🔥 TRENDING Two Former Gwalior Power Utility Offic... જનતા સાથે વિશ્વાસનો સેતુ વધુ મજબૂત બના... CII’s Market Facilitation Services cli... सोलापूर संभाजी ब्रिगेडने रंगभवन प्लाझा... एक महीने में बुजुर्ग महिला पर दूसरी बा... India-US Trade Deal Could Speed Up Due...
27 Nov 2026•
ગુજરાતી मराठी ਪੰਜਾਬੀ বাংলা
National

ಬೀದರ್ ತಾಲ್ಲೂಕಿನ ಮಂದಕನಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ ನಡೆಯಿತು

✍️ Reporter: Basavaraj pujari 🗓 27 Nov 2026, 08:14 AM 👁 25
Share: 💬 WhatsApp 📘 Facebook 𝕏 Post

ಮಂದಕನಳ್ಳಿ ಶಾಲೆಯಲ್ಲಿ ಸಂವಿಧಾನ ದಿನಾಚರಣೆ ಸಂವಿಧಾನ ಎಲ್ಲರ ಮನೆಯಲ್ಲಿ ಇರಲಿ ಬೀದರ್: ಸಂವಿಧಾನದ ಪ್ರತಿ ದೇಶದ ಪ್ರತಿಯೊಬ್ಬರ ಮನೆಯಲ್ಲೂ ಇರಬೇಕು ಎಂದು ಚಿಂತಕ ಶಾಮಸುಂದರ್ ಖಾನಾಪುರಕರ್ ಹೇಳಿದರು. ಬೀದರ್ ತಾಲ್ಲೂಕಿನ ಮಂದ

ಬೀದರ್ ತಾಲ್ಲೂಕಿನ ಮಂದಕನಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ ನಡೆಯಿತು

ಮಂದಕನಳ್ಳಿ ಶಾಲೆಯಲ್ಲಿ ಸಂವಿಧಾನ ದಿನಾಚರಣೆ
ಸಂವಿಧಾನ ಎಲ್ಲರ ಮನೆಯಲ್ಲಿ ಇರಲಿ

ಬೀದರ್: ಸಂವಿಧಾನದ ಪ್ರತಿ ದೇಶದ ಪ್ರತಿಯೊಬ್ಬರ ಮನೆಯಲ್ಲೂ ಇರಬೇಕು ಎಂದು ಚಿಂತಕ ಶಾಮಸುಂದರ್ ಖಾನಾಪುರಕರ್ ಹೇಳಿದರು.
ಬೀದರ್ ತಾಲ್ಲೂಕಿನ ಮಂದಕನಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂವಿಧಾನ ಸರ್ವರಿಗೂ ಸಮಾನ ಹಕ್ಕು ಹಾಗೂ ಕರ್ತವ್ಯ ನೀಡಿರುವ ಪವಿತ್ರ ಗ್ರಂಥವಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಪಾಂಡುರಂಗ ಬೆಲ್ದಾರ್ ಮಾತನಾಡಿ, ಡಾ. ಅಂಬೇಡ್ಕರ್ ಅವರು ರಚಿಸಿದ ದೇಶದ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠವಾಗಿದೆ. ಅದನ್ನು ಎಲ್ಲರೂ ಗೌರವಿಸಬೇಕು ಎಂದು ಹೇಳಿದರು.
ರಮೇಶ ಗೌಡ, ಸೋಮನಾಥ, ಜಗದೀಶಕುಮಾರ ನಿಂಬೂರೆ ಮಾತನಾಡಿದರು. ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಎಸ್‍ಡಿಎಂಸಿ ಅಧ್ಯಕ್ಷ ಅಹಮ್ಮದ್ ಪಾಶಾ, ಹೇಮಲತಾ ರೆಡ್ಡಿ, ದೀನಾ ಆ್ಯಂಟಿನ್, ದತ್ತಮ್ಮ, ಶಾಜಿಯಾ ತಮಕನಾಥ, ಬದರ್ ರಿಜ್ವಾನಾ, ಫಹಮಿದಾ ಬೇಗಂ, ಎಐ ಶಿಕ್ಷಕಿ ಪ್ರೀತಿ, ಶ್ರೀನಿವಾಸ್, ಆಯತುಲ್ಲಾ ಇದ್ದರು.
ಝಾಕೀರ್ ಹುಸೇನ್ ಸ್ವಾಗತಿಸಿದರು. ಶಾಂತಕುಮಾರ ಜೈದೊಡ್ಡಿ ನಿರೂಪಿಸಿದರು. ಬಾಬರ್ ಹುಸೇನ್ ವಂದಿಸಿದರು.
📲Get App