🔥 TRENDING Delhi Metro Users Express Growing Safe... गोपालगंज में पुरानी पुल की घेराबंदी, व... Uttarakhand CM Appoints New Naib Tehsi... सड़क मरमती हेतु Delhi Air Quality Remains 'Poor' as Co... Musheer Khan's All-Round Performance L...
27 Nov 2026•
ગુજરાતી मराठी ਪੰਜਾਬੀ বাংলা
National

ಕುಂಬಾರವಾಡದಲ್ಲಿ ಶುದ್ಧೋಧನ ಮಹಾಮಾಯೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ ಉದ್ಘಾಟನೆ

✍️ Reporter: Basavaraj pujari 🗓 27 Nov 2026, 09:49 AM 👁 16
Share: 💬 WhatsApp 📘 Facebook 𝕏 Post

ಸರ್ವರಲ್ಲಿ ಸಮಾನತೆ ಕಾಣುವ ಧಮ್ಮ ನಮ್ಮೆಲ್ಲರಿಗೂ ದಾರಿದೀಪ- ಮಾರುತಿ ಬೌದ್ಧೆ ಬೀದರ್: ಸರ್ವರಲ್ಲಿಯೂ ಸಮಾನತೆ ಕಾಣುವ ಬೌದ್ಧ ಧಮ್ಮ ನಮ್ಮೆಲ್ಲರಿಗೂ ದಾರಿದೀಪವಾಗಿದೆ. ಗೌತಮ ಬುದ್ಧರ ತಂದೆ-ತಾಯಿ ಹೆಸರಿನಲ್ಲಿ ನೋಂದಣಿಯಾಗಿರು

ಕುಂಬಾರವಾಡದಲ್ಲಿ ಶುದ್ಧೋಧನ ಮಹಾಮಾಯೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ ಉದ್ಘಾಟನೆ
ಸರ್ವರಲ್ಲಿ ಸಮಾನತೆ ಕಾಣುವ ಧಮ್ಮ ನಮ್ಮೆಲ್ಲರಿಗೂ ದಾರಿದೀಪ- ಮಾರುತಿ ಬೌದ್ಧೆ

ಬೀದರ್: ಸರ್ವರಲ್ಲಿಯೂ ಸಮಾನತೆ ಕಾಣುವ ಬೌದ್ಧ ಧಮ್ಮ ನಮ್ಮೆಲ್ಲರಿಗೂ ದಾರಿದೀಪವಾಗಿದೆ. ಗೌತಮ ಬುದ್ಧರ ತಂದೆ-ತಾಯಿ ಹೆಸರಿನಲ್ಲಿ ನೋಂದಣಿಯಾಗಿರುವ ಶುದ್ಧೋಧನ ಮಹಾಮಾಯೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದ ಮೂಲಕ ಎಲ್ಲರೂ ಒಗ್ಗಟ್ಟಿನಿಂದ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ ಹೇಳಿದರು.

ನಗರದ ಕುಂಬಾರವಾಡದಲ್ಲಿ ನವೆಂಬರ್ 25ರಂದು ಸಂಜೆ ಆಯೋಜಿಸಿದ್ದ ಶುದ್ಧೋಧನ ಮಹಾಮಾಯೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಘವು ಜಾತಿ, ಧರ್ಮ ಹಾಗೂ ಭೇದಭಾವಗಳನ್ನು ಮೀರಿ ಸಮಾಜದ ಎಲ್ಲ ವರ್ಗದ ಜನರನ್ನು ಒಗ್ಗೂಡಿಸುವ ಕೆಲಸ ಮಾಡಬೇಕು. ಕುಂಬಾರವಾಡದ ಅಭಿವೃದ್ಧಿ ಕಾರ್ಯಗಳಿಗೆ ತಾವು ಸದಾ ಬೆನ್ನೆಲುಬಾಗಿ ನಿಲ್ಲುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಕು. ಕವಿತಾ ಕಾಳೇಕರ್ ಹಾಗೂ ಕು. ಸ್ಫೂರ್ತಿ ಕಾಳೇಕರ್ ಅವರು ಸಂವಿಧಾನದ ಪ್ರಸ್ತಾವನೆಯನ್ನು ವಾಚಿಸಿದರು. ನೈಟಿಂಗೇಲ್ ಪಬ್ಲಿಕ್ ಶಾಲೆ ವಿದ್ಯಾರ್ಥಗಳಾದ ಭೂಮಿಕಾ, ಶ್ರಾವಣಿ ಪ್ರಾರ್ಥನೆ ಗೀತೆ, ವೈಷ್ಣವು, ಸಂಸ್ಕೃತಿ ಸ್ವಾಗತ ಗೀತೆ ಸಂವಿಧಾನದ ಪೀಠಿಕೆ ನೃತ್ಯ ಸುಚೇತ, ಚೇತನ, ವಿರೇಶ, ವಿಶಾಲ, ಭೀಮರಾವ ತಂಡದವರು ಸಾಂಸ್ಕೃತಿಕ ನೃತ್ಯ ಪ್ರದರ್ಶನ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಿವಕುಮಾರ ಪಾಟೀಲ, ಬಾಬುರಾವ ಭಾಗೇನೋರ್, ಎಸ್. ರಾಜಕುಮಾರ, ಸೂರ್ಯಕಾಂತ ಸಾಧುರೆ, ಮಿಶ್ವಾಹ ಅಹ್ಮದ್, ತುಕಾರಾಮ ಕಡೆಮನಿ, ಭರತ ಕಾಂಬಳೆ, ಸದಾನಂದ ಕಾಳೇಕರ್ ಹಾಗೂ ಗೌತಮ ಶರ್ಮಾ ಮಾತನಾಡಿ, ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಸಮಾಜದ ಅಭಿವೃದ್ಧಿಗಾಗಿ ಸಂಘಟಿತ ಪ್ರಯತ್ನ ಅಗತ್ಯವೆಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ರಾಜಕೀಯ ಅಧಿಕಾರವು ಸಮಾಜದ ಅಭಿವೃದ್ಧಿಗೆ ಪ್ರಮುಖ ಸಾಧನವಾಗಿದೆ. ಸಂವಿಧಾನದ ಆಶಯ ಹಾಗೂ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಕುಂಬಾರವಾಡದ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.

ಯುವ ಮುಖಂಡ ನಾಗಶೇನ ಗಾಯಕವಾಡ ಮಾತನಾಡಿ, ಸಮಾಜ ಅನ್ಯಾಯಕ್ಕೆ ಒಳಗಾದಾಗ ಎಲ್ಲರೂ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು. ರಾಜಕೀಯ ಪಕ್ಷ, ಜಾತಿ ಹಾಗೂ ಧರ್ಮದ ಭೇದವಿಲ್ಲದೆ ಜಿಲ್ಲೆಯ ಜನರ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲಾ ಪಂಚಾಯಿತಿ ಗ್ರಾಮೀಣ ಮತ್ತು ಪಂಚಾಯತ್ ರಾಜ್ ಎಂಜಿನಿಯರಿAಗ್ ವಿಭಾಗದಲ್ಲಿ ಕಾರ್ಯನಿರ್ವಾಹಕ ಅಭಿಯಂತರರಾಗಿ ಸೇವೆ ಸಲ್ಲಿಸಿರುವ ಶ್ಯಾಮಸುಂದರ ಕಾಳೇಕರ್ ಹಾಗೂ ಅವರ ಪತ್ನಿಯನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ಶಿವಲಿಂಗಪ್ಪ ಕಡೆಮನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟಿಬೆಳೆಸಿದರೆ ಸಮಾಜದ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು.

ಸಾಹಿತಿ ಸುಬ್ಬಣ್ಣ ಕರಕನಳ್ಳಿ ಮಾತನಾಡಿ, ಮಹಿಳೆಯರಿಗೆ ಸಮಾನತೆ ಮತ್ತು ಗೌರವದ ಸ್ಥಾನ ಕಲ್ಪಿಸಿದ ಬೌದ್ಧ ಧಮ್ಮದ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಸಿದು ಬಂದ ಜೀವಿಗೆ ಆಹಾರ ನೀಡುವುದೇ ನಿಜವಾದ ಧರ್ಮ. ದೇವಸ್ಥಾನದಲ್ಲಿ ನೈವೇದ್ಯ ಅರ್ಪಿಸುವುದಕ್ಕಿಂತ ಹಸಿದ ವ್ಯಕ್ತಿಗೆ ಅನ್ನ ನೀಡುವುದು ಮಾನವೀಯತೆ ಮತ್ತು ನಿಜವಾದ ಧರ್ಮ ಪಾಲನೆಯಾಗಿದೆ ಎಂದು ಹೇಳಿದರು.

ಸಂಘದ ಉಪಾಧ್ಯಕ್ಷೆ ನಿಲ್ಲಮ್ಮ ಕರಂಜಿ, ಪ್ರಧಾನ ಕಾರ್ಯದರ್ಶಿ ಪ್ರಭಾವತಿ ಕಾಂಬಳೆ ಹಾಗೂ ಖಜಾಂಚಿ ಸಿದ್ದಪ್ಪ ಕಾಂಬಳೆ ಉಪಸ್ಥಿತರಿದ್ದರು. ಸುಹಾಸಿನಿ ಎಸ್. ಕಾಂಬಳೆ ಸ್ವಾಗತಿಸಿದರು. ನೈಟಿಂಗೇಲ್ ಶಾಲೆಯ ಸಹ ಶಿಕ್ಷಕ ದೀಪಕ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಸತೀಶ ಕಡೆಮನಿ, ಮೋಹನ ಕಾಂಬಳೆ, ಪಂಡಾರಿ ಸಕ್ಪಾಲ್, ಅವಿನಾಶ ಕಾಂಬಳೆ, ಸಂತೋಷ ಕಾಂಬಳೆ, ಶ್ರೀನಾಥ ಯರನಳ್ಳಿ, ಸಾಯಿನಾಥ ಕಾಳೇಕರ್, ಗಂಗಶೆಟ್ಟು ಅಲ್ಲಾಪುರ, ಮಲ್ಲಿಕಾರ್ಜುನ ಮೊಳಕೇರೆ, ಸಂತೋಷ ಬೆಲ್ದಾರ, ಸಂತೋಷ ಬೆನಕನಳ್ಳಿಕರ್, ಸುನಿಲ್ ವರ್ಮಾ, ನರಸಿಂಗ ನಾಗೂರೆ, ಪುಂಡಲಿಕ ಜಂಬಗಿಕರ್, ಕಾಶಿನಾಥ ಕರುನಾಯಕ, ಭರತ ವಾಡೇಕರ್, ಸುಧಾಕರ, ವಿಕ್ರಮ ಕಾಂಬಳೆ, ರಾಜಕುಮಾರ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.
📲Get App