಷೇತ್ರದ ಮೂಲಕ ಸಮಾಜ ಸೇವೆ ಸಲ್ಲಿಸುತ್ತಿರುವ ಎಂ.ಡಿ. ಮೊಹಿಬೋದ್ದಿನ್ ಹಾಗೂ ಸಹಾನಾ ಬೇಗಂ ಅವರ ಕಾರ್ಯವನ್ನು ಶ್ಲಾಘಿಸಿ, ಪ್ರಶಸ್ತಿ ನೀಡಿ ಗೌರವಿಸಲಾಯಿತು.
📲Get App